ಟಿ.ನರಸೀಪುರ : ಭಾರತೀಯ ಜನತಾ ಪಕ್ಷದ ಕ್ಷೇತ್ರದ ಹಿರಿಯ ನಾಯಕರು, ರೈತಪರ ಹೋರಾಟಗಾರರು, ಬಿ.ಎಸ್ ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯೂ ಆಗಿದ್ದ ಮೂಗೂರಿನ ಗೌಡ್ರು ಪ್ರಕಾಶ್ (52) ಅವರು ಅಕಾಲಿಕ ಮರಣ ಹೊಂದಿದ್ದಾರೆ. ಮೃತರು ಪತ್ನಿ ಹಾಗೂ ಮಗಳು ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದು,ರಾಜಕೀಯ ಧುರೀಣರು,ರೈತ ಮುಖಂಡರು ಸೇರಿದಂತೆ ಗ್ರಾಮಕ್ಕೆ ಗ್ರಾಮವೇ ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ,ಎಲ್.ಆರ್.ಮಹದೇವಸ್ವಾಮಿ, ವೈದ್ಯರಾದ ಡಾ.ರೇವಣ್ಣ,ದಯಾನಂದಪಟೇಲ್,ಸಾಮ್ರಾಟ್ ಸುಂದರೇಷನ್,ತೊಟ್ಟವಾಡಿ ಅನಿಲ್ ಕುಮಾರ್, ಕರೋಹಟ್ಟಿ ಮಹದೇವಯ್ಯ,ಬಸವರಾಜು, ಶಾಂತರಾಜು,ಸಿ.ಎಂ.ಮಹದೇವಯ್ಯ,ಡಾ.ವೀರಭದ್ರಸ್ವಾಮಿ,ಅಶೋಕ್,ಬನ್ನೂರು ರಾಮಚಂದ್ರ,ಕುರುಬೂರು ಶಿವು,ಚಿದರವಳ್ಳಿ ಲಕ್ಮಣ್,ಮುದ್ದುಕೃಷ್ಣ,ಪರಶಿವಮೂರ್ತಿ ಸೇರಿದಂತೆ ಅನೇಕ ಪ್ರಮುಖರು ಕಂಬನಿ ಮಿಡಿದಿದ್ದಾರೆ.
ವರದಿ- ಎಂ.ನಾಗೇಂದ್ರಕುಮಾರ್*
