ಟಿ.ನರಸೀಪುರ : ಅಲೆಮಾರಿ ಸಮುದಾಯಗಳು ಸಂಘಟಿತರಾಗಬೇಕು.ಅಧಿಕಾರಿಗಳು ಮತ್ತು ಸರ್ಕಾರ ಯಾವುದೋ ಭೂಮಿಯಲ್ಲಿ ನಿಮ್ಮನ್ನು ತಂದು ಕೂರಿಸಿರುತ್ತಾರೆ.ಮುಂದೆ ಸಮಸ್ಯೆ ಬಂದಾಗ ಮುಂದೆ ಬರುವುದಿಲ್ಲ ಅದಕ್ಕಾಗಿ ಹೋರಾಟಗಾರರೊಂದಿಗೆ ನೀವು ಕೈ ಜೋಡಿಸಿ ನಿಮ್ಮ ರಕ್ಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆಂದು ಸಾಹಿತಿಗಳು ಹಾಗೂ ಅಲೆಮಾರಿ ಜನಾಂಗದ ರಾಜ್ಯ ಕಾರ್ಯದರ್ಶಿ ಹೋರಾಟಗಾರರಾದ ಕುಪ್ಯ ನಾಗರಾಜು ತಿಳಿಸಿದರು.

ದಸಂಸ ಮೈಸೂರು ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಜನ್ಮ ದಿನದ ಅಂಗವಾಗಿ ದಸಂಸ ಹೋರಾಟದ ಫಲ ಪರಿಶಿಷ್ಟ ಜಾತಿಯ ಅಲೆಮಾರಿ ಕೊರಚ ಸಮುದಾಯದ 40 ಕುಟುಂಬಗಳಿಗೆ ನೂತನವಾಗಿ ನಿರ್ಮಾಣಗೊಂಡಿರುವ ಶಿವಪಾರ್ವತಿ ನಗರದಲ್ಲಿ ಗಿಡ ನೆಟ್ಚು ದಲಿತ,ದಮನಿತರ ಮತ್ತು ಸಮಕಾಲೀನ ಆಡಳಿತ ಕುರಿತ ವಿಚಾರ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ನಿಮ್ಮ ಉದ್ಧಾರ ಶಿಕ್ಷಣದಿಂದ ಮಾತ್ರ ಸಾಧ್ಯ.ನಿಮ್ಮ ಬಹಳಷ್ಟು ಮಕ್ಕಳು ತುಂಬಾ ಬುದ್ದಿವಂತರಿರುತ್ತಾರೆ.ಅವರನ್ನು ಶಾಲೆಗೆ ಸೇರಿಸಿ ಅವರಿಗೆ ಶಿಕ್ಷಣ ಕೊಡಿಸಬೇಕೆಂದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ 4 ಸಾವಿರ ಕೋಟಿ ಅನುದಾನವಿರುತ್ತದೆ.ಈ ಭಾಗದ ಶಾಸಕರು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿರುವ ಮಹದೇವಪ್ಪರವರು ಮನಸ್ಸು ಮಾಡಿ ನಿಮ್ಮ ಅಭಿವೃದ್ಧಿಗೆ ಸ್ಪಂಧಿಸಬೇಕು.ಅದಕ್ಕಾಗಿ ಸಂಘಟನೆಗಳ ಸಹಾಯದಿಂದ ಅವರ ಸಹಾಯ ಹಸ್ತವನ್ನು ಪಡೆದುಕೊಳ್ಳಿ.ಕಪ್ಪೆಗಳನ್ನ ತೂಕ ಹಾಕಿದ ರೀತಿ ರಾಜ್ಯದ ಅಲೆಮಾರಿಗಳ ಪರಿಸ್ಥಿತಿ ಇದೆ ಎಂದು ನೊಂದು ನುಡಿದರು.
ಆಲಗೂಡು ಶಿವಕುಮಾರ್ ನೇತೃತ್ವದಲ್ಲಿ ತಾಲ್ಲೂಕಿನಾಧ್ಯಂತ ನೊಂದು,ಬೆಂದು ಬಸವಳಿದಿದ್ದ ಜನತೆಯ ನೆರವಿಗೆ ನಿಂತು ನ್ಯಾಯ ಹೊದಗಿಸಿದ್ದಾರೆ.ನಿರಂತರ ಹೋರಾಟದ ಫಲವಾಗಿ ತಾಲ್ಲೂಕಿನ ಹಲವಾರು ಭಾಗಗಳಲ್ಲಿ ಸೂರಿಲ್ಲದವರಿಗೆ ಸೂರು,ಜಾಗವೇ ಇಲ್ಲದಂತಹವರಿಗೆ ಜಾಗ ಕೊಡಿಸಿ ನೂರೂರು ಕುಟುಂಬಗಳಿಗೆ ತಮ್ಮ ಹೋರಾಟದ ಮೂಲಕ ನ್ಯಾಯ ಕೊಡಿಸಿ ಆಶ್ರಯ ಕಲ್ಪಿಸದ್ದಾರೆಂದು ಸ್ಮರಿಸಿದರು.
