ಟಿ.ನರಸೀಪುರ : ಪ್ರಧಾನ ಮಂತ್ರಿ ಮುದ್ರಾ ಯೋಜನೆ ಎಂಬ ಪ್ರಬಂಧಕ್ಕೆ ಬಿ.ಹರ್ಷಿತ್ ರವರಿಗೆ ಪಿ ಎಚ್ ಡಿ ಪದವಿ ದೊರೆತಿದೆ.
ತಾಲ್ಲೂಕಿನ ಬನ್ನೂರು ಪಟ್ಟಣದ ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿದ್ದ ಬಿ.ಎನ್.ಬಸವರಾಜು( ಸಿಡಿಪಿಒ) ಪುತ್ರರಾದ ಹರ್ಷಿತ್. ಬಿ.ರವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿ ಎಚ್. ಡಿ.ಪದವಿ ಲಭಿಸಿದೆ. ಪ್ರೊ.ಈಶ್ವರ್. ಪಿ. ಇವರ ಮಾರ್ಗದರ್ಶನದಲ್ಲಿ ಪದವಿ ಲಭಿಸಿದ್ದು ಮುಂದಿನ ಘಟಿಕೋತ್ಸವದಲ್ಲಿ ಪ್ರಧಾನ ಮಾಡಲಾಗುವುದೆಂದು ವಿಶ್ವವಿದ್ಯಾನಿಲಯ ಪ್ರಕಟಣೆಯಲ್ಲಿ ತಿಳಿಸಿದೆ.
ವರದಿ :ಎಂ ನಾಗೇಂದ್ರ ಕುಮಾರ್
