ಟಿ.ನರಸೀಪುರ : ಜ.10 ಶನಿವಾರ ಬೆಳಿಗ್ಗೆ 10.30 ಕ್ಕೆ ಚಾಮರಾಜನಗರ ಜಿಲ್ಲೆ ನಗರದಲ್ಲಿನ ಡಾ.ರಾಜಕುಮಾರ್ ಸಭಾಂಗಣದಲ್ಲಿ ವಿಶ್ವ ರೈತ ದಿನಾಚರಣೆ ಹಾಗೂ ಅನ್ನದಾತ ಸಂಸ್ಮರಣ ಗ್ರಂಥ ಬಿಡುಗಡೆ ಸಮಾರಂಭ ಏರ್ಪಡಿಸಿದ್ದು ರೈತರು,ಮಹಿಳೆಯರು,ಯುವ ಸಮೂಹ ಸೇರಿದಂತೆ ನಾಗರೀಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮನವಿ ಮಾಡಿದರು.
ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಸಮಾವೇಶದಲ್ಲಿ ರೈತರ ಹಕ್ಕುಗಳನ್ನು ನಿರ್ಣಯಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಿ, ರೈತರ ಸಮಸ್ಯೆ ಪರಿಹರಿಸುವಂತೆ ಓತ್ತಾಯಿಸಲಾಗುವುದೆಂದರು.
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನೇ ಅನುಸರಿಸುತ್ತಿವೆಯೇ ಹೊರತು ರೈತರಿಗೆ ಅನುಕೂಲವಾಗುವ ಯಾವುದೇ ರೈತಪರ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲಾ ಎಂದು ಆಕ್ಷೇಪ ವ್ಯಕ್ತಪಡಿಸಿ ರೈತ ದೇಶದ ಜೀವನಾಡಿ ಎನ್ನುವ ರಾಜಕಾರಣಿಗಳು ಕೇವರ ಪ್ರಚಾರದ ಗಿಮ್ಮಿಕ್ ಗಾಗಿ ಮಾತ್ರ ಬಳಸಿಕೊಳ್ಳುತ್ತಿರುವುದು ನಾಚಿಕೆಗೇಡಿತನದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದು: ಟಿ.ನರಸೀಪುರ-ಮೂಗೂರು ತ್ರಿಪುರ ಸುಂದರಿ ಜಾತ್ರೆ- ಭಕ್ತರಿಗೆ ಐದು ದಿನವು ಅನ್ನದಾನ
ದಿನವಿಡೀ ನಡೆಯುವ ಈ ಸಮಾವೇಶದಲ್ಲಿ ಕೃಷಿಗೆ ಸಂಬಂಧಿಸಿದ ವಿಚಾರಗೋಷ್ಠಿಗಳು, ವಿಶೇಷ ಉಪನ್ಯಾಸಗಳು ಹಾಗೂ ಸಂವಾದಗಳು ನಡೆಯಲಿವೆ ಎಂದರು. ಕೃಷಿ ಉತ್ಪಾದನೆ–ಮಾರಾಟ, ರೈತರ ಆರ್ಥಿಕ ಅಭಿವೃದ್ಧಿ, ಬೆಳೆಗಳಿಗೆ ಎದುರಾಗುವ ಸಮಸ್ಯೆಗಳು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ–ಪರಿಹಾರಗಳ ಕುರಿತು ಚಿಂತನ–ಮಂಥನ ನಡೆಯಲಿದೆ ಎಂದು ವಿವರಿಸಿದರು.
ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿ ಸಮಾವೇಶದಲ್ಲಿ ನಾಡಿನ ಮಠಾಧೀಶರು, ಆಡಳಿತ ಹಾಗೂ ವಿರೋಧ ಪಕ್ಷಗಳ ಚುನಾಯಿತ ಪ್ರತಿನಿಧಿಗಳು, ರಾಜ್ಯ ಹಾಗೂ ಅಂತರರಾಜ್ಯಗಳ ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳು ಮತ್ತು ರೈತ ಮುಖಂಡರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಗೌರವ ಅದ್ಯಕ್ಷರಾದ ಹಂಡುವಿನಹಳ್ಳಿ ಎಚ್.ಎಸ್.ರಾಜು,ಜಿಲ್ಲಾ ಕಾರ್ಯದರ್ಶಿ ಮಲಿಯೂರು ಮಹೇಂದ್ರ, ತಾಲ್ಲೂಕು ಅದ್ಯಕ್ಷರಾದ ಸುಜ್ಜಲೂರು ಜಯಸ್ವಾಮಿ,ಶ್ಯಾನಂಡ್ರಹಳ್ಳಿ ಮಲ್ಲು,ಚಾಮರಾಜನಗರ ಜಿಲ್ಲೆ ಮುಖಡಹಳ್ಳಿ ಗ್ರಾಮದ ರಾಜು,ಮಂಜು,ಪುಟ್ಟಮಾದೇಗೌಡ,ಮಹೇಶ್ ಇದ್ದರು.
ಇಂದು ರಾಜ್ಯ ಸರ್ಕಾರದ ಗ್ಯಾರೆಂಟಿಗಳು ಇಲ್ಲಿಯವರೆವಿಗೂ ಚಾಲ್ತಿಯಲ್ಲಿದೆ ಎಂದರೆ ರಾಜ್ಯದಲ್ಲಿ ಕಬ್ಬು ಬೆಳೆಗಾರ ರೈತರಿಂದ ಎಂಬುದನ್ನು ಮರೆಯಬಾರದೆಂದು ತಿಳಿಸಿ ಸಮಾವೇಶದಲ್ಲಿ ಹತ್ತು ಹಲವಾರು ವಿಷಯಗಳನ್ನು ರೈತರು ಹಾಗೂ ಸಾರ್ವಜನಿಕರ ಮುಂದೆಯೇ ಇಡಲಾಗುವುದು.

– ಹಳ್ಳಿಕೆರೆಹುಂಡಿ ಭಾಗ್ಯರಾಜ್,ರಾಜ್ಯಾದ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ.
- ಎಂ.ನಾಗೇಂದ್ರಕುಮಾರ್