ಸಾಮಾಜಿಕ ಹೋರಾಟಗಾರರು,ಅಹಿಂದ ನಾಯಕರಾದ ಚಿಕ್ಕಜವರಪ್ಪ ಮಾತನಾಡಿ ಭೂಮಿ,ಶಿಕ್ಷಣ ಮತ್ತು ಆರೋಗ್ಯಕ್ಕಾಗಿ ಹೋರಾಟಗಳು ನಡೆಯಬೇಕು. ದಸಂಸಗಳು ತಂಡಗಳಾಗಿ ವಿಂಗಡನೆಯಾಗಿ ಬಿನ್ನ ಮನಸ್ಸುಗಳಾಗಿವೆ ಬಿಟ್ಚಿವೆ.ರಾಜ್ಯದಲ್ಲಿ ಒಂದೇ ತಂಡ ದಸಂಸ ಇದ್ದರೆ ಹೋರಾಟಕ್ಕೆ ಸರ್ಕಾರದಿಂದ ಬೇಗ ಫಲ ದೊರೆಯುತ್ತದೆ.ಇಲ್ಲದಿದ್ದರೆ ದೊಡ್ಡ,ದೊಡ್ಡ ಹೋರಾಟಗಳನ್ನು ಮಾಡುವಾಗ ಬಹಳ ವಿಳಂಭವಾಗುವುದನ್ನು ನಾವು ಗಮನಿಸುತ್ತಿದ್ದೇವೆ.ಚಳುವಳಿಗಾರರನ್ನು ಒಡಕು ಮೂಡಿಸಲು ಕಾಣದ ಕೈಗಳು ತೆರೆ ಹಿಂದೆ ಶ್ರಮ ವಹಿಸುತ್ತಿರುತ್ತವೆ.ಅದಕ್ಕೆ ನೀರೆರೆಯದೆ ಅವರಿಗೆ ಆಹಾರವಾಗದೆ ಒಗ್ಗಟ್ಟನ್ನು ಪ್ರದರ್ಶಿಸಿ ಹೋರಾಟದ ಮೊನಚನ್ನು ಉಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಚಳುವಳಿಗಾರರು ಚಳುವಳಿಯ ಇತಿಹಾಸವನ್ನು ತಿಳಿದು ಅನ್ಯಾಯ,ಅಕ್ರಮದ ವಿರುದ್ಧ ಹೋರಾಟ ಮಾಡುವವನೇ ಪ್ರಜ್ಞಾವಂತ ಚಳುವಳಿಗಾರನ ಜವಾಬ್ದಾರಿಯಾಗಿರುತ್ತದೆಂದರು.

ಪೂರ್ವಜರು ಉಳಿಸಿದಂತಹ ಭೂಮಿಯನ್ನು ಮಾರಿಕೊಂಡು ಈಗ ಭೂಮಿಗಾಗಿ ಹೋರಾಟ ಮಾಡುತ್ತಿರುವುದು ಸಹ ವಿಪರ್ಯಾಸವೇ ಸರಿ.ಭೂಮಿ ಇದ್ದರೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬಹುದು.ಹೋರಾಟಗಾರರನ್ನು ದುರ್ಭಲಗೊಳಿಸಲು ಕೇಸುಗಳು ಬೀಳುತ್ತಿರುತ್ತವೆ.ಅದಕ್ಕೆ ಶೋಷಿತರನ್ನೇ ಎತ್ತಿ ಕಟ್ಟುತ್ತಿದ್ದು ಅದನ್ನು ನೀವೇ ಅರಿತು ಅಂಜದೆ,ಅಳುಕದೆ ಹೋರಾಟ ಮಾಡುತ್ತಲೇ ಇರಬೇಕು. ಹೋರಾಟ ಈ ಹಿಂದೆ ಸುಲಭವಾಗಿತ್ತು ಏಕೆಂದರೆ ಅವರಲ್ಲಿ ಬದ್ದತೆ ಇತ್ತು.ಆದರೀಗ ಅಂತಹ ಪರಿಸ್ಥಿತಿ ಇಲ್ಲಾ.ಸವಾಲಾಗಿ ಪರಿಣಮಿಸಿದೆ.ಅಷ್ಚು ಸುಲಭವಿಲ್ಲ ಅದಕ್ಕಾಗಿ ಒಗ್ಗಟ್ಟನ್ನು ಸದಾಕಾಲವೂ ಕಾಯ್ದುಕೊಳ್ಳಬೇಕೆಂದು ಸಲಹೆ ನೀಡಿದರು.
