ಟಿ.ನರಸೀಪುರ : ತಾಲ್ಲೂಕಿನ ತೊಟ್ಟವಾಡಿ ಮೋಳೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶಿಷ್ಟವಾಗಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಶಾಲಾ ಮಕ್ಕಳು ಹೊಸ ಉಡುಗೊರೆ ತೊಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದು ನೋಡುಗರ ಗಮನ ಸೆಳೆಯಿತು.

ಶಾಲಾ ಸಹ ಶಿಕ್ಷಕರಾದ ಮೂಗೂರು ಎಂ.ಕೆ.ಸುಂದರ್ ರವರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಮೂಲಕ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದು,ಸಣ್ಣ ಮಕ್ಕಳಿಂದಲೇ ಉತ್ತಮ ಜೀವನ ರೂಪಿಸಿಕೊಳ್ಳುವುದರ ಬಗ್ಗೆ ಪಾಠ,ಪ್ರವಚನ,ಹಾಗೂ ರಾಷ್ಟ್ರ ನಾಯಕರುಗಳ ಜನ್ನ ಜಯಂತಿಗಳು ಬಂದಾಗ ಅದರ ವಿಶೇಷತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ ಸಹ ಶಿಕ್ಷಕ ಮೂಗೂರು ಎಂ.ಕೆ. ಸುಂದರ್ ಮಾತನಾಡಿ ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ಕೆಲಸ.ನಮಗೆ ಸಿಕ್ಕಿರುವ ಇಂತಹ ಪವಿತ್ರ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಉತ್ತಮ ಸಂಸ್ಕಾರ ಹಾಗೂ ಜೀವನ ರೂಪಿಸಿಕೊಳ್ಳುವ ಸನ್ಮಾರ್ಗದ ದಾರಿ ತೋರಿಸಿಕೊಟ್ಟರೆ ಖಂಡಿತ ಪ್ರಾಯಕ್ಕೆ ಬಂದಾಗ ಅದೇ ದಾರಿಯಲ್ಲಿ ನಡೆಯುವ ಅವಕಾಶ ಇರುತ್ತದೆ. ಅದಕ್ಕಾಗಿ ನನ್ನ ವೃತ್ತಿ ಜೀವನದಲ್ಲಿ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಬಿಡಬೇಕೆಂಬುದೇ ನನ್ನ ದ್ಯೇಯವಾಗಿದೆ ಎಂದರು.
ಗಣರಾಜ್ಯೋತ್ಸವ, ಅಂಬೇಡ್ಕರ್ ಜಯಂತಿ,ಸ್ವಾತಂತ್ರ್ಯ ದಿನಾಚರಣೆ,ಗಾಂಧಿ ಜಯಂತಿ ಸೇರಿದಂತೆ ಸಮಾಜ ಸುಧಾರಕ ಮಹನೀಯರ ಜಯಂತಿಗಳ ಆಚರಣೆ ಸಂದರ್ಭದಲ್ಲಿಯೂ ಅಲ್ಲದೇ ಸಾಮಾನ್ಯ ದಿನಗಳಲ್ಲೂ ಅವರು ನಡೆದು ಬಂದ ದಾರಿ,ಹೋರಾಟ ಹಾಗೂ ಅವರು ಎದುರಿಸಿದ ಸವಾಲುಗಳ ಕುರಿತು ಮಕ್ಕಳ ಮನಸ್ಸಿಗೆ ಹೊಕ್ಕುವ ರೀತಿಯಲ್ಲಿ ಹೇಳಿದರೆ ಮಕ್ಕಳು ಅನುಸರಿಸುತ್ತಾರೆಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಸದಾನಂದ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹದೇವಸ್ವಾಮಿ,ಗ್ರಾಮಸ್ಥರುಗಳಾದ ಸೋಮಣ್ಣ,ನಾಗಶೆಟ್ಚಿ,ಬಸವರಾಜು ಸೇರಿದಂತೆ ಇತರರಿದ್ದರು.
ಎಂ.ನಾಗೇಂದ್ರಕುಮಾರ್
