ಟಿ.ನರಸೀಪುರ : ರಾಷ್ಟ್ರೀಯ ರೈತ ನಾಯಕರಾದ ಜಗಜಿತ್ ಸಿಂಗ್ ದಲೆವಾಲ್ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ರೈತ ರತ್ನ ಕುರುಬೂರು ಶಾಂತಕುಮಾರ್ ರವರ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರೈತ ಜಾಗೃತಿ ಯಾತ್ರೆ ಫೆ : 7 ನೇ ತಾರೀಖಿನಿಂದ ಕನ್ಯಾಕುಮಾರಿಯಲ್ಲಿ ಆರಂಭಗೊಂಡಿದೆ.ಇದರ ಮುಖ್ಯ ಉದ್ದೇಶ ಡಾ.ಎಂ.ಎಸ್.ಸ್ವಾಮಿನಾಥನ್ ವರದಿ ಶಿಫಾರಸ್ಸನ್ನು ಜಾರಿಗೆ ತಂದು,ದೇಶದ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಹಾಗೂ ಕೃಷಿ ಉತ್ಪನ್ನಗಳ ಬೆಲೆಗೆ ಕನಿಷ್ಟ ಖಾತರಿ ಕಾನೂನು ಜಾರಿಯಾಗಬೇಕೆಂದು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಫೆ : 10 ಮಂಗಳವಾರ ಚಾಮರಾಜನಗರಕ್ಕೆ ಯಾತ್ರೆ ಆಗಮಿಸಲಿದೆ.ಈ ಯಾತ್ರೆಗೆ ವಿವಿಧ ರಾಜ್ಯಗಳ ರೈತ ಮುಖಂಡರು ಭಾಗವಹಿಸುತ್ತಿದ್ದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ರೈತ ಮುಖಂಡರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರೈತ ಯಾತ್ರೆಯನ್ನು ಯಶಸ್ವಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು.

ಕಿರಗಸೂರು ಶಂಕರ್ ಕಾರ್ಯಾಧ್ಯಕ್ಷರು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮೈಸೂರು-ಚಾಮರಾಜನಗರ ಜಿಲ್ಲೆ. ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಅಪ್ಪಣ್ಣ,ಕರೋಹಟ್ಟಿ ನಾಗರಾಜು ಯೋಗೀಶ್,ನಿಂಗರಾಜು,ರಘು,ಕಿರಣ್ ಇದ್ದರು.
-ಎಂ.ನಾಗೇಂದ್ರಕುಮಾರ್
