ಟಿ.ನರಸೀಪುರ: ತಲಕಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಒಂದನೇ ತರಗತಿಯ ಇಂಗ್ಲೀಷ್ ಮಾಧ್ಯಮ ಕೊಠಡಿಯ ಉದ್ಘಾಟನೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾಮಲ್ಲಣ್ಣಿ ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಗಾಯತ್ರಿಯವರು ಮಾತನಾಡಿ ಪ್ರಪ್ರಥಮವಾಗಿ ನಮ್ಮ ತಲಕಾಡು ಹೋಬಳಿಯಲ್ಲಿ ತ್ರಿಭಾಷಾ ಮಾಧ್ಯಮದಲ್ಲಿ ಒಂದನೇ ತರಗತಿ ಆರಂಭಿಸಿದ್ದೇವೆ.ಬಹಳ ವರ್ಷಗಳಿಂದ ಪೋಷಕರ ಕೋರಿಕೆಯಾಗಿತ್ತು.ಸರ್ಕಾರ ಅದನ್ನು ನೆರವೇರಿಸಿದೆ.ಅದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ.ಈಗಾಗಲೇ 24 ಮಕ್ಕಳು ದಾಖಲಾಗಿದ್ದಾರೆಂದರು.
ಶಿಕ್ಷಕಿ ತುಳಸಿಬಾಯಿ ಮಾತನಾಡಿ ಡಯಟ್ ನಲ್ಲಿ ನಮಗೆ 15 ದಿನಗಳ ತರಭೇತಿ ನೀಡಿದ್ದಾರೆ.ಮಕ್ಕಳಿಗೆ ಇದು ನಿಜವಾಗಿಯೂ ಸುಯೋಗ ಎಂದರು.

ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಗೋವಿಂದರಾಜ್,ಸದಸ್ಯರುಗಳಾದ ಗೀತಾ,ಪಲ್ಲವಿ,ಸೌಮ್ಯ,ದರ್ಶಿನಿ,ಜಯಶೀಲ ಮಹದೇವಸ್ವಾಮಿ,ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ನರಸಿಂಹಮಾದನಾಯಕ, ಶಿಕ್ಷಕರುಗಳಾದ ವಿಶ್ವನಾಥ, ನಳಿನಿಕುಮಾರಿ ಜಯವಂತ್, ಸಜೀಲಾ ಪರ್ವೀನ್, ದಾಕ್ಷಯಣಿ, ನಜ್ರುಲ್ಲ ಎಸ್.,ಚೌಡಯ್ಯ,ಬಂಗಾರ ನಾಯಕ ಸೇರಿದಂತೆ ಶಾಲೆಯ ಶಿಕ್ಷಕ ವೃಂದ ಹಾಜರಿದ್ದರು.
ಎಂ.ನಾಗೇಂದ್ರಕುಮಾರ್