ಅಲೆಮಾರಿ ಅಭಿವೃದ್ಧಿ ನಿಗಮದಿಂದ ಹಲವಾರು ಯೋಜನೆಗಳು ನಿಮಾಗಿ ಇದೆ.ಅದನ್ನು ಸಂಘಟನೆಗಳ ಹೋರಾಟಗಾರರ ಮೂಲಕ ಪಡೆದುಕೊಂಡು ಸ್ವಾವಲಂಭಿಗಳಾಗಿ ಬದುಕನ್ನು ಕಟ್ಟಿಕೊಳ್ಳಿ ಎಂದರು.
ಹೊಲೆ,ಮಾದಿಗ ಪದ ಸಂವಿಧಾನದಲ್ಲಿ ನಿಷೇಧವಿದೆ ಆದರೆ ಮನುವಾದಿ ಮನಸ್ಲುಗಳು ವ್ಯವಸ್ಥಿತವಾಗಿ ನಮ್ಮನ್ನು ನಾವೇ ಹೊಲೆ,ಮಾದಿಗರೆಂದುಕೊಂಡು ಓಡಾಡಬೇಕು.ಅದನ್ನು ಮಾಡುವಲ್ಲಿ ಮೊದಲ ಹಂತದಲ್ಲಿ ಯಶಸ್ವಿಯಾಗಿದ್ದಾರೆಂದು ತಿಳಿಸಿ ಎಚ್ಚರದಿಂದ ಹೆಜ್ಜೆ ಇಟ್ಟು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಿ ಎಂದರು.
ದಸಂಸ ಜಿಲ್ಲಾ ಸಂಚಾಲರ ಆಲಗೂಡು ಶಿವಕುಮಾರ್ ಮಾತನಾಡಿ ನಾವು ಮಾತನಾಡುತ್ತಿರುವ ಜಾಗ ಸಿದ್ದರಾಮಯ್ಯರವರು ಮತ್ತು ಡಾ.ಹೆಚ್.ಸಿ.ಮಹದೇವಪ್ಪರವರ ಕ್ಷೇತ್ರವಾಗಿದೆ.ಇವರಿಗೆ ಶಾಶ್ವತ ನೆಲೆ ಕಲ್ಪಿಸದಿದ್ದರೆ ಡೋಂಗಿ ರಾಜಕಾರಣವಾಗುತ್ತದೆ.ಐದು ದಿನಗಳ ಕಾಲ ಹೋರಾಟ ಮಾಡಿದಾಗ ತಹಶಿಲ್ದಾರ್ ನಾಲ್ಕೈದು ದಿನಗಲ್ಲಿ ಆದೇಶ ಪತ್ರ ತಲುಪಿಸುತ್ತೇನೆಂದರು ಆದರೆ ನಾಲ್ಕೈದು ತಿಂಗಳಾಗಿದೆ ಇನ್ನೂ ಕೂಡ ಆದೇಶ ಪ್ರತಿ ನಮಗೆ ತಲುಪಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು.ಕಳೆದ ಮೂವತ್ತು ವರ್ಷಗಳಿಂದ ಆಡಳಿತ ವರ್ಗ ನಮ್ಮನ್ನು ಸರಿಯಾಗಿ ಗಮನಿಸಿದ್ದೇ ಆಗಿದ್ದರೆ ನಮ್ಮ ಪರಿಸ್ಥಿತಿ ಈ ತರ ಆಗುತ್ತಿರಲಿಲ್ಲ.ಕೇವಲ ಆಡಳಿತ ಯಂತ್ರದ ಬಗ್ಗೆ ಮಾತನಾಡಬಾರದು ನಾವು ಚುನಾಯಿಸಿ ಕಳುಹಿಸಿದ ಜನಪ್ರತಿನಿಧಿಗಳು ನಮ್ಮನ್ನು ಮನುಷ್ಯರಂತೆ ನೋಡಿದ್ದರೆ ನಮ್ಮ ಬದುಕು ಈಗಿರುತ್ತಿರಲಿಲ್ಲ.ನಮಗೆ ಸಿಗಬೇಕಾದ ಸವಲತ್ತುಗಳನ್ನು ತಲುಪಿಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕಿತ್ತು.