ಟಿ.ನರಸೀಪುರ : ಸಂಘಟನೆ ಮತ್ತು ಹೋರಾಟ ನಮ್ಮ ಜೀವನದ ಹಂಗು ತೊರೆದು ಮಾಡುವಂತಹ ಕೆಲಸಗಳು.ಕಾನೂನಿನ ಅರಿವಿಲ್ಲದಿದ್ದರೆ ಹೋರಾಟಗಾರನಾಗಲು ಸಾಧ್ಯವಿಲ್ಲವೆಂದು ಕರ್ನಾಟಕ ಭೂಷಣ ಪ್ರಶಸ್ತಿ ವಿಜೇತ ಡಾ.ಆಲಗೂಡು ಚಂದ್ರಶೇಖರ್ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಬಣ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ್ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಹೋರಾಟ ಎಂಬುದನ್ನು ಬಾಬಾಸಾಹೇಬರು ನಮಗೆ ತೋರಿಸಿಕೊಟ್ಚಿದ್ದಾರೆ. ಹೋರಾಟದಲ್ಲಿ ಭಾಗವಹಿಸುವಾಗ ಸಂಪೂರ್ಣವಾಗಿ ಅದರ ಹಿನ್ನಲೆ ಅರಿತು ರೂಪು ರೇಷೆಗಳನ್ನು ಸಿದ್ದಪಡಿಸಿಕೊಂಡು ಭಾಗಿಯಾಗಬೇಕು.ಅಂಬೇಡ್ಕರ್ ರವರು ಹೋರಾಟ ಮಾಡುವಾಗ ಹೋರಾಟಗಾರರ ನಡೆ,ನುಡಿ ಹೇಗಿರಬೇಕೆಂದು ತಿಳಿಸಿದ್ದಾರೆ.ಇಂದಿನ ಕಾಲ ಮಾನ ಘಟ್ಟದಲ್ಲಿ ಯಾವುದೇ ರಂಗದಲ್ಲೂ ಜಾತಿ ತುಳುಕು ಹೋರಾಟದ ದಿಕ್ಕನ್ನೇ ಬದಲಾಯಿಸುತ್ತಿದೆ ಎಂದು ಬೇಸರಿಸಿದರು.
ಹೋರಾಟಗಾರರು ಎಂದೆಂದೂ ಒಬ್ಬರ ಮರ್ಜಿಯಲ್ಲಿ ಇಲ್ಲದೇ ಕಾಯ,ವಾಚ,ಮನಸ ಹೋರಾಟದಲ್ಲಿ ಭಾಗಿಯಾಗಿ ನಮ್ಮನ್ನು ನಂಬಿರುವವರಿಗೆ ನ್ಯಾಯ ಕೊಡಿಸಬೇಕು.ಆಗ ಮಾತ್ರ ನಮ್ಮ ಹೋರಾಟಕ್ಕೆ ಹಾಗೂ ನಮಗೆ ಗೌರವ ಸಿಗುತ್ತದೆ.ರಾಜ್ಯದಲ್ಲಿ ಅನೇಕ ಜಲ್ವಂತ ಸಮಸ್ಯೆಗಳು ನಮ್ಮ ಕಣ್ಣ ಮುಂದೆ ಇವೆ.ನಮ್ಮ ಪರಿಮಿತಿಯಲ್ಲಿ ನಡೆಯುವ, ಅನ್ಯಾಯಗಳನ್ನು ಖಂಡಿಸಿ ಅದಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದರು.

ಹಣಬಲ,ಜನಬಲ ಇರುವವರು ಅವರಿಗೆ ಅನ್ಯಾಯವಾದಾಗ ಹೋರಾಟಗಾರರ ಬಳಿ ಬರುವುದಿಲ್ಲ.ಅವರು ದೊಡ್ಡ ಮಟ್ಟದಲ್ಲೇ ಬಗೆಹರಿಸಿಕೊಳ್ಳುತ್ತಾರೆ.ಆದರೆ ನಮ್ಮ ಬಳಿ ಬರುವವರು ಅಸಾಯಕರು,ಏನೂ ಇಲ್ಲದವರು ಇಂತಹವರ ಮೇಲೆಯೇ ಉಳ್ಳವರ ದಬ್ಬಾಳಿಕೆ ನಡೆಯುವುದು.ಅಂತಹ ಸಂದರ್ಭದಲ್ಲಿ ಹೋರಾಟಗಾರರು ವಿರೋಧಿಗಳ ಯಾವುದೇ ಆಮಿಷಗಳಿಗೆ ಒಳಗಾಗದೆ ನೊಂದು,ಬೆಂದವರ ಪರವಾಗಿ ನಿಂತು ಹೋರಾಟ ಮಾಡಿ ನ್ಯಾಯ ಕಲ್ಪಿಸಬೇಕೆಂದರು.
