ಟಿ.ನರಸೀಪುರ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಸುರಕ್ಷಿತ ಹಾಗೂ ಗೌರವಯುತ ಪರಿಸರವನ್ನು ಕಲ್ಪಿಸುವ ಉದ್ದೇಶದಿಂದ ಸಂಸ್ಥೆಯ ಮಹಿಳಾ ಲೈಂಗಿಕ ಕಿರುಕುಳ ನಿವಾರಣಾ ಸಮಿತಿ ಹಾಗೂ ಐ.ಕ್ಯೂ.ಎಸ್ಸಿ. ವತಿಯಿಂದ “ನಿಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ: POSH ಮತ್ತು POCSO ಕಾರ್ಯಪದ್ಧತಿಗಳ ಅರಿವು ಕಾರ್ಯಕ್ರಮ” ಆಯೋಜಿಸಲಾಗಿತ್ತು.
ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವು ಮಹಿಳೆಯರ ಮೇಲೆ ಕೆಲಸದ ಸ್ಥಳದಲ್ಲಿ ನಡೆಯುವ ಲೈಂಗಿಕ ಕಿರುಕುಳ ತಡೆಗಟ್ಟುವ ಕಾನೂನು POSH – ಮತ್ತು ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಅಪರಾಧಗಳ ವಿರುದ್ಧದ ಕಾನೂನು POCSO ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶ ಹೊಂದಿತ್ತು.
ಕಾರ್ಯಕ್ರಮದಲ್ಲಿ ಕಾನೂನು ತಜ್ಞರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಮಕ್ಕಳ ಸುರಕ್ಷತೆ ವಿಷಯದಲ್ಲಿ ಪರಿಣಿತರರೂ ಸಾವಂತ್ ಬಿ. ಎಸ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಈ ಕಾನೂನುಗಳ ಅಡಿಯಲ್ಲಿ ಇರುವ ಹಕ್ಕುಗಳು, ಅಧಿಕಾರಗಳು ಮತ್ತು ವರದಿ ಮಾಡುವ ವಿಧಾನಗಳ ಬಗ್ಗೆ ಮನಮುಟ್ಟುವ ಹಾಗೆ ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಲೈಂಗಿಕ ಹಲ್ಲೆ ವಿರುದ್ಧದ ಕಾನೂನು ಅರಿವು ಮೂಡಿಸಿ, ಶೋಷಿತರು ನ್ಯಾಯವನ್ನು ಪಡೆಯಲು ಪ್ರೇರಣೆ ನೀಡಿ ಈ ಕಾರ್ಯಕ್ರಮದ ಗುರಿಯನ್ನು ಯಶಸ್ಸುಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಉದಯ್ ಕುಮಾರ್ ಹೆಚ್. ವಿ ರವರು ವಹಿಸಿದ್ದರು. ಕಾಲೇಜಿನ ಐ.ಕ್ಯೂ.ಏ. ಸಿ ಸಂಚಾಲಕರಾದ ಡಾ. ಅಮೀತ್, ಮಹಿಳಾ ಲೈಂಗಿಕ ಕಿರುಕುಳ ನಿವಾರಣಾ ಸಮಿತಿಯ ಸಂಚಾಲಕರಾದ ಡಾ. ರೇಷ್ಮಾ ಚಂಗಪ್ಪ, ಸದಸ್ಯರಾದ ಡಾ. ಕವಿತಾ ಆರ್, ಮಹಿಳಾ ಪೊಲೀಸ್ ಅಧಿಕಾರಿ, ಶ್ರೀ ಮಹೇಶ್ ಜಿ ಎನ್. ಜಿ.ಒ ಪ್ರತಿನಿಧಿ, ಕುಮಾರಿ ಲಾವಣ್ಯ ಎ.ಎನ್ ವಕೀಲರು, ಸಿ.ಡಿ.ಸಿ ಸದಸ್ಯರಾದ ಶ್ರೀಮತಿ ಸುಧಾ ಗುರುಮಲ್ಲು, ಸ್ಥಳೀಯ ಮಹಿಳಾ ಸದಸ್ಯರಾದ ಶ್ರೀಮತಿ ಪುಷ್ಪ. ವಿ, ಅಧ್ಯಾಪಕರುಗಳಾದ ಡಾ. ಕವಿತಾ.ಡಿ, ಡಾ. ಮುತ್ತಮ್ಮ ಕೆ.ಕೆ, ಕುಮಾರಿ ಸತ್ಯ ಶ್ರೀ ಎಸ್. ಡಿ, ಸಿ ಮತ್ತು ಡಿ ಗುಂಪಿನ ನೌಕರರಾದ ಕುಮಾರಿ ಮೀನಾ ಪಿ, ಕುಮಾರಿ ಪ್ರಮೀಳಾ ಹೆಚ್.ಎಂ, ಶ್ರೀಮತಿ ಭವ್ಯಶ್ರೀ. ಕೆ. ಎಸ್ ಸಿ.ಡಿ.ಪಿ.ಓ ಮಹಿಳಾ ಕಲ್ಯಾಣ ಇಲಾಖೆ ನಂಜನಗೂಡು, ಪೋಷಕರು, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಶಾಂತಲಾ, ಕುಮಾರಿ ಜೈಬಖಾನಂ, ಕುಮಾರಿ ಹರ್ಷಿತ.ಎಂ, ಆರ್ ಕುಮಾರಿ ಅಂಬಿಕಾ ಹಾಗೂ ಕಾಲೇಜಿನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇದ್ದರು.
– ಎಂ.ನಾಗೇಂದ್ರ ಕುಮಾರ
