ಚಾಮರಾಜನಗರ;- ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳಾಗಿ ಟಿ.ಜವರೇಗೌಡ ರವರು ಇಂದು ಅಧಿಕಾರ ವಹಿಸಿಕೊಂಡರು.
ಈ ಹಿಂದೆ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಗೀತಾ ಹುಡೇದ ರವರಿಂದ ತೆರವಾದ ಸ್ಥಾನಕ್ಕೆ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟಿ.ಜವರೇಗೌಡರವರನ್ನು ಸಾರ್ವಜನಿಕರ ಆಡಳಿತಾತ್ಮಕ ಹಿತದೃಷ್ಠಿಯಿಂದ ಸರ್ಕಾರ ವರ್ಗಾವಣೆ ಮಾಡಲಾಗಿದೆ. ಟಿ.ಜವರೇಗೌಡ ರವರು ರಾಮನಗರ, ಚಿತ್ರದುರ್ಗ, ಮೈಸೂರು ಹಾಗೂ ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಈ ಸಂದರ್ಭದಲ್ಲಿ “ವಿಚಾರ ವಿಸ್ತಾರ” ಜೊತೆ ಮಾತನಾಡಿದ ಇವರು ಚಾಮರಾಜನಗರ ಜಿಲ್ಲೆಯ ಅಭಿವೃದ್ದಿಗೆ ಮಾನ್ಯ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ನಂತರ ಪತ್ರಕರ್ತ ಜಿ. ಬಂಗಾರು ಶಾಲು ಹಾಗೂ ಪುಷ್ಪ ಮಾಲಿಕೆ ಹಾಕಿ ಅಭಿನಂದಿಸಿದರು.

-ಶ್ರೀ ಸಾಯಿ ಎಸ್ ಮಂಜು
