ಟಿ.ನರಸೀಪುರ : ಕಾನೂನಿನ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ನಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಬಹುದೆಂದು ಬೀಳ್ಕೊಡುಗೆ ಪಡೆದ ಮುಖ್ಯಮಂತ್ರಿ ಪದಕ ವಿಜೇತರಾದ ಉಪ ವಲಯ ಅರಣ್ಯಾಧಿಕಾರಿ ಎಸ್.ಎಂ.ಮಂಜುನಾಥ್ ತಿಳಿಸಿದರು.
ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಹೊರ ಆವರಣದಲ್ಲಿ ಪ್ರಾದೇಶಿಕ ಅರಣ್ಯ ವಲಯ ಇಲಾಖೆಯಿಂದ ಬೇರೆಡೆ ವರ್ಗಾವಣೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಇಲಾಖೆಯ ಅಧಿಕಾರಿಗಳು,ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರು ಭಾವನಾತ್ಮಕ ಬೀಳ್ಕೊಡುಗೆ ನೀಡಿದ ಸಂದರ್ಭದಲ್ಲಿ ಮಾತನಾಡಿ ಕುಟುಂಬ ಒಗ್ಗಟ್ಟಿದ್ದರೆ ಬೀದಿ ಒಗ್ಗಟ್ಚಿರುತ್ತೆ.ಬೀದಿ ಒಗ್ಗಟ್ಟಿದ್ದರೆ ಊರು ಒಗ್ಗಟ್ಚಿರುತ್ತೆ.ಇದು ನನ್ನ ತಂದೆ ಕಲಿಸಿದ ಪಾಠ ಅದರಂತೆ ನಾನು ನನ್ನ ವೃತ್ತಿ ಜೀವನದಲ್ಲಿ ಪಾಲಿಸಿಕೊಂಡು ಬರುತ್ತಿದ್ದೇನೆ.ನಾನು ಟಿ.ನರಸೀಪುರಕ್ಕೆ ಬಂದಾಗ ದೊಡ್ಡ ಸವಾಲು ನನ್ನ ಮುಂದಿತ್ತು.ಅದನ್ನೆಲ್ಲಾ ನನ್ನ ಇಲಾಖೆಯ ಎಲ್ಲಾ ಸಿಬ್ಬಂದಿಗಳ ಸಹಕಾರದಿಂದ ಮುಖ್ಯಮಂತ್ರಿ ಪದಕ ಗಳಿಸಲು ಸಾಧ್ಯವಾಯಿತೆಂದರು.ಲೇಡಿ ಸಿಂಗಂ ಎಂದೇ ನಾನು ಹೇಳಲಿಚ್ಚಿಸುವ ಮತ್ತೊಬ್ಬ ಅಧಿಕಾರಿ ಯಮುನಾರವರು ತಮ್ಮ ಕರ್ತವ್ಯದಲ್ಲಿ ಚ್ಯುತಿ ಬಾರದಂತೆ ಹಗಲಿರುಳು ದುಡಿದಿದ್ದಾರೆ.ಅವರ ಸೇವೆಯನ್ನೂ ಸಹ ಈ ಸಂದರ್ಭದಲ್ಲಿ ಸ್ಮರಿಸುತ್ತೇನೆಂದರು.

ನನ್ನ ಕರ್ತವ್ಯವನ್ನು ನಾನು ಯಾವುದೇ ಊರಿನಲ್ಲೂ ಕೆಲಸ ಮಾಡಿದರು ಕಾನೂನಾತ್ಮಕವಾಗಿಯೇ ಮಾಡುತ್ತೇನೆ.ಹಣದಲ್ಲಿ ಎಲ್ಲವನ್ನೂ ಪೂರೈಸಿಕೊಳ್ಳಲು ಸಾಧ್ಯವಿಲ್ಲ.ಆಗಾಗಿ ನಾವು,ನೀವು ಎಲ್ಲರ ಜೊತೆ ಚೆನ್ನಾಗಿರೋಣ ಯಾರ ಜೊತೆಗೂ ಮನಸ್ಥಾಪ ಬೇಡ.ಸತ್ತಾಗ ನಮ್ಮ ಜೊತೆ ಒಂದಿಡಿ ಮಣ್ಣನ್ನೂ ಸಹ ಜೊತೆಯಲ್ಲಿ ತೆಗೆದುಕೊಂಡು ಹೋಗಲ್ಲ ಎಂದರು.
