ಟಿ.ನರಸೀಪುರ : ಮೀಸಲಾತಿ ವಿಚಾರದಲ್ಲಿ ಜಾತಿ ಜನ ಗಣತಿ ಪ್ರಮುಖ ಪಾತ್ರ ವಹಿಸುತ್ತದೆ.ಯಾರೋ ಬಂದು ಏನೇನೋ ಮಾತ್ನಾಡೋದು ಇವೆಲ್ಲಾ ಸರಿ ಬರಲ್ಲ.ನಾವಷ್ಟಿದ್ದೀವಿ…ಇಷ್ಟಿದ್ದೀವಿ ಅಂತ ಹೇಳ್ಕೊಳೋದು ಎಷ್ಟರ ಮಟ್ಟಿಗೆ ಸರಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ತಾಲ್ಲೂಕಿನ ಸೋಸಲೆ ಗ್ರಾಮದ ಬಹು ಬೇಡಿಕೆ ಮನವಿಯಾಗಿದ್ದ ಚಾವಡಿ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಸೋಸಲೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಹಂತ,ಹಂತವಾಗಿ ಹಣ ಬಿಡುಗಡೆ ಮಾಡಿಸುವುದಾಗಿ ತಿಳಿಸಿ, ಭಾರತ ದೇಶದಾದ್ಯಂತ ಮನೆ,ಮನೆಗೆ ಸಂವಿಧಾನ ಹಾಗೂ ಪೀಠಿಕೆ ತಲುಪುವಂತೆ ಮಾಡಿದ್ದೇವೆ.

ಪ್ರಮುಖ ಪಾತ್ರ:-
ಮೀಸಲಾತಿ ವಿಚಾರದಲ್ಲಿ ಜಾತಿ ಜನ ಗಣತಿ ಪ್ರಮುಖ ಪಾತ್ರ ವಹಿಸುತ್ತದೆ. ಯಾರೋ ಬಂದು ಏನೇನೋ ಮಾತ್ನಾಡೋದು ಇವೆಲ್ಲಾ ಸರಿ ಬರಲ್ಲ.ನಾವಷ್ಟಿದ್ದೀವಿ…ಇಷ್ಟಿದ್ದೀವಿ ಅಂತ ಹೇಳ್ಕೊಳೋದು.ಸರ್ವೇನೆ ಮಾಡ್ದೆ ಇವ್ರಿಗೇಗ್ ಗೊತ್ತಾಗ್ಬಿಡುತ್ತೆ.ಕರಾರುವಕ್ಕಾಗಿ ಸರ್ವೇ ಮಾಡಿದಾಗ ಯಾವ ತಕರಾರು, ಸ್ಪರ್ಧೆ ಹಾಗೂ ಪೈಪೋಟಿ ಇರುವುದಿಲ್ಲ.ಅದಾದ ನಂತರ ಸರ್ಕಾರ ತೀರ್ಮಾನ ಮಾಡುತ್ತದೆ ಎಂದರು.
ಕ್ಷೇತ್ರದ ಜನತೆಯಿಂದ ಸಚಿವ ಸ್ಥಾನ ಲಭಿಸಿದೆ:-
ನನ್ನನ್ನು ಗೆಲ್ಲಿಸಿ ಕಳುಹಿಸಿದ ನರಸೀಪುರ ಕ್ಷೇತ್ರದ ಜನತೆಯ ಆಶೀರ್ವಾದದ ಫಲ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಲು ಸಾಧ್ಯವಾಗಿದೆ.ನಿಮ್ಮ ಋುಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಆದರೆ ಅಭಿವೃದ್ಧಿ ಕೆಲಸಗಳನ್ನು ಮಾಡಿ ಕ್ಷೇತ್ರವನ್ನು ಮತ್ತಷ್ಟು ಮಾದರಿಯಾಗಿ ಮಾಡುತ್ತೇನೆಂದರು.

ಜನರಿಂದ ಜನರಿಗಾಗಿ:–
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಜನರಿಗಾಗಿ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದ್ದು,ನಮ್ಮ ರಾಜ್ಯದ ಮಾದರಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅಳವಡಿಸಿಕೊಂಡು ಅತ್ಯಂತ ಯಶಸ್ಸಿ ಯೋಜನೆಗಳೆನಿಸಿಕೊಂಡಿವೆ.ಗ್ಯಾರೆಂಚಿಯಿಂದ ರಾಜ್ಯ ಹಾಗೂ ಜನರ ಅಭಿವೃದ್ಧಿಗೆ ಯಾವುದೇ ತೊಡಕಿಲ್ಲ.ಎಲ್ಲಾ ಊಹಾ,ಪೋಹದ ಮಾತುಗಳಿಗೆ ಜನತೆ ಕಿವಿ ಕೊಡಬಾರದೆಂದರು.
ಸೋಸಲೆ ಗ್ರಾಮದ ಹಿರಿಯ ಮುಖಂಡರಾದ ಸೋಸಲೆ ಮಹದೇವಸ್ವಾಮಿ ಹಾಗೂ ಸಹಕಾರ ಸಂಘದ ಅಧ್ಯಕ್ಷರಾದ ಎಂ.ಪರಶಿವಮೂರ್ತಿ ರವರು ಸೋಸಲೆ ಗ್ರಾಮಕ್ಕೆ ಬೇಕಿರುವ ಕೆಲಸಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿ ಸುಮಾರು ಆರು ಕೋಟಿ ರೂಗಳನ್ನು ಬಿಡುಗಡೆ ಮಾಡಿದರೆ ಗ್ರಾಮಗ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸೋಸಲೆ ಪರಶಿವಮೂರ್ತಿ,ಹಿರಿಯ ಮುಖಂಡರಾದ ಸೋಸಲೆ ಮಹದೇವಸ್ವಾಮಿ,ಸೋಸಲೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೈಲಜಾ ಮಹೇಶ್,ಮಾಜಿ ಜಿ.ಪಂ.ಸದಸ್ಯ ಹೊನ್ನನಾಯಕ,ಮಾಜಿ ತಾ.ಪಂ.ಸದಸ್ಯ ಮಲ್ಲಿಕಾರ್ಜುನ,ಕೆಬ್ಬೆ ಶಿವಸ್ವಾಮಿ,ರಂಗಪ್ಪ,ಕೃಷ್ಣ,ಸೋಸಲೆ ನಿಂಗಣ್ಣ,ಮಹದೇವಶೆಟ್ಚಿ,ಸೋಸಲೆ ಪುಟ್ಟಸ್ವಾಮಿ,ಮಹೇಶ್,ನಾಗೇಂದ್ರ ಸೇರಿದಂತೆ ಹಲವಾರು ಮುಖಂಡರು ಇದ್ದರು.
– ಎಂ .ನಾಗೇಂದ್ರ ಕುಮಾರ್

[…] […]