ಟಿ.ನರಸೀಪುರ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ.
ಪಟ್ಟಣದ ಪಿಎಂಶ್ರೀ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಟ್ಟಣದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳಾದ ಗಾನ್ಯ ಅಭಿನಯ ಗೀತೆಯಲ್ಲಿ ಪ್ರಥಮ ಸ್ಥಾನ, ಪ್ರೀತಮ್ ಮಿಮಿಕ್ರಿ ಪ್ರಥಮ ಸ್ಥಾನ, ಕೃಪಾಕರ ಕ್ಲೆ ಮಾಡೆಲಿಂಗ್ ದ್ವಿತೀಯ, ಸೋಮನಿಂಗ ಹಿಂದಿ ಕಂಠಪಾಠದಲ್ಲಿ ದ್ವಿತೀಯ ಸ್ಥಾನ, ಗಗನ್.ಆರ್ ಕವನ ವಾಚನದಲ್ಲಿ ತೃತೀಯ, ಕೌಶಿಕ್ ಕೆ ಇಂಗ್ಲೀಷ್ ಕಂಠಪಾಠದಲ್ಲಿ ತೃತೀಯ, ಮಿಥುನ್ ರವಿಕುಮಾರ್ ಪೂಜಾರ್ ಭಕ್ತಿಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ಪ್ರಶಸ್ತಿ ಪತ್ರಗಳನ್ನು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಮಮತಾ, ನಿಲಯಪಾಲಕರಾದ ಶಿವಪ್ರಕಾಶ್, ಶಿಕ್ಷಕರಾದ ಶಶಿಕಲಾ, ಶಿವಪ್ರಸಾದ್, ಕಾವ್ಯ, ನಿಂಗರಾಜಮ್ಮ, ಭರತ್ ಗೌತಮರಾಜ್, ಗುರುಪ್ರಸಾದ್, ರಾಜು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
– ಎಂ.ನಾಗೇಂದ್ರ ಕುಮಾರ್

[…] […]