ಬೆಂಗಳೂರು, ನವೆಂಬರ್ 20, 2025: ದಕ್ಷಿಣ ಭಾರತದ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾದ ಸుమಧುರ ಗ್ರೂಪ್, ಪೂರ್ವ ಬೆಂಗಳೂರಿನಲ್ಲಿ 1.4 ಕಿ.ಮೀ ಉದ್ದದ ಮೊದಲ ಬಗೆಯ ಸುಸ್ಥಿರ ನಗರ ರಸ್ತೆಯನ್ನು ಸಾರ್ವಜನಿಕ ಬಳಕೆಗೆ ಇಂದು ಉದ್ಘಾಟಿಸಿತು. ಮಹದೇವಪುರ ಕ್ಷೇತ್ರದ ಮಾಜಿ ಶಾಸಕ ಅರವಿಂದ ಲಿಂಬಾವಳಿ, ಪ್ರಸ್ತುತ ಶಾಸಕಿ ಮಂಜುಳಾ ಲಿಂಬಾವಳಿ ಮತ್ತು ಸುಮಧುರ ಗ್ರೂಪ್ನ ಅಧ್ಯಕ್ಷ-ನಿರ್ದೇಶಕ ಮಧುಸೂದನ್ ಜಿ ಅವರ ಸಮ್ಮುಖದಲ್ಲಿ ರಸ್ತೆ ಉದ್ಘಾಟನೆ ನೆರವೇರಿತು.
ಸಿಇಆರ್ ಯೋಜನೆಯಡಿ ವೈಟ್ಫೀಲ್ಡ್–ಹೊಸಕೋಟೆ ಮುಖ್ಯರಸ್ತೆಯಿಂದ ದೊಡ್ಡಬ್ಬನಹಳ್ಳಿ ಕಡೆಗೆ 1.4 ಕಿ.ಮೀ. ರಸ್ತೆ ಸಂಪೂರ್ಣ ಮರುನಿರ್ಮಾಣಗೊಂಡಿದ್ದು, ಈ ಕೆಲಸವು ಸುತ್ತಮುತ್ತಲಿನ 5,000ಕ್ಕೂ ಹೆಚ್ಚು ಕುಟುಂಬಗಳ ಸಂಚಾರ, ಸುರಕ್ಷತೆ ಮತ್ತು ಪರಿಸರ ಗುಣಮಟ್ಟವನ್ನು ಸುಧಾರಿಸುವ ಮಹತ್ವದ ಹೆಜ್ಜೆಯಾಗಿದೆ. ಹಿಂದಿನ ಕಿರಿದಾದ ಮತ್ತು ದುಸ್ಥಿತಿಯಲ್ಲಿದ್ದ ರಸ್ತೆ ಈಗ ಅತ್ಯಾಧುನಿಕ ದ್ವಿಪಥ ಸಂಚಾರ ರಸ್ತೆಯಾಗಿ ಪರಿವರ್ತನೆಗೊಂಡಿದೆ.
ಮುಖ್ಯ ವೈಶಿಷ್ಟ್ಯಗಳು:
- ಮಳೆನೀರು ನೆಲದೊಳಗೆ ಸೇರಿಸುವ ವೈಜ್ಞಾನಿಕ ರೀಚಾರ್ಜ್ ಪಿಟ್ಗಳು
- ನಗರ ಪ್ರವಾಹ ತಡೆಯುವ ರೀಚಾರ್ಜ್ ಕಂದಕ ವ್ಯವಸ್ಥೆ
- ಆಧುನಿಕ ಒಳಚರಂಡಿ ಹಾಗೂ ಬುಧ್ಮಾನ ನೀರು ನಿರ್ವಹಣಾ ವ್ಯವಸ್ಥೆ
- ಸಮರ್ಪಕವಾಗಿ ಅಳವಡಿಸಿದ ಬೀದಿ ದೀಪಗಳು
- ಹಸಿರು ಪಟ್ಟಿಗಳು, ಅಲಂಕಾರಿಕ ಗಿಡಗಳು, ಕುಳಿತುಕೊಳ್ಳುವ ಬೆಂಚುಗಳು, ಕಸದ ತೊಟ್ಟಿಗಳು
- ಸೌಂದರ್ಯಯುತ ಬಣ್ಣ ಬಳಿಸಿದ ಗೋಡೆಗಳು
ಈ ಯೋಜನೆಯಿಂದ ರಸ್ತೆ ಪರಿಸರ ಸ್ನೇಹಿ, ಸುರಕ್ಷಿತ ಮತ್ತು ಸುಂದರ ನಗರ ಮಾರ್ಗವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ಕೂಡಾ ರಸ್ತೆ ನಿರ್ವಹಣೆಯನ್ನು ಸುಮಧುರ ಗ್ರೂಪ್ ವಹಿಸಿಕೊಳ್ಳಲಿದೆ.

ಸುಮಧುರ ಗ್ರೂಪ್ ಅಧ್ಯಕ್ಷ ಮಧುಸೂದನ್ ಜಿ ಅವರ ಹೇಳಿಕೆ
“ಸಮಾಜದ ಅಗತ್ಯತೆಗಳು ಮತ್ತು ಸುಸ್ಥಿರ ಬೆಳವಣಿಗೆ ನಮ್ಮ ಮೊದಲ ಆದ್ಯತೆ. ವೈಟ್ಫೀಲ್ಡ್ ಪ್ರದೇಶದ ರೂಪರೇಷೆ ಬದಲಿಸಲು ಎರಡು ದಶಕಗಳಿಂದ ನಾವು ಕೈಜೋಡಿಸಿದ್ದೇವೆ. ಸಾವಿರಾರು ಕುಟುಂಬಗಳ ದೈನಂದಿನ ತೊಂದರೆಯನ್ನು ಪರಿಹರಿಸುವುದು ಮತ್ತು ನಗರಕ್ಕೆ ಹೊಸ ಮಾನದಂಡದ ರಸ್ತೆ ನಿರ್ಮಿಸುವುದು ನಮ್ಮಿಗೆ ಅಪಾರ ಗರ್ವ ತಂದಿದೆ.”
ಅವರು ಮುಂದುವರೆದು,
“ಈ ರಸ್ತೆ ಕೇವಲ ಸಂಪರ್ಕ ಮಾರ್ಗವಲ್ಲ; ಇದು ಪರಿಸರ ಸ್ನೇಹಿ, ಬುದ್ಧಿವಂತ ಮತ್ತು ದೃಢ ಸಮುದಾಯಗಳ ನಿರ್ಮಾಣಕ್ಕೆ ನಮ್ಮ ಬದ್ಧತೆಯ ಸಂಕೇತ. ಸುಸ್ಥಿರ ಮತ್ತು ಸಮುದಾಯ-ಕೇಂದ್ರಿತ ನಗರಾಭಿವೃದ್ಧಿಗೆ ಇದು ಒಂದು ಮಾದರಿ,” ಎಂದು ತಿಳಿಸಿದರು.
ಸುಸ್ಥಿರತೆ, ಸುರಕ್ಷತೆ ಮತ್ತು ಸುಖಮಯ ಜೀವನವನ್ನು ಒದಗಿಸುವ ಮಾದರಿ ಯೋಜನೆಯಾಗಿ ಈ ರಸ್ತೆ ಈಗ ಪೂರ್ವ ಬೆಂಗಳೂರಿನ ಪ್ರಮುಖ ಗುರುತಾಗಿ ಪರಿಣಮಿಸಿದೆ.
ಇದನ್ನು ಓದಿ: ಬೆಂಗಳೂರು ಟೆಕ್ ಸಮ್ಮಿಟ್–2025: ಹೊಸ ಐಟಿ, ಬಾಹ್ಯಾಕಾಶ ಹಾಗೂ ಸ್ಟಾರ್ಟ್ಅಪ್ ನೀತಿಗಳಿಗೆ IESA ಶ್ಲಾಘನೆ
About Sumadhura Group
ಮೂರು ದಶಕಗಳ ಪರಂಪರೆ ಹೊಂದಿರುವ ಸುಮಧುರ ಗ್ರೂಪ್, ಪ್ರೈಮ್ ಲೊಕೇಶನ್ಗಳು, ಗುಣಮಟ್ಟ, ಸ್ಮಾರ್ಟ್ ವಿನ್ಯಾಸ ಮತ್ತು ವೇಳೆಗೆ ತಕ್ಕ ಸರಬರಾಜಿಗೆ ಹೆಸರುವಾಸಿ. ಬೆಂಗಳೂರು ಮತ್ತು ಹೈದರಾಬಾದ್ಗಳಲ್ಲಿ 54ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿರುವ ಕಂಪನಿ, 13 ಮಿಲಿಯನ್ ಚದರ ಅಡಿ ಅಭಿವೃದ್ಧಿ ಮತ್ತು 40 ಮಿಲಿಯನ್ ಚದರ ಅಡಿ ಯೋಜನೆಗಳೊಂದಿಗೆ ದಕ್ಷಿಣ ಭಾರತದ ಪ್ರಮುಖ ಬ್ರ್ಯಾಂಡ್ಗಳಲ್ಲೊಂದು. ನಿವಾಸಿ ಯೋಜನೆಗಳ ಹೊರತಾಗಿ ವಾಣಿಜ್ಯ, ಗೋದಾಮು, ಕೊ-ಲಿವಿಂಗ್ ಮತ್ತು ಬೇರೆ ರಿಯಲ್ ಎಸ್ಟೇಟ್ ವಲಯಗಳಿಗೂ ಸಂಸ್ಥೆ ಕಾಲಿಡಿದೆ.
