ಟಿ.ನರಸೀಪುರ : ಬಹುತೇಕ ಚೀಫ್ ಆಫೀಸರ್ ಸೇರಿ ಎಲ್ಲಾ ಹಂತದ ಸಂಬಂಧ ಪಟ್ಟ ಅಧಿಕಾರಿಗಳು 40 ಕೋಟಿಯಷ್ಟು ತೆರಿಗೆ ವಂಚನೆ ಆಗುತ್ತಿದೆ ಎಂದು ತಿಳಿದಿದ್ದರೂ ಹೊರಗಿನ ವ್ಯಕ್ತಿ ಬಹಿರಂಗ ಪಡಿಸೋ ತನಕ ಸುಮ್ಮನಿರೋದು ಅವರು ಪರೋಕ್ಷವಾಗಿ ಈ ಪ್ರಕರಣದಲ್ಲಿ ಶಾಮೀಲಾಗಿರಬಹುದು ಅಥವಾ ಇತರೆ ವಿಚಾರದಲ್ಲಿ ಮಾಡಿರುವ ಭ್ರಷ್ಟಾಚಾರವನ್ನು ಮುಂದಿಟ್ಟು ಅವರನ್ನು ಈ ವಿಚಾರದಲ್ಲಿ ಯಾವುದೇ ಕ್ರಮಕೈಗೊಳ್ಳದ ರೀತಿಯಲ್ಲಿ ಮಾಡಿರಬಹುದೆಂದು ದಸಂಸ ಬಣರಹಿತ ಜಿಲ್ಲಾ ಸಂಚಾಲಕ ಸಿ.ಉಮಾ ಮಹದೇವ್ ಗಂಭೀರವಾಗಿ ಆರೋಪಿಸಿದ್ದಾರೆ.
ತಹಶಿಲ್ದಾರ್ ಟಿ.ಜಿ.ಸುರೇಶ್ ಆಚಾರ್ ರವರ ಮುಖೇನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಪುರಸಭೆಯಲ್ಲಿ ಹಲವು ವರ್ಷಗಳಿಂದ ತೆರಿಗೆ ವಂಚನೆ ನಡೆದಿದ್ದು ಸುಮಾರು 30 ರಿಂದ 40 ಕೋಟಿ ವಂಚನೆ ಆಗಿದೆ ಎಂದು ಪುರಸಭೆ ಮುಖ್ಯಧಿಕಾರಿಗಳೇ ಹೇಳಿದ್ದಾರೆ ಮತ್ತು ಸದರಿ ಮುಖ್ಯಧಿಕಾರಿಗಳೇ ಗುಂಟೆ ಲೆಕ್ಕದಲ್ಲಿ ಖಾತೆ ಮಾಡಿಕೊಟ್ಟು ತೆರಿಗೆ ವಂಚನೆ ಮಾಡಿದ್ದಾರೆ ಅನ್ನೋ ಆರೋಪವು ಇದ್ದು ಸರ್ಕಾರ ನ್ಯಾಯಾಂಗ ತನಿಖೆಗೆ ಅಥವಾ ಲೋಕಾಯುಕ್ತ ತನಿಖೆ ವಹಿಸಿಸಬೇಕೆಂದು ದಸಂಸ ಬಣರಹಿತ ಜಿಲ್ಲಾ ಸಂಚಾಲಕ ಸಿ.ಉಮಾಮಹದೇವ್ ಸರ್ಕಾರಕ್ಕೆ ಮನವಿ ಮಾಡಿದರು.
ಈ ಹಿಂದೆ ಮುಖ್ಯಾಧಿಕಾರಿಗಳಾಗಿದ್ದ ಅರ್. ಅಶೋಕ್ ರವರು ಸಹ ಭ್ರಷ್ಟಾಚಾರ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು,ಪೌರಾಡಳಿತ ಸಚಿವರು ಸೇರಿದಂತೆ ಸಂಬಂಧಿಸಿದ ಇಲಾಖೆಯ ಹಲವು ಮೇಲಾಧಿಕಾರಿಗಳು ಹಾಗೂ ಸಚಿವರಿಗೆ ದೂರು ಸಲ್ಲಿಸಿದ್ದೇವೆ ಆದ್ದರಿಂದ ಈ ಎಲ್ಲಾ ಆರೋಪಗಳನ್ನು ಸೇರಿಸಿ ಸರ್ಕಾರ ನ್ಯಾಯಾಂಗ ತನಿಖೆಗೆ ಅಥವಾ ಲೋಕಾಯುಕ್ತ ತನಿಖೆ ವಹಿಸಿಸಬೇಕೆಂದು ಮನವಿ ಮಾಡಿದರು.

