ಟಿ.ನರಸೀಪುರ : ಬ್ಲಾಕ್ ಬೆಲ್ಟ್ ಡಾನ್ ಗ್ರೇಡಿಂಗ್ ಪರೀಕ್ಷೆಯಲ್ಲಿ ಬ್ಲಾಕ್ ಬೆಲ್ಟ್ ಆರನೇ ಡಿಗ್ರಿಯನ್ನು ಸೋಸಲೆ ಗ್ರಾಮದ ಸಿದ್ದರಾಜು ಪಡೆದಿದ್ದಾರೆ.
ನಾಗ ಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಬ್ಲಾಕ್ ಬೆಲ್ಟ್ ಡಾನ್ ಗ್ರೇಡಿಂಗ್ ಪರೀಕ್ಷೆಯನ್ನು ಮೈಸೂರಿನಲ್ಲಿ ಏರ್ಪಡಿಸಲಾಗಿತ್ತು.
ಮುಂಬೈಯಿಂದ ಆಗಮಿಸಿದ್ದ ರೆನ್ಸಿ ಬ್ರಿಜೇಸ್ ಪ್ರಸಾದ್ ಅವರು ಪರೀಕ್ಷೆ ಯನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಬ್ಲಾಕ್ ಬೆಲ್ಟ್ ಆರನೇ ಡಿಗ್ರಿಯನ್ನು ಸೋಸಲೆ ಸಿದ್ದರಾಜು ಪಡೆಯುವ ಮೂಲಕ ತಾಲ್ಲೂಕಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಾಲ್ಕನೇ ಡಿಗ್ರಿಯನ್ನು ರಾಜೇಂದ್ರ ಎಂ., ಸತೀಶ್ ಎಂ., ಮಹದೇ ವಸ್ವಾಮಿ ಎಂ., ಮೂರನೇ ಡಿಗ್ರಿಯನ್ನು ಶಿವಕುಮಾರ್, ಸಿದ್ದರಾಜು, ನಾಗೇಂದ್ರ, ನಿತೀಶ್, ಯೋಗೇಶ್, ರಮೇಶ್, ಗಜೇಂದ್ರ ವಾಜಮಂಗಲ, ಅವಿನಾಸ್ ಪ್ರಸಾದ್, ಹಾಗೂ ಎರಡನೇ ಡಿಗ್ರಿಯನ್ನು ರವೀಶ್, ಲೋಕೇಶ್, ಅಬ್ದುಲ್ ಫೈಝಲ್, ಮತ್ತು ವಿಜಯ್ ಅವರು ಪಡೆದಿದ್ದಾರೆಂಬ ಮಾಹಿತಿಯನ್ನು ತಿಳಿಸಿದರು.
ಎಂ.ನಾಗೇಂದ್ರಕುಮಾರ್
