ಟಿ.ನರಸೀಪುರ : ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸುವ ಸೇವಾ ಮನೋಭಾವದಿಂದ ಪ್ರಥಮ ಬಾರಿಗೆ ಮಸ್ಜಿದ್ -ಎ-ನೂರ್ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತೆಂದು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ಬಿ.ಮನ್ಸೂರ್ ಆಲಿ ತಿಳಿಸಿದರು.
ಪಟ್ಟಣದ ಲಿಂಕ್ ರಸ್ತೆಯಲ್ಲಿರುವ ಅಲ್-ಅನ್ಸಾರ್ ಆಸ್ಪತ್ರೆ ಮೈಸೂರುಮತ್ತು ವ್ಯವಸ್ಥಾಪನ ಸಮಿತಿ ಮಸ್ಜಿದ್-ಎ-ನೂರ್ ಟಿ. ನರಸೀಪುರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆವರಣದಲ್ಲಿ ಭಾನುವಾರ ಅಲ್-ಅನ್ಸಾರ್ ಆಸ್ಪತ್ರೆ ಮೈಸೂರು ಮತ್ತು ವ್ಯವಸ್ಥಾಪನ ಸಮಿತಿ ಮಸ್ಜಿದ್-ಎ-ನೂರ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು ಮುಸ್ಲಿಂ ಸಮುದಾಯ ಸೇವಾ ಮನೋಭಾವನೆಯ ಪ್ರತೀಕವಾಗಿ ಈ ಆರೋಗ್ಯ ತಪಾಸಣಾ ಶಿಬಿರ ನಡೆಯುತ್ತಿದೆ ಎಂದರು.
ಇದನ್ನು ಓದಿ: ಟಿ.ನರಸೀಪುರ: ಜನಸೇವೆಯೇ ಜನಾರ್ದನ ಸೇವೆ: ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕೃತ ಆಲಗೂಡು ಎಸ್.ಚಂದ್ರಶೇಖರ್
ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ನಡೆದಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 500ಕ್ಕೂ ಹೆಚ್ಚು ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆಯನ್ನು ಪಡೆದರು. ಶಿಬಿರದಲ್ಲಿ ಅಲ್- ಅನ್ಸಾರ್ ಆಸ್ಪತ್ರೆಯ ವೈದ್ಯರಾದ ಡಾ.ಉಮ್ಮಿ ಅನಿ, ಡಾ. ತಸ್ಮಿಯ ಖಾನಮ್, ಡಾ.ಸಮೀರ್ ಅಮ್ಜದ್ ಶಾಯಿಕ್, ತಾಲಿಬ್ ಸುಭಾನ್, ಯಾಸ್ಮಿನ್ , ಅಲ್ಮಶ್, ನೇಹಾ ಕೌಶರ್ ಹಾಗೂ ಸಿಬ್ಬಂದಿಗಳು ವೈದ್ಯಕೀಯ ತಪಾಸಣೆ ನಡೆಸಿದರು.

ಮಸ್ಜಿದ್-ಎ-ನೂರ್ ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ, ಸಯೀದ್ ಪಾಷ, ಖಜಾಂಚಿ ನಾಯಜ್ ಅಹಮದ್, ಸದಸ್ಯರಾದ ಮನ್ಸೂರ್ ಅಹಮದ್, ಅಲ್ತಾಪ್ ಪಾಷ, ಇನಾಯತ್, ಅಕ್ಬರ್ ಪಾಷ, ರಿಯಾಜ್ ಅಹಮದ್ ಹಾಗೂ ಇತರರು ಇದ್ದರು.
ಎಂ.ನಾಗೇಂದ್ರಕುಮಾರ್