ಮುಂದುವರಿದು ಮಾತನಾಡಿ ಟಿ.ನರಸೀಪುರ ಪುರಸಭೆಯಲ್ಲಿ ಕೆನರಾ ಬ್ಯಾಂಕ್ ಸೀಲ್ ನಕಲಿ ಮಾಡಿ ರಶೀದಿ ನೀಡಿ ಪುರಸಭೆ ಅಧ್ಯಕ್ಷರಾಗಿದ್ದವರೇ ತೆರಿಗೆ ವಂಚನೆ ಮಾಡಿರುವ ಪ್ರಕರಣವನ್ನು ಪುರಸಭೆ ಮುಖ್ಯಧಿಕಾರಿಗಳಾದ ವಸಂತ ಕುಮಾರಿ ಅವರೇ ಖುದ್ದಾಗಿ ಟಿ. ನರಸೀಪುರ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಮೇಲೆ A1 ಆರೋಪಿಯಾಗಿ ಮಾಜಿ ಪುರಸಭೆ ಅಧ್ಯಕ್ಷರಾದ ಟಿ. ಎಂ. ನಂಜುಂಡಸ್ವಾಮಿಯವರನ್ನೇ ಬಂಧನ ಮಾಡಿ ಇತರೆ ಹಲವು ಮಂದಿ ಮೇಲೆ ಪ್ರಕರಣ ದಾಖಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಆದರೆ ಇಲ್ಲಿ ಪುರಸಭೆ ಮುಖ್ಯಧಿಕಾರಿಗಳು ದೂರು ನೀಡುವಾಗ ಕೇವಲ 5 ಲಕ್ಷ ದ ವಂಚನೆ ಬಗ್ಗೆ ಮಾತ್ರ ನೀಡಿರುತ್ತಾರೆ ಆದರೆ ಸದರಿ ಮುಖ್ಯಾಧಿಕಾರಿಗಳೆ ಈ ವಿಚಾರವನ್ನು ಬೆಳಕಿಗೆ ತಂದ ಹೋರಾಟಗಾರ ಮಣಿಕಂಠ ರಾಜ್ ಗೌಡ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡುವಾಗ 40 ಕೋಟಿಯಷ್ಟು ವಂಚನೆ ನಡೆದಿದೆ ಎಂದು ಹೇಳಿದ್ದಾರೆ ಅದನ್ನು ಗಮನಿಸಿದರೆ ಬಹುತೇಕ ಎಲ್ಲಾ ವಿಚಾರಗಳು ಮುಖ್ಯಾಧಿಕಾರಿಗಳಿಗೆ ಈಗಾಗಲೇ ತಿಳಿದಿತ್ತು ಎಂಬುದು ಗೊತ್ತಾಗುತ್ತದೆ ಈಗಿರುವಾಗ ಏಕೆ ಅವರು ಸುಮ್ಮನಿದ್ದರೂ ಎಂಬುದರ ಬಗ್ಗೆಯೂ ತನಿಖೆ ನಡೆಸಬೇಕೆಂದರು.
