ಟಿ.ನರಸೀಪುರ : “ಸದಾಶಯ ಪ್ರಕಾಶನ”ದ ಮೊದಲ ಕೃತಿಯಾಗಿ ಟಿ.ನರಸಿಪುರದ ಎಂ. ಜವರಾಜ್ ಅವರ ಕಾದಂಬರಿ ‘ಪೋಸ್ಟ್ ಮ್ಯಾನ್ ಗಂಗಣ್ಣ’ ಪ್ರಕಟಣೆಗೊಳ್ಳುತ್ತಿದೆ.
ತಮ್ಮ ನೆಲದ ಕತೆಗಳನ್ನು ಪರಿಣಾಮಕಾರಿಯಾಗಿ ಬರೆಯಬಲ್ಲವರಾದ ಇವರು ಈಗಾಗಲೇ ಕತೆ, ಕವಿತೆ, ಕಥನ ಕಾವ್ಯ, ಕಾದಂಬರಿ ಹಾಗೂ ವಿಮರ್ಶೆ ತರಹದ ಪುಸ್ತಕಗಳನ್ನು ಹೊರತಂದು ಓದುಗರಿಗೆ ಅರ್ಪಿಸಿದ್ದಾರೆ.
‘ಪೋಸ್ಟ್ ಮ್ಯಾನ್ ಗಂಗಣ್ಣ’ ಕಾದಂಬರಿಗೆ ಕತೆಗಾರ, ವಿಮರ್ಶಕ ರವಿಕುಮಾರ್ ನೀಹ ಅವರು ಮುನ್ನುಡಿ, ಹಿರಿಯ ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಬೆನ್ನುಡಿ ಬರೆದಿದ್ದಾರೆ.”ನಮಗೆ ಬೇಕಾದವರು ಜೊತೆಗಿದ್ದು, ನಮ್ಮ ಕಣ್ಣ ಮುಂದೆಯೇ ಓಡಾಡಿಕೊಂಡಿದ್ದಾಗ ಆ ವ್ಯಕ್ತಿಯ ಮೌಲ್ಯ ಗೊತ್ತಾಗುವುದಿಲ್ಲ. ಒಂದೊಮ್ಮೆ ಅವರು ಇದ್ದಕ್ಕಿದ್ದಂತೆ ಅದೃಶ್ಯನಾದರೆ…? ಇಡಿ ಊರಾದರೂ ಏನು ಮಾಡೀತು..?”

ಈ ಮೇಲಿನ ಮಾತುಗಳು ಕಾದಂಬರಿಗೆ ಸಂಬಂದಿಸಿರಬಹುದಾ ? ನಿಮ್ಮ ಕುತೂಹಲಕ್ಕೆ ಹೆಚ್ಚು ದಿನ ಕಾಯಿಸುವುದಿಲ್ಲ…ಪುಸ್ತಕ ಬಿಡುಗಡೆ, ಎಲ್ಲಿ?ಯಾವಾಗ?
ಯಾರು ಬಿಡುಗಡೆ ಮಾಡಬಹುದು? ಇತ್ಯಾದಿ ವಿವರಗಳನ್ನು ಶೀಘ್ರದಲ್ಲಿ…ನಿರೀಕ್ಷಿಸಿ ಎಂದಿದ್ದಾರೆ. ಈ ಸುಂದರ ಮುಖಪುಟವನ್ನು ಸೃಜಿಸಿದವರು ಹರ್ಷ ಕಾವೇರಿಪುರ
ನಮ್ಮ ಪ್ರಕಾಶನದ ಕ್ರಿಯಾತ್ಮಕ ಲೋಗೋ ಬಿಡಿಸಿದವರು ಕಿರಣ್ ಮಾಡಾಳು…. ಝಬಿವುಲ್ಲಾ ಅಸದ್ ಅವರು ಸುಂದರ ಒಳಗಪುಟ ರೇಖಾಚಿತ್ರಗಳನ್ನು ಬಿಡಿಸಿದ್ದಾರೆ..
ಕರಡು ತಿದ್ದುವಿಕೆ ಸುರೇಶ್ ಮುದ್ದಾರ ಹಾಗೂ ಒಳಪುಟ ವಿನ್ಯಾಸವನ್ನು ಹೆಚ್ ಕೆ ಶರತ್ ಅವರು ಮಾಡಿದ್ದಾರೆಂದು
ಸದಾಶಯ ಪ್ರಕಾಶನ ಮಾಹಿತಿ ತಿಳಿಸಿದೆ.
ಎಂ.ನಾಗೇಂದ್ರಕುಮಾರ್

[…] […]