ಆದರೆ ಮಾಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕೊರಚ ಸಮುದಾಯದ ದಸಂಸ ಯುವ ಹೋರಾಟಗಾರರೊಬ್ಬರು ಅಕಾಲಿಕ ಮರಣ ಹೊಂದಿದಾಗ ಅವರ ಶವ ಸಂಸ್ಕಾರಕ್ಕೆ ಜಾಗವಿಲ್ಲದೆ ಅಲೆದಾಡಿದಂತಹ ರೀತಿ ಯಾವ ಮನುಷ್ಯರಿಗೂ ಬರಬಾರದು.ಮಾನವೀಯತೆಯಿಂದ ಬದುಕಬೇಕಾದ ನಾವು ಎತ್ತ ಸಾಗುತ್ತಿದ್ದೇವೆಂಬ ಪ್ರಶ್ನೆಯೂ ಮೂಡುತ್ತದೆ.
ಆಡಳಿತ ವ್ಯವಸ್ಥೆಗಳು ಗಟ್ಟಿ ಚರ್ಮವಾಗಿವೆ.ಅಂತಹ ಅಧಿಕಾರಿಗಳನ್ನ ಸರ್ಕಾರ ತಂದು ಕೂರಿಸಿದೆ.ನಮಗೆ ಬದುಕನ್ನು ಕಟ್ಟಿಕೊಳ್ಳಬೇಕಾದ ವ್ಯವಸ್ಥೆ ಬೆನ್ನು ತೋರಿಸಿ ನಿಂತಿವೆ.ಪರ್ವಾಗಿಲ್ಲ ನಮಗೂ ಸಮಯ ಬರುತ್ತೆ ಆಗ ನಮ್ಮ ಅಧಿಕಾರ ಏನೆಂದು ತೋರಿಸೋಣ ಎಂದು ಎಚ್ಚರಿಸಿದರು.
ಅಧಿಕಾರಿ ವರ್ಗ ಹಾಗೂ ಸರ್ಕಾರದಗಮನ ಸೆಳೆದು ದೈನೇಹಿ ಸ್ಥಿತಿಯಲ್ಲಿರುವ ಇಂತಹ ಸಮುದಾಯಗಳಿಗೆ ಮೂಲಭೂತ ಸೌಕರ್ಯಗಳನ್ನು ಹೊದಗಿಸುವ ಸಲುವಾಗಿ ಆಗಾಗ್ಗೆ ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.ಕಳೆದ ಭಾರಿ ದಾನಿಗಳ ಹುಟ್ಚುಹಬ್ಬವನ್ನು ಆಚರಿಸಿದಾಗ ಅವರು ಸೋಲಾರ್ ಲೈಟ್ಗಳನ್ವು ಅಳವಡಿಸುವ ಮೂಲಕ ಬೆಳಕನ್ನು ನೀಡಿದ್ದಾರೆ.ಮುಂದೆ ಆಡಳಿತ ಯಂತ್ರ ಹಾಗೂ ಸರ್ಕಾರ ಹೇಗೆ ಸ್ಪಂದಿಸುತ್ತೆ ಎಂಬುದನ್ನು ಕಾದು ನೋಡುತ್ತೇವೆಂದರು.
ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಚಾಲಕ ಕುಕ್ಕೂರು ರಾಜು,ಯಾಚೇನಹಳ್ಳಿ ಸೋಮಶೇಖರ್,ರಾಜಣ್ಣ ಕೊರಚ ಸಮುದಾಯದ ಮುಖಂಡರಾದ ರಾಜು,ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕಿಷ ಕರೋಹಟ್ಟಿ ಕುಮಾರಸ್ವಾಮಿ ಸೇರಿದಂತೆ ತಾಲ್ಲೂಕಿನ ಹಲವಾರು ಮುಖಂಡರು ಹಾಜರಿದ್ದರು.
– ಎಂ. ನಾಗೇಂದ್ರ ಕುಮಾರ್ ವರದಿಗಾರರು
