ಟಿ.ನರಸೀಪುರ : ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆ ವರದಿ ಮಾಡುವಾಗ ಯಾವ ಜಾತಿಯ ಸಂಪ್ರದಾಯ ಎಂದು ಹೇಳುವುದು ಮಾಧ್ಯಮಗಳಲ್ಲಿ ನಿಲ್ಲಲಿ ಎಂದು ದಸಂಸ ಜಿಲ್ಲಾ ಸಂಚಾಲಕ (ಬಣರಹಿತ) ಸಿ.ಉಮಾಮಹದೇವ್ ಆಗ್ರಹಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಮಾಧ್ಯಮಗಳಲ್ಲಿ ವ್ಯಕ್ತಿಯ ಅಂತ್ಯಕ್ರಿಯೆ ಮಾಡಿದ್ದನ್ನು ಒಕ್ಕಲಿಗ ಲಿಂಗಾಯತ…..ಇತ್ಯಾದಿ ಸಂಪ್ರದಾಯಾದ ಮೂಲಕ ಮಾಡಲಾಯಿತು ಅಂತ ಒತ್ತಿ ಒತ್ತಿ ಹೇಳುತ್ತಾರೆ ಅದು ಖ್ಯಾತ ಹಿರಿಯ ಬಹುಭಾಷ ನಟಿ ಬಿ. ಸರೋಜ ದೇವಿ ಅವರ ವಿಷಯದಲ್ಲೂ ಮುಂದುವರೆದಿದೆ.ಯಾವ ಸಂಪ್ರದಾಯದಲ್ಲಿ ಮಾಡಲಾಯಿತು ಎಂದು ಹೇಳದೆ ಅಂತ್ಯಕ್ರಿಯೆ ನಡೆಸಲಾಯಿತು ಅಂದರೆ ಯಾರಾದರೂ ಅಕ್ಷೆಪಣೆ ಮಾಡುತ್ತಾರೆಯೇ…ಎಂದು ಪ್ರಶ್ನಿಸಿದರು.
ಸತ್ತ ವ್ಯಕ್ತಿಯ ಅಂತ್ಯ ಕ್ರಿಯೆಲ್ಲಿ ಜಾತಿಯನ್ನ ತರುವ ಅಗತ್ಯ ಇದೆಯಾ.ಈ ದೇಶದಲ್ಲಿ ದಲಿತರು ಬದುಕಿದ್ದಾಗಲೂ ಜಾತಿಯನ್ನ ಹೇಳಿಕೊಳ್ಳಲು ಆಗಲ್ಲ, ಒಂದು ಹೋಟೆಲ್ ಅಂಗಡಿ ಯಾವುದನ್ನೂ ಜಾತಿಯಿಂದ ಹೆಸರಿಸಲು ಆಗಲ್ಲ, ಸತ್ತಮೇಲೂ ಹೇಳಿಕೊಳ್ಳಲು ಆಗಲ್ಲ….
ಇದು ಮಾಧ್ಯಮಗಳಲ್ಲಿ ಚರ್ಚೆ ಆಗಲ್ಲ ಅದು ವಿಪರ್ಯಾಸ. ನಿಜವಾಗಿಯೂ ಮಾಧ್ಯಮದ ಕರ್ತವ್ಯ ಪ್ರಜ್ಞೆ ಈ ವಿಚಾರದಲ್ಲಿ ಜಾಗೃತವಾಗಬೇಕಿದೆ ಎಂದರು.
– ಎಂ.ನಾಗೇಂದ್ರ ಕುಮಾರ್

[…] […]