ಟಿ.ನರಸೀಪುರ : ಚುನಾಯಿಸಿ ಗೆಲ್ಲಿಸಿದ ಮತದಾರರಿಗೆ ಜನಪ್ರತಿನಿಧಿಗಳು ಅವರ ಮನಸ್ಸಿನಲ್ಲಿ ನಾಯಕನಾಗಬೇಕು.ಆ ಸ್ಥಾನವನ್ನು ಕ್ಷೇತ್ರದ ಜನತೆ ಕೊಟ್ಟಿದ್ದರ ಫಲ ಅಧಿಕಾರ ಸಿಕ್ಕಿದೆ.ಜನರ ನಂಬಿಕೆಯನ್ನು ಉಳಿಸಿಕೊಂಡು,ಅವರ ಗೌರವಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಂಸದ ಸುನೀಲ್ ಬೋಸ್ ತಿಳಿಸಿದರು.
ತಾಲೂಕಿನ ಬಿ.ಬೆಟ್ಟಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನ 7 ಕೋಟಿ ರೂ ವೆಚ್ಚದ ರಸ್ತೆ ಡಾಂಬರೀಕರಣ, 30 ಲಕ್ಷ ರೂಗಳ ವೆಚ್ಚದ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಹಾಗೂ ವಿಶೇಷ ಘಟಕ ಅನುದಾನ 15 ಲಕ್ಷ ರೂಗಳ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ, ಗ್ರಾಮಸ್ಥರ ಅಹವಾಲು ಆಲಿಸಿ ಮಾತನಾಡಿದ ಅವರು ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರನ್ನು ನಿರಂತರವಾಗಿ ಬೆಂಬಲಿಸಿ ಕೈ ಹಿಡಿಯುವುದರ ಜೊತೆಗೆ ನನ್ನನ್ನೂ ಸಂಸದರನ್ನಾಗಿ ಆಯ್ಕೆ ಮಾಡಿದ್ದಕ್ಕೆ ನರಸೀಪುರ ವಿಧಾನಸಭಾ ಕ್ಷೇತ್ರದ ಜನರ ಋಣವನ್ನು ಅಭಿವೃದ್ಧಿ ಕೆಲಸಗಳಿಂದ ತೀರಿಸುತ್ತೀದ್ದೇವೆ.ರಾಜ್ಯ ಸರ್ಕಾರದ ಎರಡೂವರೆ ವರ್ಷಗಳ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ತಂದು ನರಸೀಪುರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿಪಡಿಸುತ್ತೇವೆ ಭರವಸೆ ನೀಡಿದರು.
ಬನ್ನೂರು ಕ್ಷೇತ್ರದಲ್ಲಿ ಶಾಸಕರಾಗುತ್ತಿದ್ದವರು ಇದುವರೆವಿಗೂ ಸಚಿವರಾಗಿಲ್ಲ. ಕ್ಷೇತ್ರ ಮರು ವಿಂಗಡಣೆಯಿಂದ ಮಹದೇವಪ್ಪ ಅವರು ಈ ಭಾಗದ ಶಾಸಕರಾಗುತ್ತಿದ್ದಂತೆ ರಾಜ್ಯ ಸರ್ಕಾರದಲ್ಲಿ ಸಚಿವರಾದರು. ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ನೀಡಿದಂತಹ ಬೆಂಬಲವನ್ನು ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ನನಗೂ ನೀಡಿ, ಮೊದಲ ಸ್ಪರ್ಧೆಯಲ್ಲಿ ಸಂಸದನಾಗಿ ಆಯ್ಕೆಗೊಂಡೆ.
ಇದನ್ನು ಓದಿ : ಟಿ.ನರಸೀಪುರದಲ್ಲಿ ಆಯುರ್ವೇದಿಕ್ ಆಸ್ಪತ್ರೆಯ ಅಭಿವೃದ್ಧಿಗೆ ಮುಂದಾಗುವ ಭರವಸೆ ನೀಡಿದ ಪುರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ತುಂಬಲ ಪ್ರಕಾಶ್
ಅಧಿಕಾರ ಕೊಟ್ಟದ್ದಕ್ಕೆ ಈ ಭಾಗದ ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ, ಶಾಶ್ವತ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದ್ದಕ್ಕೆ ಹೆಮ್ಮೆಯಿದೆ ಎಂದು ನುಡಿದರು. ಬನ್ನೂರು ಪಟ್ಟಣದ ಸಂತೆಮಾಳದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ರಾಜ್ಯ ಸರ್ಕಾರದ ವಿವೇಕ ಶಾಲೆ ಯೋಜನೆಯಡಿ 1,47,28,000 ರೂಗಳ ಅನುದಾನದಲ್ಲಿ 9 ಹೆಚ್ಚುವರಿ ಕೊಠಡಿಗಳ ನಿರ್ಮಾಣ ಸೇರಿದಂತೆ ಅತ್ತಹಳ್ಳಿ ಗ್ರಾಮದಲ್ಲಿ 30 ಲಕ್ಷ ರೂ ವೆಚ್ಚದ ಅಂಬೇಡ್ಕರ್ ಭವನ, 15 ಲಕ್ಷ ಎಸ್ಸಿಪಿ ಅನುದಾನದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ, ಬೇವಿನಹಳ್ಳಿ ಗ್ರಾಮದಲ್ಲಿ 25 ಲಕ್ಷ ಗುರುಗಳ ವೆಚ್ಚದ ಅಂಬೇಡ್ಕರ್ ಭವನ, 15 ಲಕ್ಷ ಎಸ್ಸಿಪಿ ಅನುದಾನದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಂಡಿ ನಿರ್ಮಾಣ, ಕೇತುಪುರ ಗ್ರಾಮದಲ್ಲಿ ಎಸ್ಸಿಪಿ ಅನುದಾನ.
