ಟಿ.ನರಸೀಪುರ : ಪುರಸಭೆಯಲ್ಲಿ ನಡೆದಿರುವ ಸಾರ್ವಜನಿಕ ತೆರಿಗೆ 40 ಕೋಟಿ ರೂ ವಂಚನೆ ಪ್ರಕರಣ ಮತ್ತು ಭ್ರಷ್ಟಾಚಾರದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಗಾಗಿ ಅಪರಾದ ತನಿಖೆ ವಿಭಾಗ (ಸಿಐಡಿ) ಗೆ ಸರ್ಕಾರ ವಹಿಸಬೇಕೆಂದು ಒತ್ತಾಯಿಸಿ ಆಲಗೂಡು ಡಾ.ಎಸ್.ಚಂದ್ರಶೇಖರ್ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿ ಭೀಮವಾದ ಪ್ರತಿಭಟನಾ ಧರಣಿ ಮೂಲಕ ಸರ್ಕಾರಕ್ಕೆ ತಹಶಿಲ್ದಾರ್ ಮುಖೇನ ಮನವಿ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ದಸಂಸ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಗೆ,ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗಳು ಜಂಟಿಯಾಗಿ ಪ್ರತಿಭಟನೆ ನಡೆಸಿ ಮಾತನಾಡಿ ಸಾರ್ವಜನಿಕ ತೆರಿಗೆ ಹಣವನ್ನು ವಂಚಿಸಿರುವುದರ ಬಗ್ಗೆ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ.ಎನ್.ನಂಜುಂಡಸ್ವಾಮಿ ವಿರುದ್ಧ ಖುುದ್ದು ಮುಖ್ಯಾಧಿಕಾರಿಗಳೇ ಪೊಲೀಸ್ ಇಲಾಖೆಗೆ ದೂರನ್ನು ಸಲ್ಲಿಸಿ ಅದರಲ್ಲಿ 3,43,626 ಲಕ್ಷ ರೂಗಳ ಆಸ್ತಿ ತೆರಿಗೆಯನ್ನು ಪಾವತಿಸಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ವಂಚಿಸಿದ್ದಾರೆಂದು ದೂರು ಸಲ್ಲಿಸಿದ್ದಾರೆ. ಇದರಲ್ಲೇ ಅರ್ಥವಾಗುತ್ತದೆ ಈ ಹಗರಣದಲ್ಲಿ ಮುಖ್ಯಾಧಿಕಾರಿಗಳು ಸಹ ಶಾಮೀಲಾಗಿದ್ದಾರೆನ್ನುವುದು.ತಮ್ಮ ಆಪ್ತರ ಬಳಿ 40 ಕೋಟಿ ಎಂದು ಮಾತನಾಡಿ ದೂರಿನಲ್ಲಿ ಲಕ್ಷದ ಲೆಕ್ಕದಲ್ಲಿ ತೋರಿಸಿದ್ದಾರೆ.ಇದನ್ನೇ ಮುಖ್ಯ ಆಧಾರವಾಗಿಟ್ಟು ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಸಮಗ್ರ ತನಿಖೆ ನೆಡೆಸಿ
ಮುಖ್ಯಾಧಿಕಾರಿಗಳ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಕರ್ತವ್ಯ ಏನು?ಈ ಅಧಿಕಾರಿಗಳ ವಿರುದ್ಧ ಏಕೆ ಮುಖ್ಯಾಧಿಕಾರಿಗಳು ದೂರು ನೀಡಿಲ್ಲ ಎಂಬುದು ನಿಗೂಢ ಪ್ರಶ್ನೆಯಾಗಿದೆ.ಅಧಿಕಾರಿಗಳ ರಕ್ಷಣೆಗೆ ಮುಖ್ಯಾಧಿಕಾರಿಗಳು ನಿಂತಿದ್ದಾರೋ ಎಂಬ ಅನುಮಾನ ಸಾರ್ವಜನಿಕವಾಗಿ ಚರ್ಚೆ ಆಗುತ್ತಿದ್ದು ಸಂಬಂಧಿಸಿದ ಅಧೀನ ಅಧಿಕಾರಿ ನೌಕರರ ವಿರುದ್ಧವೂ ಸಮಗ್ರ ತನಿಖೆ ಮಾಡಿ ಕರ್ತವ್ಯ ನಿರ್ಲಕ್ಷ ವಹಿಲಿರುವ ತಪ್ಪಿತಸ್ಥ ಅಧಿಕಾರಿಗಳನ್ನು ಕರ್ತವ್ಯದಿಂದ ವಜಾ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಜೈಲಿಗಟ್ಟಿ
ರೈತ ಸಂಘದ ಮುಖಂಡ ಕಳ್ಳೀಪುರ ಮಹದೇವಸ್ವಾಮಿ ಮಾತನಾಡಿ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರವರ ಮೊಮ್ಮಗ
ಪ್ರಜ್ವಲ್ ರೇವಣ್ಣನವರನ್ನು ಹೇಗೆ ಜೈಲಿಗಟ್ಟಿದ್ದಾರೋ ಅದೇ ರೀತಿ ಟಿ.ನರಸೀಪುರ ಪುರಸಭೆಯಲ್ಲಿ ಕೋಟಿಗಟ್ಟಲೇ ಭ್ರಷ್ಟಾಚಾರ ಮಾಡಿರುವ ಪುರಸಭೆ ಮುಖ್ಯಾಧಿಕಾರಿ ಸೇರಿದಂತೆ ತಪ್ಪು ಮಾಡಿರುವವರನ್ನು ಜೈಲಿಗಟ್ಟಬೇಕು.ಪುರಸಭೆಯಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಅಭಿವೃದ್ಧಿ ಕೆಲಸಗಳು ಇಂತಹವರಿಂದ ಹಿನ್ನಡೆಯಾಗಿವೆ.ಸರ್ಕಾರ ಹಣ ಮಂಜೂರು ಮಾಡಿದ್ದರೂ ಅಭಿವೃದ್ಧಿ ಕೆಲಸಗಳನ್ನು ಮಾಡದೇ ಸಾರ್ವಜನಿಕರಿಗೆ ವಂಚಿಸುತ್ತಿರುವವರನ್ನು ಕಾನೂನಾತ್ಮಕವಾಗಿ ಶಿಕ್ಷೆಗೆ ಒಳ ಪಡಿಸಿ ಮುಂದಿನ ದಿನ ಮಾನಗಳಲ್ಲಿ ಮುಂಬರುವ ಚುನಾಯಿತ ಜನಪ್ರತಿನಿಧಿಗಳಿಗೆ ಎಚ್ಚರಿಕೆ ಗಂಟೆಯಾಗಬೇಕೆಂದರು.

ಈ ಸಂದರ್ಭದಲ್ಲಿ ಸಂಘಟನೆಯ ಕೆಂಪಯ್ಯನಹುಂಡಿ ರಾಜು, ಮರಿಸ್ವಾಮಿ ಕನ್ನಾಯಕನಹಳ್ಳಿ , ಪ್ರಭಾಕರ್ ಕೊಳತ್ತೂರು, ಮನೋಜ್ ಕುಮಾರ್ ನೆರೆಗ್ಯಾತನಹಳ್ಳಿ, ಗೋವಿಂದರಾಜು ಸೋಮನಾಥಪುರ,ಕಳ್ಳೀಪುರ ಮಹದೇವಸ್ವಾಮಿ,ಬನ್ನೂರು ರಾಮಕೃಷ್ಣ, ತಲಕಾಡು ಚೆಲುವರಾಜು,ಅತ್ತಹಳ್ಳಿ ರಾಜು,ಮೂಗೂರು ಶಾಂತನಾಗರಾಜು,ಗಾಣಿಗನಕೊಪ್ಪಲು ಶಂಕರೇಗೌಡ,ಹನುಮನಾಳು ಜಗದೀಶ್,ಚಾಮನಹಳ್ಳಿ ವೆಂಕಟೇಶ್, ಅತ್ತಹಳ್ಳಿ ಶಿವನಂಜು,ಸೋಮಣ್ಣ,ಮಹದೇವಸ್ವಾಮಿ, ರಾಚಪ್ಪ ತೊಟ್ಟವಾಡಿ,ನಿಲಸೋಗೆ ಕುಮಾರ್, ಸೋಸಲೆ ಶಿವಕುಮಾರ್,ಮಹೇಶ್, ಕುಪ್ಯ ಗವಿಸಿದ್ದಯ್ಯ,ಹೆಮ್ಮಿಗೆ ಪ್ರಸನ್ನ,ಮಲ್ಲೇಶ್, ಚೌಹಳ್ಳಿ ಪರಶುರಾಮ,ಕನ್ನಳ್ಳಿ ಶಿವಕುಮಾರ್, ಕೆಂಪಯ್ಯನಹುಂಡಿ ಜಯಣ್ಣ,ಬೆನಕನಹಳ್ಳಿ ಸ್ವಾಮಿ,ಬಿಲಿಗೆರೆಹುಂಡಿ ಮಹದೇವಸ್ವಾಮಿ,ಯಡದೊರೆ ಕೃಷ್ಣ,ರವಿಕಾಂತ್,ಕುರುಬೂರು ಶಿವು,ಬೈರಾಪುರ ಅರ್ಜುನ್,ಚಿನ್ನಸ್ವಾಮಿ, ಹಿರಿಯೂರು ಮಹದೇವಸ್ವಾಮಿ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು.
– ಎಂ.ನಾಗೇಂದ್ರಕುಮಾರ್