ಒಂದೇ ನಕಲಿ ಸೀಲು ಬಳಸಿಕೊಂಡು ಹಲವರು ತೆರಿಗೆ ವಂಚನೆ ಮಾಡಿರಬಹುದು ಆದ್ದರಿಂದ ಇಲ್ಲಿಯವರಗೆ ಸಂದಾಯವಾಗಿರುವ ಕಂದಾಯದ ಮೊತ್ತ ಖಾತೆ ಮಾಡುವ ಸಂಧರ್ಭದಲ್ಲಿ ಸಲ್ಲಿಕೆಯಾಗಿರುವುದು ಮತ್ತು ನಿಜವಾಗಿಯೂ ಬ್ಯಾಂಕ್ ಗೆ ಸಂದಾಯವಾಗಿರುವುದು ಎಷ್ಟು ಎಂದು ತಾಳೆ ಹಾಕಬೇಕು ಮತ್ತು ಏಕೆ ಎರಡನ್ನು ಯಾವೊಬ್ಬ ಸಂಬಂಧ ಪಟ್ಟ ಅಧಿಕಾರಿಗಳು ತಾಳೆ ಹಾಕಿಲ್ಲ 40 ಕೋಟಿಯಷ್ಟು ತೆರಿಗೆ ವಂಚನೆ ನಡೆಯೋ ತನಕ ಅನ್ನೋದನ್ನು ತನಿಖೆ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳ ಮೇಲೇಯೂ ಕರ್ತವ್ಯ ಲೋಪ ಮತ್ತು ನಷ್ಟ ಉಂಟುಮಾಡಿದ ಆರೋಪದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಹುತೇಕ ಚೀಫ್ ಆಫೀಸರ್ ಸೇರಿ ಎಲ್ಲಾ ಹಂತದ ಸಂಬಂಧ ಪಟ್ಟ ಅಧಿಕಾರಿಗಳು 40 ಕೋಟಿಯಷ್ಟು ತೆರಿಗೆ ವಂಚನೆ ಆಗುತ್ತಿದೆ ಎಂದು ತಿಳಿದಿದ್ದರೂ ಹೊರಗಿನ ವ್ಯಕ್ತಿ ಬಹಿರಂಗ ಪಡಿಸೋ ತನಕ ಸುಮ್ಮನಿರೋದು ಅವರು ಪರೋಕ್ಷವಾಗಿ ಶಾಮೀಲಾಗಿರಬಹುದು ಅಥವಾ ಅವರು ಇತರೆ ವಿಚಾರದಲ್ಲಿ ಮಾಡಿರುವ ಭ್ರಷ್ಟಾಚಾರವನ್ನು ಮುಂದಿಟ್ಟು ಅವರನ್ನು ಈ ವಿಚಾರದಲ್ಲಿ ಯಾವುದೇ ಕ್ರಮಕೈಗೊಳ್ಳದ ರೀತಿಯಲ್ಲಿ ಮಾಡಿರಬಹುದು ಏಕೆಂದರೆ ಸದರಿ ಮುಖ್ಯಧಿಕಾರಿಗಳು ಗುಂಟೆ ಲೆಕ್ಕದಲ್ಲಿ ಕಾನೂನು ಬಾಹಿರವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಇದರಿಂದಲೂ ಲಕ್ಷಗಳ ಲೆಕ್ಕದಲ್ಲಿ ತೆರಿಗೆ ವಂಚನೆ ಆಗಿದೆ ಎಂಬುದು ಆದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವು ಇದೆ ಇಲ್ಲದಿದ್ದರೆ ಮುಖ್ಯಾಧಿಕಾರಿಗಳೇ ಒಪ್ಪಿಕೊಂಡಂತೆ ಪ್ರತಿನಿತ್ಯ ಈಗ ಬಂಧನ ಮಾಡಿರುವ ವ್ಯಕ್ತಿ ಪ್ರತಿನಿತ್ಯ ಕನಿಷ್ಠ ಖಾಸಗಿ ವ್ಯಕ್ತಿಗಳ ಆಸ್ತಿಯ 10 ಖಾತೆ ಮಾಡಿಸುತ್ತಿದ್ದರು ಎಂದು ಹೇಳಿದ್ದಾರೆ ಮೂರ್ನಾಲ್ಕು ಸಾವಿರ ಖಾತೆಯಲ್ಲಿ ಕನಿಷ್ಠ ಒಂದು ಸಾವಿರ ಖಾತೆ ಸದರಿ ನಂಜುಂಡ ಸ್ವಾಮಿ ಅವರೇ ಮಾಡಿಸುತ್ತಿದ್ದರು ಎಂದು ಹೇಳಿದ್ದಾರೆ ಇದು ಹೇಗೆ ಸಾಧ್ಯ, ಪುರಸಭೆ ಅಧ್ಯಕ್ಷರು /ಸದಸ್ಯರಾದವರು ಅವರು