ಲಕ್ಕುಂಡಿ: ಮನೆ ಕಟ್ಟಲೆಂದು ಪಾಯ ಅಗೆಯುವ ವೇಳೆ ನಿಧಿ ಸಿಕ್ಕ ಘಟನೆ ಲಕ್ಕುಂಡಿಯ ನಡೆದಿದೆ. ಸ್ಥಳಕ್ಕೆ ಡಿಸಿ ಹಾಗೂ ಎಸ್ಪಿ ಸ್ಥಳಕ್ಕೆ ದೌಡಯಿಸಿದ್ದಾರೆ. ತಾಮ್ರದ ತಂಬಿಗೆಯೊಳಗೆ ಅರ್ಧ ಕೆಜಿಯಷ್ಟು ಚಿನ್ನ ಪತ್ತೆಯಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕರಿಗಳ ನಿರ್ದೇಶನದಂತೆ ತಾಮ್ರದ ತಂಬಿಗೆಯನ್ನು ಒಡೆದು, ಪರಿಶೀಲನೆ ನಡೆಸಲಾಗಿದೆ.
ಕಸ್ತೂರಿ ಹಾಗೂ ಪ್ರಜ್ವಲ್ ಎಂಬ ತಾಯಿ ಮಗ ಇಬ್ಬರು ತಮ್ಮ ಮನೆಯನ್ನು ಕಟ್ಟಲು ಪಾಯ ತೆಗೆಯುವಾಗ ನಿಧಿ ಪತ್ತೆಯಾಗಿದೆ. ಪ್ರಾಚೀನ ಕಾಲದ ಕಿವಿಯೊಳೆ, ಉಂಗುರ, ಹಾರಗಳು, ನಾಗನಿಗೆ ಸಂಬಂಧ ಪಟ್ಟ ಚಿನ್ನ ಪತ್ತೆಯಾಗಿದೆ.
ಪಂಚನಾಮ ಮಾಡಿದ್ದು, ಟ್ರೆಸರ್ಗೆ ಡೆಪೊಸಿಟ್ ಮಾಡಿದ ನಂತರ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಮತ್ತೇ ಸರ್ಕಾರಕ್ಕೆ ಮಾಹಿತಿಯನ್ನು ಸಲ್ಲಿಸಲಾಗುತ್ತದೆ. ಮುಂದೆ ಸರ್ಕಾರದ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಎಂದರು.
ಇನ್ನೂ ಸಿಕ್ಕ ನಿಧಿಯನ್ನು ತಂದುಕೊಟ್ಟ ಕುಟುಂಬಕ್ಕೆ ಏನು ಸಿಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Sariyad, clean aagi kano anth photo , video haaki Admin