ಐಪಿಸಿ,ಸಿ.ಆರ್.ಪಿ.ಸಿ., ಹಾಗೂ ಕೆ.ಸಿ.ಎಸ್.ಆರ್. ನಿಯಮಗಳನ್ನು ತಿಳಿದುಕೊಳ್ಳುವುದು ಹೋರಾಟಗಾರರಿಗೆ ಅತ್ಯುವಶ್ಯಕ.ಈ ನಿಟ್ಟಿನಲ್ಲಿ ಮೊದಲು ನಾವು ಕಾನೂನನ್ನು ತಿಳಿದುಕೊಂಡಾಗ ಮಾತ್ರ ರಾಜಕಾರಣಿಗಳು,ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಗಳೊಂದಿಗೆ ಯಾವುದೇ ಭಯವಿಲ್ಲದೇ ಮಾತನಾಡಿ ನಮ್ಮ ಹಕ್ಕನ್ನು ಕೇಳಬಹುದೆಂದರು.
ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಬಣ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರ್ ಮಾತನಾಡಿ ಚಂದ್ರಶೇಖರ್ ರವರು ತಾಲ್ಲೂಕು ಮಟ್ಟದಿಂದ ತಮ್ಮ ಹೋರಾಟವನ್ನು ಆರಂಭಿಸಿ ಈಗ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ತಮ್ಮ ಹೋರಾಟದ ದಾರಿಯನ್ನು ವಿಸ್ತರಿಸಿದ್ದಾರೆ.ಅವರು ಜಾತಿ ರಹಿತವಾಗಿ ಎಲ್ಲಾ ವರ್ಗದ ಶೋಷಿತರಿಗೆ ಹಾಗೂ ಸಾರ್ವಜನಿಕವಾಗಿ ಅನ್ಯಾಯವಾದಾಗ ಹೋರಾಟದ ರೂಪು,ರೇಷೆಗಳನ್ನು ರೂಪಿಸಿ ಅದಕ್ಕೆ ನ್ಯಾಯ ಕೊಡಿಸುವವರೆಗೂ ಬಿಡದೆ ಹೋರಾಟ ಮಾಡಿದ್ದರ ಫಲ ಹಲವಾರು ಸಂಘ ಸಂಸ್ಥೆಗಳಿಂದ ರಾಜ್ಯ,ಅಂತರರಾಜ್ಯಗಳಿಂದ ಹಲವಾರು ಸೇವಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.ಎಲ್ಲಿಯೂ ಪ್ರಶಸ್ತಿಗಳನ್ನು ಪಡೆದ ಬಗ್ಗೆ ಪ್ರಚಾರಕ್ಕೆ ಬಾರದೇ ತಮ್ಮ ನಿಸ್ವಾರ್ಥ ಸೇವೆಯಿಂದ ತಾಲ್ಲೂಕಿನ ಜನತೆಯ ಮನೆ ಮಾತಾಗಿದ್ದು ಅವರ ಮಾರ್ಗದರ್ಶನದಲ್ಲಿ ಬೆಳೆದ ನಾನೂ ಸೇರಿದಂತೆ ಹಲವಾರು ಹೋರಾಟಗಾರರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆಂದು ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕರಾದ ಬೇವಿನಹಳ್ಳಿ ಸರೋಜಮ್ಮ ,ಮಹಿಳಾ ವಿಭಾಗದ ಅತ್ತಹಳ್ಳಿ ರವಿ, ತಾಲೂಕು ಸಂಚಾಲಕ ಸೋಸ್ಲೆ ನಾರಾಯಣ್, ತಾಲೂಕು ಕಾರ್ಯಕಾರಿ ಸಮಿತಿ ಸದಸ್ಯ,ಕರುವಟ್ಟಿ ಮಹೇಂದ್ರ, ತಾಲೂಕು ಸಂಘಟನಾ ಸಂಚಾಲಕರಾದ
ಕ್ಯಾತನೂರು ಸುಂದರಮ್ಮ,ಕೋಣಗಳ್ಳಿ ಮಹದೇವಮ್ಮ, ಗೆಜ್ಜಗನಹಳ್ಳಿ ಜಯರಾಮ, ಸೊಸ್ಲೆ ನಾಗರಾಜು, ಕೈಯಂಬಳ್ಳಿ ಪುಟ್ಟಸ್ವಾಮಿ, ಸಂಜಯ್ ಸೇರಿದಂತೆ ಇತರರಿದ್ದರು.
ಎಂ.ನಾಗೇಂದ್ರ ಕುಮಾರ್

[…] […]