ಚುನಾಯಿತ ಪ್ರತಿನಿದಿಗಳಾದವರು, ಒಬ್ಬ ಪುರಸಭೆ ಅಧ್ಯಕ್ಷರಾಗಿದ್ದವರು, ಅವರು ಯಾರದ್ದೋ ಆಸ್ತಿಗೆ ಬಂದು ಫೈಲ್ ಇಡಿದುಕೊಂಡು ಖಾತೆ, ಕಂದಾಯ ಹೇಗೆ ಮಾಡಿಸಿಕೊಡಲು ಹೇಗೆ ಸಾಧ್ಯ. ಅದರಲ್ಲೇ ತಿಳಿಯುತ್ತದೆ ಅಲ್ಲಿ ಭ್ರಷ್ಟಾಚಾರ ಇದೆ ಅಂತ. ಸಾಮಾನ್ಯರು ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರು ಅದನ್ನು ತಿರುಗಿಯೂ ನೋಡದ ಅಧಿಕಾರಿಗಳು ಇಂತಹವರ ಮೂಲಕ ಹೋದ ಅರ್ಜಿಗಳನ್ನು ಮುತುವರ್ಜಿ ವಹಿಸಿ ಖಾತೆ ಮಾಡಿಕೊಡುವುದರಲ್ಲೇ ತಿಳಿಯುತ್ತದೆ ಇದರಲ್ಲಿ ಸಂಬಂಧ ಪಟ್ಟ ಪ್ರತಿಯೊಬ್ಬರೂ ಕೈಜೋಡಿಸಿದ್ದಾರೆ ಅನ್ನೋದು. ಇಲ್ಲದಿದ್ದರೆ ನಿಜವಾದ ಬ್ಯಾಂಕ್ ಸೀಲ್ ಯಾವುದು ನಕಲಿ ಯಾವುದು ಎಂದು ಕನಿಷ್ಠ ಅರಿವು ದಿನಬೆಳಗಾದರೆ ಕಂದಾಯ ಕಟ್ಟಿಸಿಕೊಳ್ಳುವ ಅಧಿಕಾರಿಗಳಿಗೆ ತಿಳಿಯುವುದಿಲ್ಲವೇ ಎಂದು ಕಿಡಿಕಾರಿದರು.

ಪುರಸಭೆ ಮುಖ್ಯಧಿಕಾರಿಗಳು ಪ್ರಕರಣ ಹೊರಬಿದ್ದ ತಕ್ಷಣವೇ 30 40 ಕೋಟಿಯಷ್ಟು ತೆರಿಗೆ ವಂಚನೆ ಆಗಿದೆ ಎಂದು ಹೇಳಲು ಹೇಗೆ ಸಾಧ್ಯ.
ಅಲ್ಲಿತನಕ ಈ ವಿಚಾರ ಗೊತ್ತಿರಲಿಲ್ಲವೇ. ಗೊತ್ತಿದ್ದರೂ ಇವರು ಕ್ರಮ ಕೈಗೊಳ್ಳದೆ ಇರಲು ಏನು ಕಾರಣ. ಈಗ 40 ಕೋಟಿಯಷ್ಟು ತೆರಿಗೆ ಹೇಗೆ ಪುರಸಭೆಗೆ ಬರಿಸುವುದು, ಯಾವ ಅಧಿಕಾರಿ ಹೊಣೆ ಇದಕ್ಕೆ ಅವರ ಮೇಲೆ ಏನು ಕ್ರಮ, ಯಾರ್ಯಾರು ಎಷ್ಟು ವಂಚನೆ ಮಾಡಿದ್ದಾರೆ ಅನ್ನೋದನ್ನು ತಕ್ಷಣವೇ ಮುಖ್ಯಧಿಕಾರಿಯನ್ನು ಅಮಾನತು ಮಾಡಿ ತನಿಖೆಗೆ ವಹಿಸಬೇಕೆಂದು ದಲಿತ ಸಂಘರ್ಷ ಸಮಿತಿ ಬಣ ರಹಿತ (ರಿ) ಒತ್ತಾಯಿಸುತ್ತದೆ ಎಂದರು.
ಸರ್ಕಾರ ತನಿಖೆ ನಡೆದು ಸಂಪೂರ್ಣ ವರದಿ ಬಂದು ಪುರಸಭೆ ಮುಖ್ಯಧಿಕಾರಿಗಳು ಸೇರಿ ಇತರೆ ಸಂಬಂಧ ಪಟ್ಟ ಅಧಿಕಾರಿಗಳು ಈ ಪ್ರಕರಣದಲ್ಲಿ ನಿರ್ದೋಷಿಗಳೆಂದು ಸಾಬೀತು ಆಗುವ ತನಕ ಯಾವುದೇ ಕಾರಣಕ್ಕೂ ಮುಖ್ಯಧಿಕಾರಿಗಳನ್ನು ಸಹಿತ ಯಾವೊಬ್ಬ ಅಧಿಕಾರಿಗಳನ್ನು ಟಿ. ನರಸೀಪುರ ಪುರಸಭೆಯಿಂದ ಬೇರೆಕಡೆ ವರ್ಗಾವಣೆ ಮಾಡಬಾರದು ಮತ್ತು ಅವರ ಸಂಬಳ ಸೇರಿದಂತೆ ಯಾವುದನ್ನೂ ಮಂಜೂರು ಮಾಡಬಾರದೆಂದು ನಮ್ಮ ಸಮಿತಿ ಅಗ್ರಹಿಸುತ್ತದೆ ಎಂದರು.

