ಹಾಸನ: ಅರಕಲಗೂಡು ತಾಲ್ಲೂಕಿನ ನೆಲಬಳ್ಳಿ ಗ್ರಾಮದಲ್ಲಿ ದೈತ್ಯಾಕಾರದ ಒಂಟಿಸಲಗವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಸುಮಾರು 25 ವರ್ಷದ ಗಂಡಾನೆ ರೈತರ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಅದು ವಿದ್ಯುತ್ ಶಾಕ್ ಅಥವಾ ಗುಂಡೇಟಿನಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳೀಯ ರೈತರು ಬೆಳಗ್ಗೆ ತಮ್ಮ ಜಮೀನಿಗೆ ತೆರಳಿದಾಗ ಆನೆ ಶವ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಕ್ಷಣವೇ ಅರಣ್ಯ ಇಲಾಖೆಯ ಎಮರ್ಜೆನ್ಸಿ ರೆಸ್ಪೋನ್ಸ್ ತಂಡ (ಇಟಿಎಫ್) ದೌಡಾಯಿಸಿದ್ದು, ಪರಿಶೀಲನೆ ನಡೆಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡಾನೆ ಸಾವು ಹೇಗೆ ನಡೆದಿದೆ ಎಂಬುದು ಶೀಘ್ರದಲ್ಲಿಯೇ ಬಹಿರಂಗವಾಗುವ ನಿರೀಕ್ಷೆಯಿದೆ.
ಒಂದೆಡೆ ಕಾಡಾನೆಯಿಂದ ಮನಷ್ಯನಾ ಸಾವು-ಮತ್ತೊಂದೆಡೆ ಆನೆಗಳ ಸಾವು. ಮನುಷ್ಯ ಪ್ರಾಣಿಯ ವಾಸಸ್ಥಳವನ್ನು ಕದಿಯುತ್ತಾ ಹೋದಂತೆ, ಪ್ರಾಣಿಗಳು ಮನುಷ್ಯನಾ ಆಕ್ರಮಿತ ಸ್ಥಳವನ್ನು ಆವರಿಸುತ್ತದೆ. ಮಾನವ – ಪ್ರಾಣಿಗಳ ನಡುವಿನ ಸಂಘರ್ಷ ಆಹಾರಕ್ಕಾಗಿಯೇ….! ಆದರೆ ದುರಾಸೆ ಮನುಷ್ಯ ಇನ್ನಷ್ಟು ಬೇಕೆನ್ನುತ್ತ ಪಕೃತಿಯನ್ನು ದೋಚುತ್ತಾನೆ. ಇತ್ತಾ ಪ್ರಾಣಿಗಳು ಆಹಾರಕ್ಕಾಗಿ ಕಾಡು – ಊರೆನ್ನದೆ ಅಲೆಯುತ್ತದೆ. ಇಲ್ಲಿ ಇಬ್ಬರ ಹೋರಾಟ ಇಬ್ಬರ ಪ್ರಾಣಕ್ಕೂ ಕುತ್ತು ತರುತ್ತಿರುವುದು ನಿಜಕ್ಕೂ ಶೋಚನೀಯವೇ ಸರಿ.



