ಟಿ.ನರಸೀಪುರ : ಪಟ್ಟಣದ ಸುಪ್ರಸಿದ್ಧ ಶ್ರೀ ಮಹಾಲಕ್ಷ್ಮಿ ಸಮೇತ ಶ್ರೀಗುಂಜನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
5 ಗ್ರಾಮದ ಯಜಮಾನರು, ದೇವಾಲಯದ ಪ್ರಭಾರ ಪಾರುಪತ್ತೆಗಾರ ದೀಪು,ಪುರಸಭೆ ಅಧ್ಯಕ್ಷೆ ವಸಂತ ಶ್ರೀ ಕಂಠ,ಮಾಜಿ ಎಂ. ಎಲ್.ಸಿ. ರಮೇಶ್,ಪುರಸಭೆ ಮುಖ್ಯಾಧಿಕಾರಿ ವಸಂತಕುಮಾರಿ ಸಮ್ಮುಖದಲ್ಲಿ ತಹಸೀಲ್ದಾರ್ ಟಿ ಜಿ ಸುರೇಶ್ ಆಚಾರ್ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪುರಸಭಾ ಸದಸ್ಯರುಗಳು ಭಾಗಿಯಾದರು.
ಸಡಗರ,ಸಂಭ್ರಮ ಹರ್ಷೋದ್ಗರದಿಂದ ರಥ ಎಳೆದ ಸಾವಿರಾರು ಭಕ್ತರು ಇಷ್ಟಾರ್ಥ ನೆರವೇರಿಕೆಗಾಗಿ ರಥಕ್ಕೆ ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು.
ದಾಸೋಹ ಭವನದಲ್ಲಿ ಪ್ರತಿನಿತ್ಯ 300 ರಿಂದ 400 ಜನಕ್ಕೆ ದಾಸೋಹ ನಡಿಯುತ್ತಿತ್ತು ಈ ದಿನ ವಿಶೇಷವಾಗಿ 4000 ಜನಕ್ಕೆ ದಾಸೋಹ ಭವನದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಅಲ್ಲಲ್ಲಿ ದಾನಿಗಳಿಂದ ನೀರು ಮಜ್ಜಿಗೆ, ಪಾನಕ ಬಾತು ಮೊಸರನ್ನ ಸಾರ್ವಜನಿಕರಿಗೆ ವಿತರಣೆ ಮಾಡುವುದರೊಂದಿಗೆ ಬಿರು ಬೇಸಿಗೆಯಲ್ಲಿ ದಣಿವರಿದಿದ್ದ ಭಕ್ತಾದಿಗಳಿಗೆ ತಂಪು ಮಾಡಿ ಧನ್ಯತಾಭಾವ ಮೆರೆದರು.
ಶ್ರೀ ಮಹಾಲಕ್ಷ್ಮಿ, ಶ್ರೀಗುಂಜನರಸಿಂಹಸ್ವಾಮಿ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮಂಟಪ ಪೂಜೆ ಮಾಡಿ ಮೆರವಣಿಗೆ ಮಾಡಲಾಯಿತು. ಯಾವುದೇ ಅವಗಡ ಆಗದೆ ಸುಲಲಿತವಾಗಿ ತೇರಿನ ಬೀದಿ ತಲುಪಿತು.
ವರದಿ- ಎಂ.ನಾಗೇಂದ್ರಕುಮಾರ್
ಟಿ.ನರಸೀಪುರ
