ಇತ್ತೀಚೆಗೆ ಮಹಾರಾಷ್ಟ್ರ ಮರಾಠಿ ಪುಂಡರು ನಡೆಸಿದ ಅಟ್ಟಹಾಸ, ದಬ್ಬಾಳಿಕೆಯನ್ನು ತೀವ್ರ ಖಂಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಮಾ.22ರಂದು ರಾಜ್ಯಾದ್ಯಂತ ಬಂದ್ಗೆ ಕರೆ ನೀಡಿದ್ದಾರೆ. ಬಂದ್ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದರೆ, ಇನ್ನೂ ಕೆಲವು ಸಂಘಟನೆಗಳು ನೈತಿಕ, ನೇರ ಬೆಂಬಲ ಕೊಟ್ಟಿಲ್ಲ ಎಂಬುದು ಗಮನಾರ್ಹ.
ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯಲಿರುವ ನಾಳಿನ ಕರ್ನಾಟಕ ಬಂದ್ಗೆ ಹಲವು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಆದರೆ, ರಾಜ್ಯ ಸರ್ಕಾರ ಮಾತ್ರ ಬಂದ್ಗೆ ಬೆಂಬಲ ಸೂಚಿಸಿಲ್ಲ. ಬದಲಿಗೆ ವಿರೋಧ ವ್ಯಕ್ತಪಡಿಸಿದೆ. ಪ್ರತಿಭಟನೆ ಮೂಲಕ ಬಂದ್ಗೆ ಕರೆ ಕೊಡುವ ಅವಶ್ಯಕತೆ ಇರಲಿಲ್ಲ. ತಮ್ಮ ಸಮಸ್ಯೆಗಳ ಕುರಿತಂತೆ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಬಹುದಿತ್ತು ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಕರ್ನಾಟಕ ಬಂದ್ ಹಿನ್ನೆಲೆ ರಾಜ್ಯದಲ್ಲಿ ಬಸ್, ಆಟೋ ಸಂಚಾರ, ಹೋಟೆಲ್, ಶಾಪಿಂಗ್ ಮಾಲ್ ತೆರೆದಿರುತ್ತವೆಯೇ? ಬಂದ್ ಕಾವೇರಿರುವ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆಯೇ ಎಂಬ ಹತ್ತು ಹಲವು ಪ್ರಶ್ನೆಗಳು ರಾಜ್ಯದ ಜನತೆಯನ್ನು ಬೆಂಬಿಡದೆ ಕಾಡುತ್ತಿದೆ. ಅಸಲಿಗೆ ಏನೇನು ಇರಲಿದೆ? ಇರವುದಿಲ್ಲ ಎಂಬುದರ ವಿವರ ಈ ಕೆಳಕಂಡಂತಿದೆ ಗಮನಿಸಿ.
- ಬಂದ್ಗೆ ರಾಜ್ಯ ಸರ್ಕಾರ ಬೆಂಬಲ ಸೂಚಿಸದ ಹಿನ್ನೆಲೆ ಬಸ್, ಆಟೋ ಸಂಚಾರ ಎಂದಿನಂತೆ ಇರಲಿದೆ. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ತೆರೆದಿರಲಿದೆ.
- ಖಾಸಗಿ ಶಾಲೆಗಳ ಒಕ್ಕೂಟ ಬಂದ್ಗೆ ನೈತಿಕ ಬೆಂಬಲ ಸೂಚಿಸಿದ್ದೇ ಆದರೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದಿಲ್ಲ ಎಂದು ತಿಳಿಸಿದೆ. ಪ್ರಸ್ತುತ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿದ್ದು, ರಜೆ ಕೊಡಲು ಮುಂದಾಗುವುದಿಲ್ಲ ಎಂದು ತಿಳಿಸಿದೆ.
- ಮಾ.22 ನಾಲ್ಕನೇ ಶನಿವಾರ ಆದ ಹಿನ್ನೆಲೆ ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್ಗಳು ಕೂಡ ರಜೆ ಇರಲಿವೆ.
ಏನಿರುತ್ತೆ? ಏನಿರಲ್ಲ?
- ಬಿಎಂಟಿಸಿ, ನಮ್ಮ ಮೆಟ್ರೋ, ಕೆಎಸ್ಆರ್ಟಿಸಿ, ಆಸ್ಪತ್ರೆ ವೈದ್ಯಕೀಯ ಸೇವೆಗಳು, ಉಪಹಾರ ಕ್ಯಾಂಟೀನ್, ಹೋಟೆಲ್ಗಳು, ಶಾಲಾ-ಕಾಲೇಜು, ರೆಸ್ಟೋರೆಂಟ್, ಪಬ್ಗಳು ತೆರದಿರಲಿವೆ.
- ಚಿತ್ರಮಂದಿರಗಳಲ್ಲಿ ಬೆಳಗ್ಗಿನ ಆಟ ನಡೆಯುವುದಿಲ್ಲ. ಮೊದಲ ಪ್ರದರ್ಶನ ಇರುವುದಿಲ್ಲ.
- ಓಲಾ, ಊಬರ್ ಆಟೋ, ಟ್ಯಾಕ್ಸಿ ಸೇವೆಗಳಲ್ಲಿ ವ್ಯತ್ಯಯ.

[…] Previous: ಮಾ.22ರಂದು ರಾಜ್ಯಾದ್ಯಂತ ಬಂದ್-ಏನಿರುತ… 0 0 votes Article Rating […]