ಟಿ.ನರಸೀಪುರ : ಮೂಗೂರಿನ ಶ್ರೀ ತ್ರಿಪುರ ಸುಂದರಮ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೂಗೂರಿನಲ್ಲಿ ಇಂದು ಶ್ರೀ ತ್ರಿಪುರ ಸುಂದರಮ್ಮ ಸಮುದಾಯ ಭವನ ನಿರ್ಮಾಣದ ಭೂಮಿ ಪೂಜೆಯನ್ನು ಮಾಜಿ ಸಚಿವರು ಹಾಗೂ ಸಂಸದರಾದ ಸಿ.ಎಸ್.ಪುಟ್ಚರಾಜು,ಮಾಜಿ ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ ಹಾಗೂ ಶ್ರೀ ತ್ರಿಪುರ ಸುಂದರಿ ಅಮ್ಮನವರ ಟ್ರಸ್ಟ್ ಅಧ್ಯಕ್ಷರಾದ ಶಿವಲಿಂಗಯ್ಯ ರವರು ನೆರವೇರಿಸಿದರು.
ಟಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಕಬಿನಿ 38 ರ ನಾಲೆಯ ಬಳಿ ಒಂದೂವರೆ ಎಕರೆ ಪ್ರದೇಶದಲ್ಲಿ ಅತ್ಯಂತ ವಿಶಾಲವಾದ ಸುಸಜ್ಜಿತ ಸಮುದಾಯ ಭವನ ಟ್ರಸ್ಟ್ ನ ಅತಿಥಿ ಗೃಹ ನಿರ್ಮಾಣಕ್ಕೆ ಚಾಲನೆ ನೀಡಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜುರವರು ಮಾತನಾಡಿ ಟಿ.ನರಸೀಪುರ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಸಚಿವರಾದ ಮಹದೇವಪ್ಪರವರು ಸೇರಿದಂತೆ ಗ್ರಾಮದ ಹಿರಿಯ ಮುಖಂಡರುಗಳ ಸಹಕಾರದಲ್ಲಿ ಸರ್ಕಾರಿ ನಿಯಮದ ಪ್ರಕಾರ ಜಾಗವನ್ನು ಪಡೆದು ಇಂದು ಕಟ್ಟಡ ನಿರ್ಮಾಣಕ್ಕೆ ದೇವಿಯ ಆಶೀರ್ವಾದದಿಂದ ಚಾಲನೆ ನೀಡಲಾಗಿದೆ.

ಮರಿತಿಬ್ಬೇಗೌಡರ ಹೆಚ್ಚಿನ ಕಾಳಜಿಯಿಂದ ದೇಗುಲಕ್ಕೆ ರಾಜಗೋಪುರ ನಿರ್ಮಾಣ ಮಾಡಲಾಯಿತು. ಕುಮಾರಣ್ಣನವರ ಸರ್ಕಾರದ ವೇಳೆ ನಾನು ಮಂತ್ರಿಯಾದ ಸಂದರ್ಭದಲ್ಲಿ ಈ ತಾಯಿಗೆ ಸೇವೆ ಸಲ್ಲಿಸಲು ಬಜೆಟ್ ನಲ್ಲಿ 5 ಕೋಟಿ ಹಣವನ್ನು ಇರಿಸಿ ರಾಜಗೋಪುರ ನಿರ್ಮಾಣ ಮಾಡಲಾಯಿತು.ಇನ್ನೊಂದು ಕ್ಯಾಬಿನೆಟ್ ಮೀಟಿಂಗ್ ನಡೆದಿದ್ದರೆ 16.5 ಕೋಟಿ ಹಣ ಅಪ್ರೋವ್ ಆಗ್ತಿತ್ತು.ಆದಂತಹ ರಾಜಕೀಯ ಬದಲಾವಣೆಯಲ್ಲಿ ಅಪ್ರೋವ್ ಮಾಡಿಸಲು ಸಾಧ್ಯವಾಗಲಿಲ್ಲ ಎಂದರು.