25 ಲಕ್ಷ ರೂಗಳ ವಚನದಲ್ಲಿ ಸಿಮೆಂಟ್ ರಸ್ತೆ ಮತ್ತು ಚರಣದಿಮಾನ, ಉಕ್ಕಲಗೆರೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ, ನರಸೀಪುರ ಪಟ್ಟಣದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯದ ಮುಂಭಾಗ ಕಬಿನಿ ನದಿ ದಡದಲ್ಲಿ ಜಿ.ಪಂ ಅನುದಾನ 14 ಲಕ್ಷ ರೂಗಳ ವೆಚ್ಚದಲ್ಲಿ ಪುರುಷರು ಮತ್ತು ಮಹಿಳೆಯರ ವಸ್ತ್ರ ಬದಲಿಸುವ ಕುಟೀರಗಳ ನಿರ್ಮಾಣ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿವೇಕ ಶಾಲೆ ಯೋಜನೆ ಅಡಿ 98 ಲಕ್ಷ ರೂಗಳ ವೆಚ್ಚದಲ್ಲಿ 5 ಕೊಠಡಿಗಳ ನಿರ್ಮಾಣಕ್ಕೆ ಇದೇ ಸಂದರ್ಭದಲ್ಲಿ ಭೂಮಿ ಪೂಜೆ ಸಲ್ಲಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ಮೈಮುಲ್ ಅದ್ಯಕ್ಷ ಆರ್ ಚೆಲುವರಾಜ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಚನ್ನಕೇಶವ,ಪುರಸಭೆ ಮಾಜಿ ಅಧ್ಯಕ್ಷ ಮುನಾವರ್ ಪಾಷ, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೃಂದಾ ಕೃಷ್ಣೇಗೌಡ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಕೆ.ವಜ್ರೇಗೌಡ, ಮಾಜಿ ಉಪಾಧ್ಯಕ್ಷ ಬಿ.ಎಸ್. ರಾಮಲಿಂಗೇಗೌಡ, ಸಹಾಯಕ ಪ್ರಾಧ್ಯಾಪಕ ಡಾ.ಬಿ.ಕೆ.ಜ್ಞಾನಪ್ರಕಾಶ್, ಕಾಲೇಜಿನ ಪ್ರಾಂಶುಪಾಲ ಎಂ.ಬಿ. ನಂಜುಂಡಸ್ವಾಮಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಸಿ.ನಂದೀಶ್, ಗ್ರೇಡ್ ಟು ತಹಸೀಲ್ದಾರ್ ರಾಜಾಕಾಂತ್, ಜಿ.ಪಂ ತಾಂತ್ರಿಕ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ.ಎನ್.ಚರಿತ, ಜೆಇ ಶಿವಸ್ವಾಮಿ, ಲೋಕೋಪಯೋಗಿ ಎ ಇ ಇ ಸತೀಶ್ ಚಂದ್ರ, ಹಿರಿಯ ಇಂಜಿನಿಯರ್ಗಳಾದ ಆರ್.ಪೂರ್ಣಿಮಾ, ಬಿರೇಶ್, ಮೋಹನ್, ಸಂಸದರ ಆಪ್ತ ಸಹಾಯಕರಾದ ಬಿ.ಬಸವರಾಜು, ಸಂತೋಷ್, ತಾ.ಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಸದಸ್ಯರಾದ ಕುಕ್ಕೂರು ಗಣೇಶ, ರಾಮಲಿಂಗಯ್ಯ, ವಕೀಲ ಶಿವಮೂರ್ತಿ, ಪುರಸಭೆ ಸದಸ್ಯರಾದ ಶಿವಣ್ಣ, ಶಿವು, ಮಹೇಶ, ಕಾರ್ಮಿಕ ಅಧ್ಯಕ್ಷ ಶಿವಸಿದ್ದು, ಗುತ್ತಿಗೆದಾರರಾದ ಎ.ಎನ್.ಸ್ವಾಮಿ, ಚೇತನ್, ಕೆ.ಎಂ.ಮಧುಕುಮಾರ್, ಬಸವನಹಳ್ಳಿ ಮಹೇಂದ್ರ, ನಿರ್ಮಿತಿ ಕೇಂದ್ರದ ಜೆಇ ಮಹೇಂದ್ರಗೌಡ ಸೇರಿದಂತೆ ಇತರರು ಇದ್ದರು.
– ಎಂ.ನಾಗೇಂದ್ರಕುಮಾರ್

[…] ಓದು: ಟಿ. ನರಸೀಪುರ: ಜನರ ವಿಶ್ವಾಸ ಉಳಿಸುವ ಕೆಲಸವೇ… ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ […]