
Darshan: ದರ್ಶನ್ ತಮ್ಮನ್ನು ಅನ್ಫಾಲೊ ಮಾಡ್ತಿದ್ದಂತೆ ಸುಮಲತಾ ಅಂಬರೀಶ್ ಸಾಲು ಸಾಲು ಶಾಕಿಂಗ್ ಪೋಸ್ಟ್! ‘ಅಮ್ಮ’ ಹೇಳಿದ್ದೇನು?
ಸದ್ಯ ದರ್ಶನ್ ಇನ್ಸ್ಟಾಗ್ರಾಮ್ ಬಗ್ಗೆ ಚರ್ಚೆ ಜೋರಾಗಿದೆ. ನಟ ದರ್ಶನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಅವರ ಪತ್ನಿ ಅವಿವಾ ಅವರನ್ನು ಅನ್ಫಾಲೋ ಮಾಡಿದ್ದಾರೆ. ದರ್ಶನ್ ಪತ್ನಿಯನ್ನು ಇನ್ಸ್ಟಾದಲ್ಲಿ ಈ ಹಿಂದೆಯೇ ಫಾಲೋ ಮಾಡುತ್ತಿರಲಿಲ್ಲ.
ಇದು ತಿಳಿಯುತ್ತಿದ್ದಂತೆ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಮದರ್ ಇಂಡಿಯಾ ಅಂತ ಮನಸಾರೆ ಅಮ್ಮ ಅಂತಿದ್ದ ಸುಮಲತಾ ಅಂಬರೀಶ್ ಅವರನ್ನು ದರ್ಶನ್ ಯಾಕೆ ಅನ್ಫಾಲೋ ಮಾಡಿದ್ರು? ತಮ್ಮ ಅಂತ ಓಡಾಡ್ತಿದ್ದ ಅಭಿಷೇಕ್ನನ್ನೂ ಅನ್ಫಾಲೋ ಮಾಡಿದ್ಯಾಕೆ ಅಂತ ಚರ್ಚೆ ಶುರುವಾಗಿದೆ
ಇದರ ಬೆನ್ನಲ್ಲೇ ಸುಮಲತಾ ಅಂಬರೀಶ್ ಅವರು ಮೂರು ಇನ್ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿರುವುದು ಇನ್ನಷ್ಟು ಅಚ್ಚರಿ ಮೂಡಿಸಿದೆ. ಸತ್ಯವನ್ನು ತಿರುಚುವವರಿಗೆ, ಜನರನ್ನು ನೋಯಿಸುವವರಿಗೆ, ಆರೋಪದ ಹೊಣೆ ಹೊರಿಸುವವರಿಗೆ, ಕೊನೆಗೂ ತಮ್ಮನ್ನು ತಾವು ಹೀರೋ ಎಂದು ತೋರಿಸಿಕೊಳ್ಳುವವರಿಗೆ ಆಸ್ಕರ್ ಬೆಸ್ಟ್ ಆಯಕ್ಟರ್ ಅವಾರ್ಡ್ ಹೋಗುತ್ತದೆ ಎಂದು ಅವರು ಬರೆದಿದ್ದಾರೆ.
ಸುಮಲತಾ ಅವರು ಇನ್ನೊಂದು ಚಂದದ ಪೋಸ್ಟ್ ಕೂಡಾ ಶೇರ್ ಮಾಡಿದ್ದಾರೆ. ಅದರಲ್ಲಿ ಈ ಜಗತ್ತಿನಲ್ಲಿ ತುಂಬಾ ಸುಂದರವಾದ ಸಂಗತಿಗಳಿವೆ. ನಿಮ್ಮ ಮನಸು, ಆತ್ಮ ಆ ಸುಂದರ ಸಂಗತಿಗಳಲ್ಲಿ ಒಂದಾಗಿರಲಿ ಎಂದು ಬರೆದಿದ್ದಾರೆ. ಇದರಲ್ಲಿ ಹಕ್ಕಿಯೊಂದು ಮಕರಂದ ಹೀರುವ ವಿಡಿಯೋ ಇದೆ.
ಸುಮಲತಾ ಅವರು ಇನ್ನೊಂದು ಲೈಟ್ ಬೆಳಗುವ ಫೋಟೋ ಕೂಡಾ ಶೇರ್ ಮಾಡಿದ್ದಾರೆ. ಸರಿ ತಪ್ಪುಗಳ ನಡುವೆ ಕರುಣೆ ತೋರಿಸುವುದು ತುಂಬಾ ಮುಖ್ಯವಾಗಿದೆ. ತುಂಬಾ ಸಲ ಮಾತನಾಡುವಾ ಬ್ರಿಲಿಯೆಂಟ್ ಮೈಂಡ್ ಅಲ್ಲ ಕೇಳಿಸಿಕೊಳ್ಳುವ ವಿಶೇಷವಾದ ಮನಸು ಮುಖ್ಯ ಎಂದು ಪೋಸ್ಟ್ ಹಾಕಿದ್ದಾರೆ.
ದರ್ಶನ್ ಮದರ್ ಇಂಡಿಯಾ ಎಂದು ಕರೆಯುವ ಸುಮಲತಾ ಅಂಬರೀಶ್ ಅವರನ್ನು ಅನ್ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದು ಅಚ್ಚರಿ ಮೂಡಿಸಿದೆ. ಸದ್ಯ ಅವರ ಪೋಸ್ಟ್ ವೈರಲ್ ಆಗಿದೆ.