ಟಿ.ನರಸೀಪುರ :ಪರಿಶಿಷ್ಟ ಜಾತಿಯ ಸ್ಮಶಾನಗಳ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಬಿಡುಗಡೆ ಮಾಡಿರುವ 10 ಕೋಟಿ ರೂಪಾಯಿ ತಾಂತ್ರಿಕ ಕಾರಣದಿಂದ ಸರ್ಕಾರದಲ್ಲೇ ಉಳಿದಿರುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಲ್.ನರಸಿಂಹಮೂರ್ತಿಯವರನ್ನು ದಸಂಸ ಬಣರಹಿತ ನಿಯೋಗ ಭೇಟಿ ಮಾಡಿ ವರದಿ ನೀಡಿರುವ ಬಗ್ಗೆ ದಸಂಸ ಜಿಲ್ಲಾ ಸಂಚಾಲಕ ಸಿ.ಉಮಾಮಹದೇವ್ ಮಾಹಿತಿ ನೀಡಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಿನ್ನೆ ಬೆಂಗಳೂರಿನ ವಿಧಾನಸೌಧಕ್ಕೆ ದಲಿತ ಸಂಘರ್ಷ ಸಮಿತಿ ಬಣ ರಹಿತ ನಿಯೋಗ ಭೇಟಿ ಕೊಟ್ಟು ನಮ್ಮ ಸಂಘಟನೆಯ ನಿರಂತರ ಹೋರಾಟದಿಂದ ಟಿ.ನರಸೀಪುರ ಮತ್ತು ವರುಣ ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿಯ ಸ್ಮಶಾನಗಳ ಅಭಿವೃದ್ಧಿಗಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರ ಇಚ್ಛಾಶಕ್ತಿಯಿಂದ ನೀವು ಬಿಡುಗಡೆ ಮಾಡಿರುವ 10 ಕೋಟಿ ರೂಪಾಯಿ ತಾಂತ್ರಿಕ ಕಾರಣದಿಂದ ಅಂದರೆ ಇತ್ತೀಚಿಗೆ ಸ್ಮಶಾನಗಳನ್ನು ಸರ್ಕಾರ ನಿಯಮ ತಂದು ” ಸಾರ್ವಜನಿಕ ಸ್ಮಶಾನ ” ಎಂದು ಮಂಜೂರು ಮಾಡುತ್ತಿರುವ ಕಾರಣ ಆರ್ ಟಿ ಸಿ ಯಲ್ಲಿಯು ಸಹ ಅದೇ ರೀತಿ ನಮೂದು ಆಗುತ್ತಿದೆ. ಮತ್ತೊಂದು ಕಡೆ ಅದೇ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮೂಲಕ ನೀವು ಪರಿಶಿಷ್ಟ ಜಾತಿಯವರ ಸ್ಮಶಾನಗಳ ಅಭಿವೃದ್ಧಿಗೆ ಎಂದು ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತಿದ್ದೀರಿ ಆದರೆ ನೀವು ಬಿಡುಗಡೆ ಮಾಡಿದ ದುಡ್ಡನ್ನು ನಿಮ್ಮ ಇಲಾಖೆಯೆ ಮೇಲಿನ ಕಾರಣದಿಂದ ಖರ್ಚು ಮಾಡಲು ಆಗುತ್ತಿಲ್ಲ ಏಕೆಂದರೆ ನೀವು ಬಿಡುಗಡೆ ಮಾಡಿದ್ದೂ ಪರಿಶಿಷ್ಟ ಜಾತಿ/ ಪಂಗಡದವರಿಗೆ ಎಂದು ಮೀಸಲಿರುವ ಹಣ ಎಂದು ನಿಮಗೆ ತಿಳಿದಿದೆ ಇದನ್ನು ಸರಿ ಪಡಿಸಿ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಈಗಾಗಲೇ ನಮ್ಮ ಸಮಿತಿ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಮನವಿ ನೀಡಿದ್ದೇವೆ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಮಾಜ ಕಲ್ಯಾಣ ಇಲಾಖೆಗೆ ಕಳುಹಿಸಿಕೊಟ್ಟು ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆನ್ನುವ ಪ್ರತಿಯನ್ನು ನೀಡಿದೆವು.
