ಟಿ.ನರಸೀಪುರ : ಹೆಲ್ತ್ ಕೇರ್ ಎಕ್ಸ್ ಲೆನ್ಸ್ ಪ್ರಶಸ್ತಿಗೆ ಭಾಜನರಾಗಿ ಪ್ರಶಸ್ತ ಪಡೆದ ಡಾ.ರೇವಣ್ಣ ರವರಂತಹ ವೈದ್ಯರು ಎಲ್ಲಾ ಜಿಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಇದ್ದರೆ ಉತ್ತಮ ಚಿಕಿತ್ಸೆ ಪಡೆದು ನಾಲ್ಕಾರು ಕಾಲ ಹೆಚ್ಚಿಗೆ ಬದುಕಬಹುದೆಂದು ಮೈಸೂರು ಗ್ರಾಮಾಂತರ ಎಸ್ ಸಿ ಮೋರ್ಚಾ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಆಲಗೂಡು ಎಂ. ಮಂಜು ತಿಳಿಸಿದರು.
ಪಟ್ಟಣದ ಖಾಸಗಿ ಕ್ಲಿನಿಕ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಖ್ಯಾತ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ.ರೇವಣ್ಣರವರನ್ನು ಸನ್ಮಾನಿಸಿ ಮಾತನಾಡಿ ಸರ್ಕಾರಿ ಸೇವೆಯಲ್ಲೂ ತಾವು ಸೇವೆ ಸಲ್ಲಿಸಿದ ಎಲ್ಲಾ ಸ್ಥಳಗಳಲ್ಲೂ ಉತ್ತಮ ವೈದ್ಯರೆಂದು ಬಿರುದು ಪಡೆದು ಟಿ.ನರಸೀಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಕೆಲವೇ ತಿಂಗಳುಗಳಲ್ಲೇ ಇಡೀ ತಾಲ್ಲೂಕಿನ ಜನರ ಆರಾದ್ಯ ದೈವ ಎಂದು ಬಿಂಬಿಸಿಕೊಂಡು ಉತ್ತಮ ಚಿಕಿತ್ಸೆ ನೀಡುವ ಮೂಲಕ ಜನಾನುರಾಗಿ ಎಂದು ಗುರುತಿಸಿಕೊಂಡ ಇವರನ್ನು ಭಾರತೀಯ ಜನತಾ ಪಾರ್ಟಿ ಟಿ.ನರಸೀಪುರ ವಿಧಾನ ಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಮೂಲಕ ಅವರ ಸೇವೆಯನ್ನು ರಾಜಕೀಯದಲ್ಲಿ ಬಳಸಿಕೊಂಡು ಅಧಿಕಾರ ಸಿಕ್ಕರೆ ಇನ್ನೂ ಹೆಚ್ಚಿನ ಗುಣ ಮಟ್ಟದ ಉಚಿತ ಚಿಕಿತ್ಸೆ ನೀಡುವ ಎಲ್ಲಾ ಯೋಜನೆಗಳನ್ನು ಪೂರ್ವ ತಯಾರಿ ಮಾಡಿಕೊಂಡಿದ್ದರು.ಆದರೆ ದುರದೃಷ್ಟವಶಾತ್ ಚುನಾವಣೆಯಲ್ಲಿ ಸೋಲು ಅನುಭವಿಸಿದರು ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಎದುರಾಳಿಗಳಿಗೆ ಸ್ಪರ್ಧೆ ನೀಡಬಲ್ಲರೆಂದು ಮನವರಿಕೆಯಾಗಿದೆ.ಜೊತೆ,ಜೊತೆಗೆ ಖಾಸಗಿ ಕ್ಲಿನಿಕ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರೂ ತಮ್ಮ ಸಾಮಾಜಿಕ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಾ ಜನರಿಗೆ ಆಪತ್ಬಾಂಧವರಾಗಿದ್ದಾರೆ.

ಯಾವುದೇ ರೋಗವಿರಲಿ ಅವರು ಚಿಕಿತ್ಸೆ ನೀಜಿ ಗುಣ ಪಡಿಸಬಲ್ಲರು.ಅವರ ಪ್ರೀತಿ ಮತ್ತು ದೈರ್ಯದ ಮಾತುಗಳು ರೋಗಿಯ ಅರ್ಧ ಖಾಯಿಲೆಯನ್ನು ಗುಣ ಪಡಿಸುತ್ತದೆ.ರೋಗಿಯನ್ನು ಮುಟ್ಟಿ,ತಟ್ಟಿ ಸಂಪೂರ್ಣ ತಪಾಸಣೆ ಮಾಡಿ ರೋಗಕ್ಕೆ ತಕ್ಕಂತೆ ಚಿಕಿತ್ಸೆ ನೀಡುತ್ತಾ ಎಷ್ಟೋ ಸೀರುಯಸ್ ಕೇಸ್ ಗಳನ್ನು ಬದುಕುಳಿಸಿದ ಕೀರ್ತಿ ಇವರಿಗೆ ಸಲ್ಲಬೇಕು.ಇವರ ಈ ಸೇವೆಗಳನ್ನೇ ಗುರುತಿಸಿದ ಸ್ಟಾರ್ ಸುವರ್ಣ ಟಿ.ವಿ.ಯವರು ವೈದ್ಯ ಲೋಕದ ಅಪ್ರತಿಮ ಸಾಧಕ ಹೆಲ್ತ್ ಕೇರ್ ಎಕ್ಸಲೆನ್ಸ್ 2025 ಪ್ರಶಸ್ತಿ ನೀಡಿ ಗೌರವಿಸಿದೆ.ನಮ್ಮ ತಾಲ್ಲೂಕಗೆ ಹೆಮ್ಮೆ ತರುವ ವಿಷಯವಾಗಿದ್ದು ದೇವರು ಅವರಿಗೆ ಆರೋಗ್ಯ, ಆಯುಷ್ಯನ್ನು ನೂರ್ಕಾಲ ನೀಡಿ ನಮ್ಮಂತಹ ಎಷ್ಚೋ ಜನರ ಬದುಕಿಗೆ ಬೆಳಕಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದರು.
ಈ ಸಂದರ್ಭದಲ್ಲಿ ಮೈಸೂರು ಗ್ರಾಮಾಂತರ ಎಸ್ ಟಿ ಮೋರ್ಚಾ ಅಧ್ಯಕ್ಷ ಮುದ್ದುಕೃಷ್ಣ, ಬೈರಾಪುರ ಮಹಾ ಶಕ್ತಿ ಕೇಂದ್ರದ ನಿಕಟಪೂರ್ವ ಅಧ್ಯಕ್ಷರಾದ ಸೋಮಣ್ಣ,ಅಡುಗೆ ಪ್ರಭು, ವಿಜಿ,ಮಹೇಶ್, ಬೈರಾಪುರ ಶಕ್ತಿ ಕೇಂದ್ರ ಅಧ್ಯಕ್ಷರಾದ ನಂದೀಶ್, ಆಟೋ ಮೂರ್ತಿ, ರಜತ್, ಕುಮಾರ್,ಪ್ರದೀಪ್ ಇದ್ದರು.
ಎಂ.ನಾಗೇಂದ್ರಕುಮಾರ್
