ಟಿ.ನರಸೀಪುರ : ಮಾನವೀಯತೆ ಉಳ್ಳವರು ಮಾತ್ರ ಜನಸೇವಕರಾಗಲು ಸಾಧ್ಯ ಎಂದು ಸಮಾಜ ಸೇವಕರಾದ ಎನ್.ಕೆ.ಎಫ್.ಫರೀದ್ ತಿಳಿಸಿದರು.
ಪಟ್ಟಣದ ಆಲಗೂಡಿನಲ್ಲಿರುವ ಎನ್.ಕೆ.ಎಫ್.ಪಬ್ಲಿಕ್ ಶಾಲೆಯಲ್ಲಿ ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕರಾದ ಆಲಗೂಡು ಡಾ.ಎಸ್.ಚಂದ್ರಶೇಖರ್ ರವರಿಗೆ ಕರ್ನಾಟಕ ಭೂಷಣ ಪ್ರಶಸ್ತಿ ಲಭಿಸಿದ ಹಿನ್ನಲೆಯಲ್ಲಿ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಮಾತನಾಡಿ ಚಂದ್ರಶೇಖರ್ ರವರು ಗಂಧದಕಡ್ಡಿ ಇದ್ದ ಆಗೆ.ಅದನ್ನು ಹಚ್ಚಿದರೆ ಸುತ್ತ,ಮುತ್ತ ಹೇಗೆ ಸುಹಾಸನೆ ಹರಡುತ್ತದೋ ಆಗೆ ಇವರು ಮಾಡುತ್ತಿರುವ ಸಮಾಜ ಸೇವೆ ಇಡೀ ತಾಲ್ಲೂಕಿನೆಲ್ಲೆಡೆ ಪಸರಿಸಿದೆ.

ನಮ್ಮ ಊರಿನ ಪ್ರಜೆಯನ್ನು ಗೌರವಿಸಲು ನಮ್ಮ ನೆರೆಯ ರಾಷ್ಟ್ರಗಳಾದ ದುಬೈ,ಶ್ರೀಲಂಕಾ ಸೇರಿದಂತೆ ನಮ್ಮ ದೇಶದ ರಾಜಧಾನಿ ದೆಹಲಿಯಲ್ಲೂ ಚಂದ್ರಶೇಖರ್ ರವರನ್ನು ಸನ್ಮಾನಿಸಲು ಆಹ್ವಾನ ನೀಡುತ್ತಾರೆಂದರೆ ಅವರ ಸಮಾಜ ಸೇವೆ,ನಡವಳಿಕೆಯನ್ನು ಗಮನಿಸಿ.ಸಮಾಜ ಸೇವೆ ಎಂದರೆ ಅದು ಸುಲಭದ ಕೆಲಸವಲ್ಲ.ಅದರಲ್ಲಿ ಮಾನಹಾನಿ, ನಿಷ್ಟೂರ,ವೈರುದ್ಯ,ದ್ವೇಷ ಹಾಗೂ ಅಸೂಯೆ ಪಡುವಂತ್ತಹವರ ಮದ್ಯೆ ಹೋರಾಡಿ ಶೋಷಿತರಿಗೆ ನ್ಯಾಯ ಕಲ್ಪಿಸುವುದು ಸುಲಭದ ಮಾತಲ್ಲ.ಅದಕ್ಕಾಗಿ ಅದೆಲ್ಲವನ್ನೂ ಎದುರಿಸುವ ಚಾಕಚಕತ್ಯೆ,ಬುದ್ದಿ ಶಕ್ತಿ ಹಾಗೂ ಜ್ಞಾನ ಭಂಡಾರ ಸಂಪಾದಿಸಿದ್ದರೆ ಮಾತ್ರ ಹೋರಾಟದಲ್ಲಿ ಯಶಸ್ಸು ಗಳಿಸಲು ಸಾಧ್ಯ.ಅಂತಹ ಒಂದು ಶಕ್ತಿ ಚಂದ್ರಶೇಖರ್ ರವರಲ್ಲಿರುವುದರಿಂದ ಅವರು ಯಾವುದೇ ಹೋರಾಟಕ್ಕೆ ಧುಮುಕಿದರೂ ಯಶಸ್ಸು ಅವರಿಗೆ ಕಟ್ಟಿಟ್ಟ ಬುತ್ತಿ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ರವರು ತುಳಿತಕ್ಕೆ,ಶೋಷಣೆಗೆ ಒಳಗಾಗಿ ತಮ್ಮ ಅದ್ವಿತೀಯ ಓದಿನ ಮೂಲಕ ಜ್ಞಾನ ಭಂಡಾರವನ್ನು ಸಂಪಾದಿಸಿ ತಮ್ಮ ಹೋರಾಟದ ಮೂಲಕ ಇಂದು ಇಡೀ ವಿಶ್ವದಲ್ಲೇ ಕೊಂಡಾಡುವಂತ್ತಹ ವ್ಯಕ್ತಿಯಾಗಿದ್ದಾರೆ.ಅದೇ ರೀತಿ ಸ್ವಾಮಿ ವಿವೇಕಾನಂದರು ಸಹ ನಮಗೆಲ್ಲಾ ಮಾದರಿಯಾಗಿದ್ದು ನಾವೆಲ್ಲರೂ ಇಂತಹ ಮಹನೀಯರನ್ನು ಅನುಸರಿಸಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕೋಣ ಎಂದರು.
ಈ ಸಂದರ್ಭದಲ್ಲಿ ಪುರಸಭೆ ನಾಮ ನಿರ್ದೇಶನ ಸದಸ್ಯ ಸಬೀಲ್,ಸಹೀದ್,ಫಾರೂಕ್ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು.
– ಎಂ.ನಾಗೇಂದ್ರಕುಮಾರ್