ಇದನ್ನು ಓದಿ: ಟಿ. ನರಸೀಪುರ : ‘ಸದಾಶಯ ಪ್ರಕಾಶನ’ದಿಂದ ಎಂ. ಜವರಾಜ್ ಅವರ ಹೊಸ ಕಾದಂಬರಿ ‘ಪೋಸ್ಟ್ ಮ್ಯಾನ್ ಗಂಗಣ್ಣ’ ಪ್ರಕಟಣೆಗೆ ಸಿದ್ಧ
ಅದನ್ನು ಪರಿಶೀಲನೆ ಮಾಡಿ ಮಾತನಾಡಿದ ಅವರು ಸರ್ಕಾರದ ಈ ನಿಯಮ ನಮಗೆ ತಿಳಿದಿಲ್ಲ ಯಾರು ಸಹ ಇಲ್ಲಿಯ ತನಕ ಈ ಬಗ್ಗೆ ದೂರನ್ನೇ ಹೇಳಿಲ್ಲ ಆಗೇ ಮೈಸೂರಿನ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯು ಈ ಬಗ್ಗೆ ಯಾವುದೇ ವರದಿಯನ್ನು ನೀಡಿಲ್ಲ ಎಂದು ಹೇಳಿದರು.

ನಂತರ ಮೈಸೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಂಗೇಗೌಡ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಈ ಬಗ್ಗೆ ಇಲ್ಲಿಯ ತನಕ ಏಕೆ ಯಾವ ಮಾಹಿತಿಯನ್ನು ಸರ್ಕಾರದ ಮಟ್ಟಕ್ಕೆ ತಿಳಿಸಿಲ್ಲ ಎಂದು ಕೇಳಿ ತಕ್ಷಣವೇ ವರದಿಯನ್ನು ಸಮಾಜ ಕಲ್ಯಾಣ ಇಲಾಖೆ ಆಯುಕ್ತರಿಗೆ ಕಳುಹಿಸಿ ಕೊಡಿ ಎಂದು ಸೂಚನೆ ನೀಡಿರುತ್ತಾರೆಂದರು.
ಮುಂದುವರಿದು ಮಾತನಾಡಿ ಇದನ್ನು ನೋಡಿದರೆ ಸಮಾಜ ಕಲ್ಯಾಣ ಇಲಾಖೆ ಅನುದಾನ ಕಡೆಗೆ ಖರ್ಚು ಮಾಡದೇ ಆಗೇ ಉಳಿದು ಸರ್ಕಾರಕ್ಕೆ ಮತ್ತೆ ಮುಂದಿನ ಬಜೆಟ್ ವೇಳೆಗೆಲ್ಲಾ ವಾಪಸ್ಸು ಹೋಗುತ್ತದೆ.ಇದು ಅತ್ಯಂತ ಬೇಜವಾಬ್ದಾರಿಯನ್ನ ತೋರುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಬಣ ರಹಿತ ಜಿಲ್ಲಾ ಸಂಘಟನಾ ಸಂಚಾಲಕರಾದ ಅಲತ್ತೂರು ಶಿವರಾಜ್, ಟಿ. ನರಸೀಪುರ ತಾಲ್ಲೂಕು ಸಂಚಾಲಕ ಕೇತುಪುರ ಶಿವಪ್ರಕಾಶ್, ರವೀಂದ್ರ, ನಿಂಗರಾಜು ಇದ್ದರೆಂದು ತಿಳಿಸಿದರು.
ಎಂ.ನಾಗೇಂದ್ರಕುಮಾರ್
