ಚನ್ನರಾಯಪಟ್ಟಣ | ಮೇ 10 – ದೇಶದ ಏಳಿಗೆ, ಭಾರತೀಯ ಸೈನಿಕರ ವಿಜಯ ಹಾಗೂ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯಲ್ಲಿ ಭಾರತ ಗೆಲುವು ಸಾಧಿಸಲಿ ಹಾಗೂ ದೇಶದ ಸೈನಿಕರಿಗೆ ದೇವರ ಆಶೀರ್ವಾದ ದೊರೆತು, ಶಕ್ತಿ, ಧೈರ್ಯ ಹಾಗೂ ವಿಜಯ ಪ್ರಾಪ್ತಿ ಆಗಲಿ ಎಂಬ ಉದ್ದೇಶದಿಂದ ಚನ್ನರಾಯಪಟ್ಟಣದ 40 ಅಡಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ಭಕ್ತಿ ಮತ್ತು ರಾಷ್ಟ್ರಭಕ್ತಿಯ ಮಿಳಿತದ ಸುದರ್ಶನ ಯಾಗವನ್ನಿಂದು ಮಾಡಲಾಯಿತು.
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಕೆಂಪೇಗೌಡ ವೇದಿಕೆ, ಇಂಡಿಯನ್ ಕ್ರಿಕೆಟರ್, ಮಾಜಿ ಸೈನಿಕರ ಸಂಘ, ಆರ್.ಕೆ.ಆರ್ ಯುವ ವೇದಿಕೆ, ವಿನಾಯಕ ಕಾರು ಚಾಲಕರ ಮತ್ತು ಮಾಲೀಕರ ಸಂಘ ಸೇರಿದಂತೆ ಹಲವಾರು ಹಿಂದೂಪರ ಸಂಘಟನೆಗಳ ಸಂಯೋಜನೆಯಲ್ಲಿ ಏರ್ಪಡಿಸಿದ್ದು, ಯಾಗದ ಸಂದರ್ಭ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಕಾಳನಹಳ್ಳಿಯ ಆನಂದ್ ಮಾತನಾಡಿ,
“ಪಾಕಿಸ್ತಾನವು ಉಗ್ರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಭಾರತ ಈ ಬಾರಿ ತಕ್ಕ ಪಾಠ ಕಲಿಸುವ ಸಾಧ್ಯತೆ ಹೊಂದಿದೆ. ಭಾರತೀಯ ಸೇನೆಗೆ ಈ ಯುದ್ಧದಲ್ಲಿ ಜಯ ಸಿಗಲೆಂದು ನಾವು ಯಾಗವನ್ನು ನಡೆಸುತ್ತಿದ್ದೇವೆ,” ಎಂದು ಹೇಳಿದರು.
ಪರಿಸರ ಪ್ರೇಮಿ ಸಿ.ಎನ್. ಅಶೋಕ್ ಮಾತನಾಡಿ,
“ಯುದ್ಧದಲ್ಲಿ ಬಲಿಯಾಗಿರುವ ಭಾರತೀಯ ಸೈನಿಕರು ಹಾಗೂ ಪ್ರವಾಸಿಗರ ಆತ್ಮಕ್ಕೆ ಶಾಂತಿ ಸಿಗಲಿ ಎಂಬದು ನಮ್ಮ ಪ್ರಾರ್ಥನೆ,” ಎಂದು ತಮ್ಮ ಭಾವನೆ ವ್ಯಕ್ತಪಡಿಸಿದರು.
ಈ ಯಾಗದಲ್ಲಿ ಪ್ರಶಾಂತ್, ಶರತ್, ವೆಂಕಟೇಶ್, ನವೀನ್, ಮಧು, ಜಗದೀಶ್, ಜಯರಾಮ್, ಗೋಪಿ, ಧನು, ಅನಿಲ್, ಪ್ರವೀಣ್, ಅರ್ಜುನ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.
ವರದಿ- ಮಂಜುನಾಥ