ಬೊಮ್ಮಾಯಿ ಸರ್ಕಾರದ ವೇಳೆ ರೇಷ್ಮೆ ಇಲಾಖೆ ಮಂತ್ರಿ ಯಾಗಿದ್ದ ಸಾ.ರಾ.ಮಹೇಶ್ ಪಿಡಬ್ಲ್ಯೂಡಿ ಅತಿಥಿ ಗೃಹಕ್ಕೆ ಜಾಗ ಮಂಜೂರು ಮಾಡಿಸಿದರು.10 ಕೋಟಿ ರೂ ವೆಚ್ಚದಲ್ಲಿ ಕ್ಷೇತ್ರದ ಸಚಿವರಾದ ಎಚ್ ಸಿ ಮಹದೇವಪ್ಪ ರವರ ಸಹಕಾರದಿಂದ ನೂತನ ಸರ್ಕಾರಿ ಅತಿಥಿ ವಸತಿ ಗೃಹದ ಕಾಮಗಾರಿ ಆರಂಭವಾಗಿದೆ ಎಂದರು.

ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಜಗನ್ಮಾತೆ ಮಾರಿಯಮ್ಮ ದೇವಸ್ಥಾನದಲ್ಲಿ ದೇವಸ್ಥಾನ ನಿರ್ಮಿಸಲು ಸಭೆ ಮಾಡಿದ ಸಂದರ್ಭದಲ್ಲಿ ಅಮ್ಮ ಬಂದು ಬರೆದು ಭಕ್ತಾದಿಗಳು ಯಾರ ಬಳಿಯೂ ಚೀಟಿ ಹಿಡಿದುಕೊಂಡು ಹೋಗಬಾರದು.ಸಾಕು ಅನ್ನುವಷ್ಟು ನಾನೇ ಕ್ರೂಡೀಕರಿಸುತ್ತೇನೆಂದು ಬರೆದಿರುತ್ತೆ.ಅದರಂತೆ ಪ್ರಪಂಚದಾದ್ಯಂತ ಇರುವ ಭಕ್ತಾಧಿಗಳು ಕೋಟಿ,ಕೋಟಿ ಹಣವನ್ನು ದಾನ ಮಾಡಿ ಹೋಗಿದ್ದಾರೆಂಬುದನ್ನು ಸ್ಮರಿಸಿದರು.
ಟ್ರಸ್ಟ್ ವತಿಯಿಂದ ನಿರ್ಮಾಣವಾಗುತ್ತಿರುವ ಸಮುದಾಯ ಭವನದಲ್ಲಿ ವಿಶಾಲವಾದ ಸಭಾಂಗಣ, 12 ಕೊಠಡಿವುಳ್ಳ ಸುಸಜ್ಜಿತ ಭವನ ನಿರ್ಮಾಣವಾಗಲಿದೆ ತಾವೆಲ್ಲರೂ ಕೈ ಜೋಡಿಸಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ರಾಜ್ಯದ ನಾನಾ ಭಾಗಗಳಿಂದ ದೇವಿಯ ಭಕ್ತರು ಆಗಮಿಸಿ ಭವನ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡುವುದಾಗಿ ಸಭೆಯಲ್ಲಿ ಒಪ್ಪಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಮಾಜಿ ಅಧ್ಯಕ್ಷರಾದ ಲಿಂಗಪ್ಪ, ಮುಖಂಡರಾದ ಮೂಗೂರು ಎಂ.ಡಿ.ಬಸವರಾಜು,ಈ ಸಂದರ್ಭದಲ್ಲಿ ಟ್ರಸ್ಟ್ ಮಾಜಿ ಅಧ್ಯಕ್ಷರಾದ ಲಿಂಗಪ್ಪ, ಮುಖಂಡರಾದ ಎಂ ಡಿ ಬಸವರಾಜು, ಡಾ.ದೇವೇಗೌಡ,ಬ್ಯಾಡರಹಳ್ಳಿ ಕಾಡಪ್ಪ ,ದೇವಿ ಎಲೆಕ್ಟ್ರಾನಿಕ್ ಮಾಲೀಕರಾದ ಹರೀಶ್,ಮೂಗೂರಯ್ಯ,ರಾಮಕೃಷ್ಣ, ಧನಂಜಯ, ರವಿಶಂಕರ್, ರಂಗಸ್ವಾಮಿ,ನಾಗೇಶ್,ಕುಮಾರ್,, ಅರ್ಚಕರಾದ ಸುಂದರಪ್ಪ,ಹರೀಶ್,ರವಿ ಸೇರಿದಂತೆ ಇತರ ಮುಖಂಡರು ಇದ್ದರು.
- ಎಂ.ನಾಗೇಂದ್ರಕುಮಾರ್.
