ಟಿ.ನರಸೀಪುರ : ಮೊದಲು ಸಿದ್ದರಾಮನ ಹುಂಡಿಯಲ್ಲಿ ಇರುವ ಅಸ್ಪೃಶ್ಯತೆ ಆಚರಣೆಯನ್ನು ನಿಲ್ಲಿಸಿ ನಂತರ ಕುರುಬ ಸಮುದಾಯ ಎಸ್ಟಿ ಗೆ ಸೇರಿಸುವ ಚರ್ಚೆ ಆಗಲಿ ಎಂದು ದಸಂಸ ಬಣರಹಿತ ಜಿಲ್ಲಾ ಸಂಚಾಲಕ ಸಿ.ಉಮಾ ಮಹದೇವ್ ತಿಳಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಲು ಚರ್ಚೆ ನಡೆದಿದ್ದಾಗ ಇಂದಿನ ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಪರೋಕ್ಷವಾಗಿ ಸಾಮಾಜಿಕ ಆರ್ಥಿಕವಾಗಿ ಮೇಲಸ್ತರದಲ್ಲಿ ಇರುವ *ಕುರುಬ ಸಮಾಜವನ್ನು ST ಗೆ ಸೇರಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲಾ ಎಂದು ನಮ್ಮ ಸಂಘಟನೆ ಹಾಗೂ ಟಿ. ನರಸೀಪುರ ತಾಲ್ಲೂಕು ನಾಯಕರ ಸಂಘದ ವತಿಯಿಂದ ಆಯೋಜನೆಗೊಂಡಿದ್ದ “ದಿಕ್ಕು ತಪ್ಪುತ್ತಿರುವ ಮೀಸಲಾತಿ ಚಳುವಳಿ ” ಎಂಬ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿ ವಿರೋಧ ವ್ಯಕ್ತ ಪಡಿಸಿದ್ದರು. ಕಾಕತಾಳಿಯ ಎಂದರೆ ಇಂದು ಅವರೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಆದ್ದರಿಂದ ಸಚಿವರು ಕುರುಬ ಸಮಾಜ ಇರಲಿ ಯಾರೇ ಇರಲಿ ಎಸ್ಟಿ ಗೆ ಅಥವಾ ಎಸ್ಸಿ ಗೆ ಸೇರಿಸುವ ಮುನ್ನ ಆ ಸಮಾಜ ಅಸ್ಪೃಶ್ಯತೆ ಆಚರಣೆಯಿಂದ ಹೊರಬಂದಿದ್ದಾರಾ ಎಂಬುದನ್ನು ವೈಜ್ಞಾನಿಕವಾಗಿ ಸರ್ವೇ ಮಾಡಬೇಕೆಂದರು.
ಭಾರತ ದೇಶದಲ್ಲಿ ನಡೆಯ ಬೇಕಿರೋದು ಜಾತಿ ಸಮೀಕ್ಷೆ ಅಲ್ಲ ಅದು ಪರಿಹಾರ ಅಲ್ಲ ಬದಲಾಗಿ ಅಸ್ಪೃಶ್ಯತೆ ಆಚರಿಸುತ್ತಿರುವವರು ಹಾಗೂ ಅಸ್ಪೃಶ್ಯತೆ ಮಾಡದಿರುವವರ ಸಮೀಕ್ಷೆ. ಕೋಮುವಾದಿಗಳು ಹಾಗೂ ಧರ್ಮಾತೀತರ ಸಮೀಕ್ಷೆ.ಒಂದು ಕಡೆ ಹೊರಗುತ್ತಿಗೆ ಹೆಸರಲ್ಲಿ ಉದ್ಯೋಗದಲ್ಲಿ ಮೀಸಲಾತಿಗೆ ಗೇಟ್ ಪಾಸ್ ಇನ್ನೊಂದು ಕಡೆ ಎಸ್ಸಿ,ಎಸ್ಟಿ ಗೆ ಇರಬರುವವರನ್ನೆಲ್ಲ ಸೇರಿಸಿ ಅಸ್ಪೃಶ್ಯತೆ ಆಚರಣೆ ವಿರೋಧಿ ಕಾನೂನಿಗೆ ಗೇಟ್ ಪಾಸ್ ಇದೆಯಲ್ಲವೇ ಭಾರತ ಸಂವಿಧಾನ ಆಶಯಗಳ ನಾಶಕ್ಕೆ ಮುನ್ನುಡಿ ಬರೆಯುವ ನಿಮ್ಮ ದುರಾ…ಲೋಚನೆ.
