ಟಿ.ನರಸೀಪುರ : ದೇಶಕ್ಕೆ ಸ್ವಾತಂತ್ರ್ಯಲಭಿಸಿದೆ.ಅದರ ಹಂಚಿಕೆಯನ್ನು ಅಂದರೆ ಎಲ್ಲಾ ರಂಗದ ಅಧಿಕಾರವನ್ನು ಸಮಾನವಾಗಿ ದೇಶದ ಎಲ್ಲಾ ವರ್ಗದ ಜನರಿಗೆ ದೊರೆಯುವಂತೆ ಮಾಡಿದಾಗ ಮಾತ್ರ ಸ್ವಾತಂತ್ರ್ಯ ಆಚರಣೆಗೆ ಹೆಚ್ಚು ಮಹತ್ವ ಬರುತ್ತದೆಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ತುಂಬಲ ಪ್ರಕಾಶ್ ತಿಳಿಸಿದರು.
ಪುರಸಭೆ ಮುಂಭಾಗ ಪುರಸಭೆ ವತಿಯಿಂದ ಜರುಗಿದ 79 ನೇ ಸ್ವತಂತ್ರ್ಯ ದಿನಾಚರಣೆ ವೇಳೆ ಪುರಸಭೆ ಅಧ್ಯಕ್ಷೆ ವಸಂತ ಶ್ರೀಕಂಠ ರವರು ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದ ನಂತರ ಮಾತನಾಡಿದ ತುಂಬಲ ಪ್ರಕಾಶ್ ಭಾರತ ಸಂಪನ್ಮೂಲಭರಿತ ರಾಷ್ಟ್ರವಾಗಿದ್ದ ಕಾರಣ ಬ್ರಿಟಿಷರು, ಡಚ್ಚರು, ಫ್ರೆಂಚರು ನಮ್ಮನ್ನು ಆಳಿದ್ದಾರೆ. ಆದರೆ, ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ರಾಷ್ಟ್ರದ ಪ್ರಗತಿಗೆ ಹಲವಾರು ಮಹನೀಯರು ಕೊಡುಗೆ ನೀಡಿದ್ದಾರೆ ಎಂದರು.

ಪುರಸಭೆ ಸದಸ್ಯ ಮಂಜುನಾಥ್ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟದ ಪ್ರೇರಣೆಯಿಂದ ದೇಶಾದ್ಯಂತ ಹಲವಾರು ಮಂದಿ ಅಸಹಕಾರ ಚಳುವಳಿ, ದೇಶ ಬಿಟ್ಟು ತೊಲಗಿ ಚಳುವಳಿಗಳಲ್ಲಿ ಹೋರಾಟ ಮಾಡಿದ್ದಾರೆ.ಭಾರತೀಯ ಸ್ವಾತಂತ್ರ್ಯ ಚಳವಳಿಗೆ ಮಹಾತ್ಮ ಗಾಂಧಿಯವರ ಕೊಡುಗೆಯನ್ನು ಪದಗಳಲ್ಲಿ ಅಳೆಯಲು ಸಾಧ್ಯವಿಲ್ಲ. ಅವರ ಹೋರಾಟ ಚಳುವಳಿ, ನೀತಿಗಳು ಅಹಿಂಸಾತ್ಮಕವಾಗಿದ್ದವು.
ಅವರು ತಮ್ಮ ಅಹಿಂಸಾ ಪ್ರತಿಭಟನೆಗೆ ಹೆಸರುವಾಸಿಯಾಗಿದ್ದರು ನಾವು ಇಂದು ಅವರೆಲ್ಲರನ್ನು ನೆನೆದು ಅವರ ಹಾದಿಯಲ್ಲಿ ಸಾಗಬೇಕು ಎಂದರು.
ಸದಸ್ಯ ರೂಪ ಪರಮೇಶ್ ಮಾತನಾಡಿ ದೇಶಾದ್ಯಂತ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ ಆದರೂ ದೇಶದಲ್ಲಿ ಮಹಿಳಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ನಿಂತಿಲ್ಲಮಹಾತ್ಮಗಾಂಧಿಜೀ ಕಂಡ ರಾಮ ರಾಜ್ಯ ಕನಸು ನನಸಾಗಿಲ್ಲ ಎಂದರು.

ಪುರಸಭಾ ಅಧ್ಯಕ್ಷೆ ವಸಂತ ಶ್ರೀಕಂಠ, ಸದಸ್ಯರುಗಳಾದ ಎಸ್. ಕೆ. ಕಿರಣ್, ಅಹಮದ್ ಸಹೀದ್, ಮಂಜುನಾಥ್ ಸಿಸ್ಟಮ್ ಸಿದ್ದು, ರೂಪಶ್ರೀ ಪರಮೇಶ್, ತೇಜಸ್ವಿನಿ, ನಾಗರತ್ನ, ನಾಮ ನಿರ್ದೇಶನ ಸದಸ್ಯರುಗಳಾದ ಗುರುಸ್ವಾಮಿ, ಸಬಿಲ್, ನಾಗರಾಜು, ಪುರಸಭಾ ಮುಖ್ಯಾಧಿಕಾರಿ ತ್ರಿವೇಣಿ, ಆರ್. ಐ. ಅಶೋಕ್, ಸಮುದಾಯ ಸಂಘಟಕ ಮಹದೇವ ನಾಯಕ, ವ್ಯವಸ್ಥಾಪಕ ಮಹೇಂದ್ರ, ಮುಖಂಡರುಗಳಾದ ತಾ.ಪಂ.ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಶ್ರೀಕಂಠ ಮಾದೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ವರದಿ- ಎಂ.ನಾಗೇಂದ್ರಕುಮಾರ್