ಈ ಹಿಂದೆ ಪುರಸಭೆ ಮುಖ್ಯಧಿಕಾರಿ ಆಗಿದ್ದ ಅರ್.ಅಶೋಕ ಅವರು ಸಹ ಪುರಸಭೆ ಲೆಟರ್ ಹೆಡ್ ದುರುಪಯೋಗ ಮಾಡಿದರು, ಸ್ವತಃ ಅವರೇ ಹಲವು ಬಗೆಯಲ್ಲಿ ಸಹಿಮಾಡಿ ಖಾತೆ,ಕಂದಾಯ, ಕಟ್ಟಡ ಪರವಾನಗಿ ಕೊಡುವಾಗ ವಂಚಿಸಿದ್ದನ್ನ ನಮ್ಮ ಸಮಿತಿ ನಿರಂತರವಾಗಿ ಹೋರಾಟ ಮಾಡಿತ್ತು ಆಗ ಕೇವಲ ಮುಖ್ಯಧಿಕಾರಿ ಮೇಲೆ ನಾಮಕಾವಸ್ಥೆ ಕ್ರಮವಹಿಸಿದ್ದು ಬಿಟ್ಟರೆ ಯಾವುದೇ ಗಂಭೀರ ತನಿಖೆ ನಡೆಸಲಿಲ್ಲ ಅದರ ಬಳುವಳಿ ಈ ಪ್ರಕರಣ. ಅಂದು ಸಹ ಈ ರೀತಿ ಪ್ರಕರಣ ವರದಿಯಾಗುತ್ತಲೇ ಇತ್ತು. ಅಕ್ರಮ ಖಾತೆ, ಸಾರ್ವಜನಿಕ ಭೂಮಿ ಅಕ್ರಮ ಖಾತೆ ವಿಚಾರವು ಇತ್ತು ಆದರೆ ಗಂಭೀರ ತನಿಖೆ ಆಗಲಿಲ್ಲ. ಆದ್ದರಿಂದ ಈಗಲಾದರೂ ಇದನ್ನ ನ್ಯಾಯಾಂಗ ತನಿಖೆ ವಹಿಸಿ ಕೊಡುವ ಮೂಲಕ ವಂಚನೆ ಮಾಡಿರುವವರು, ಭ್ರಷ್ಟಾಚಾರ ಮಾಡಿರುವವರ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳುವ ಮೂಲಕ ಟಿ. ನರಸೀಪುರ ಪುರಸಭೆಯ ಆಸ್ತಿಯನ್ನು ಹಾಗೂ ಪುರಸಭೆಗೆ ಸೇರಿದ ಖಾಸಗಿ ಅಸ್ತಿಗಳನ್ನು ರಕ್ಷಣೆ ಮಾಡಬೇಕೆಂದು ನಮ್ಮ ಸಮಿತಿ ಈ ಮೂಲಕ ಒತ್ತಾಯಿಸುತ್ತದೆ.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಉಗ್ರಹೋರಾಟ ಕಾನೂನಿನ ಮೂಲಕವು ಹಾಗೆ ಬೀದಿ ಹೋರಾಟವು ಅನಿವಾರ್ಯ ಆಗುತ್ತದೆಂದು ಎಚ್ಚರಿಸಿದರು.
ಸದರಿ ಮನವಿಯನ್ನೇ ಪ್ರತ್ಯೇಕವಾಗಿ ಪೌರಾಡಳಿತ ಸಚಿವರು, ಹಾಗೂ ಜಿಲ್ಲಾಧಿಕಾರಿಗಳಿಗೂ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕ ಆಲತೂರು ಶಿವರಾಜ್, ತಾಲೂಕು ಸಂಚಾಲಕರಾದ ಕೇತುಪುರ ಶಿವಪ್ರಕಾಶ್, ತಾಲ್ಲೂಕು ಸಂಘಟನಾ ಸಂಚಾಲಕರಾದ ಹನುಮನಾಳು ಮಹದೇವ, ತುಂಬಲ ಶಿವಣ್ಣ, ಸಿಬಿಹುಂಡಿ ನಾಗೇಶ್, ಸುತ್ತೂರು ಮಹೇಶ್, ಹೌಸಿಂಗ್ ಬೋರ್ಡ್ ನಿಂಗರಾಜು ಮತ್ತಿತರರು ಹಾಜರಿದ್ದರು.