ಹೊರಗುತ್ತಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಟ್ಟರು ಅವರಿಗೆ ಕೊಡೋದು ಹಿಂದೆ ಪಟೇಲರು ಜೀತಗಾರರಿಗೆ ಕೊಡುತ್ತಿದ್ದ ವೇತನಕ್ಕೆ ಸಮ…!!
ಒಂದು ಕಡೆ ಎಲ್ಲರೂ ಅಂದರೆ ಲಿಂಗಾಯತ ಕುರುಬ ಒಕ್ಕಲಿಗ ಬ್ರಾಹ್ಮಣ ಸೇರಿದಂತೆ ಎಲ್ಲಾ ಸಮುದಾಯಗಳ ಕೆಲವು ಉಪಜಾತಿಗಳು ಈಗಾಗಲೇ ಎಸ್ಸಿ,ಎಸ್ಟಿ ಗೆ ಸೇರಿವೆ ಆದರೆ ಜಾತಿ ಶೋಷಣೆ ಮುಂದುವರೆಸಿವೆ ಜಾತಿ ದೌರ್ಜನ್ಯ ಕಾಯ್ದೆ ಬಳಸುವ ಆಗಿಲ್ಲ…ಇದಲ್ಲವೇ ನಿಮ್ಮ ಮಾಸ್ಟರ್ ಪ್ಲಾನ್.
ಮುಖ್ಯಮಂತ್ರಿ ಸಿದ್ದರಾಮಯ್ಯರವರು ಓದಿದ ಸಿದ್ದರಾಮನಹುಂಡಿ ಗ್ರಾಮದ ಪಕ್ಕದ ಕುಪ್ಪೆಗಾಲದಲ್ಲಿ ಬಿಸಿ ಊಟವನ್ನು ದಲಿತ ಮಹಿಳೆ ತಯಾರು ಮಾಡುತ್ತಾಳೆ ಎಂದು ಗಲಾಟೆ ನಡೆದಿತ್ತು ಈಗಿರುವಾಗ ಹೇಗೆ ಸಿಕ್ಕಿದಂಗೆ ಎಸ್ಸಿ,ಎಸ್ಟಿ ಸೇರ್ಪಡೆ ಮಾಡುವ ಚರ್ಚೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಮೊದಲು ಅಸ್ಪೃಶ್ಯತೆ ತೊಲಗಿಸಿ ಕನಿಷ್ಠ ಸೇರ್ಪಡೆ ಬಯಸುವವರಲ್ಲಿ ಹಾಗೆ ಈಗಾಗಲೇ ಇರುವವರಲ್ಲಿ ನಂತರ ಸೇರಿಸಿ ಇಲ್ಲದಿದ್ದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತ ದೌರ್ಜನ್ಯದ ವಿರುದ್ಧ ತಂದಿರುವ ಕಾನೂನನ್ನು ನಾಶಮಾಡಿದಂತೆ ಸರಿ. ಇದಕ್ಕೆ ನಮ್ಮ ಸಮಿತಿಯಿಂದ ಬಲವಾದ ವಿರೋಧವಿದೆ. ಸಿದ್ದರಾಮಯ್ಯರವರು ಸ್ವತಃ ಅಸ್ಪೃಶ್ಯತೆ ಬಗ್ಗೆ ಅದರ ವ್ಯಾಪಕತೆ ಬಗ್ಗೆ ತಿಳಿದಿರುವವರು ಈ ನಿರ್ಧಾರ ಮರುಪರಿಶೀಲನೆ ಮಾಡಬೇಕೆಂದರು.
ಸಿದ್ದರಾಮಯ್ಯರವರು ಜಾತ್ಯಾತೀತ ನಾಯಕರೆಂದು ಅಜರಾಮರರಾಗಿ ಉಳಿಯಬೇಕೆಂದರೆ ನುಡಿದಂತೆ ನಡೆದು ಸಮಾಜಕ್ಕೆ ಮಾದರಿಯಾಗಬೇಕು ಆಗೇ ಅಸ್ಪೃಶ್ಯತೆ ಆಚರಣೆ ಮಾಡುವವರು ಮತ್ತು ಮಾಡದಿರುವವರ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಬೇಕೆಂದರು.
ಎಂ.ನಾಗೇಂದ್ರಕುಮಾರ್