ತಾಲ್ಲೂಕಿನ ಜನತೆ ನಿಮ್ಮ ಸುತ್ತ,ಮುತ್ತ,ನಿಮ್ಮ ಜಮೀನಿನಲ್ಲಿ ಗಿಡ,ಮರಗಳನ್ನು ಬೆಳೆಸುವ ಮೂಲಕ ಪರಿಸರವನ್ನು ಉಳಿಸಿ,ಬೆಳೆಸೋಣ.ಪ್ರಕೃತಿಯನ್ನು ನಾವು ಚೆನ್ನಾಗಿ ನೋಡಿಕೊಂಡರೆ ಅದು ನಮ್ಮನ್ನು ಕಾಪಾಡುತ್ತದೆಂದರು.
ಮತ್ತೊಬ್ಬ ಉಪ ವಲಯ ಅರಣ್ಯಾಧಿಕಾರಿಗಳಾದ ಯಮುನಾರವರು ಮಾತನಾಡಿ ಕಳೆದ ಹತ್ತು ವರ್ಷಗಳು ತಾಲ್ಲೂಕಿನ ಜನತೆ ನನ್ನನ್ನು ಪ್ರೀತಿ,ವಿಶ್ವಾಸದಿಂದ ಕಂಡಿದೆ.ನನ್ನ ಮೊದಲ ವೃತ್ತಿ ಜೀವನ ಆರಂಭಿಸಿದ್ದು ಟಿ.ನರಸೀಪುರ. ನನ್ನ ವೃತ್ತಿಯಲ್ಲಿ ನಾನು ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ.ಮಂಜುನಾಥ್ ರವರು ನನ್ನ ಕರ್ತವ್ಯದಲ್ಲಿ ತುಂಬಾ ಸಹಕಾರ ನೀಡಿದ್ದಾರೆ.ಟಿ.ನರಸೀಪುರ ನಾನು ಎಂದೆಂದೂ ಮರೆಯಲಾಗದ ಸ್ಥಳ ಎಂದು ಗದ್ಘದಿತರಾದರು.

ವಲಯ ಅರಣ್ಯಾಧಿಕಾರಿ ರಾಜೇಶ್ ಮಾತನಾಡಿ ಮಂಜುನಾಥ್ ರವರು ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸಿದ್ದಾರೆ.ಅವರ ಸೇವೆಯನ್ನು ನಮ್ಮ ಇಲಾಖೆ ಹಾಗೂ ತಾಲ್ಲೂಕಿನ ಜನತೆ ಸದಾಕಾಲವೂ ಸ್ಮರಿಸುತ್ತದೆ.ಚಿರತೆಗಳನ್ನು ಹಿಡಿಯುವ ಸಂದರ್ಭದಲ್ಲಿ ಅವರು ತೋರಿದ ಕರ್ತವ್ಯ ಪ್ರಜ್ಞೆ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದರು.
ಉಪ ವಲಯ ಅರಣ್ಯಾಧಿಕಾರಿಗಳಾದ ಎಸ್.ಎಂ.ಮಂಜುನಾಥ್,ಯಮುನಾ,ಗಸ್ತುಅರಣ್ಯಪಾಲಕರಾದ ಲೋಕೇಶ್,ರಕ್ಷಕ್,ಪ್ರತಾಪ್ ರವರನ್ನು ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳಾದ ಉಮೇಶ್,ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಉಪವಲಯ ಅರಣ್ಯಾಧಿಕಾರಿಗಳಾದ ನಿರಂಜನ್ ಕಟ್ಟಿ,ವೀರೇಶ್ ವಾಟಾಳ್ ಬೀಟ್,ಪ್ರಕಾಶ್ ಟೌನ್ ಬೀಟ್ ,ವಿಠಲ್ ರಾಥೋಡ್ ತಲಕಾಡು ಬೀಟ್, ಸಿಬ್ಬಂದಿಗಳಾದ ಬಸವಣ್ಣ,ಪರಮೇಶ್, ಮಂಜುನಾಥ್,ರಮೇಶ್,ಚಂದನ,ನಿಂಗರಾಜು,ಸಾಮಿಲ್ ಮಾಲೀಕರುಗಳಾದ ಶಿವಪ್ರಸಾದ್,ಜಯಶೇಖರ್,ರಾಜಣ್ಣ,ಮನ್ಸೂರ್ ಅಹಮದ್,ನಯಾಜ್,ರಾಜೇಶ್,ಗೋವಿಂದ,ಜಯಂತ್,ಚಲುವೇಗೌಡ,ಸಿದ್ದಪ್ಪಾಜಿ,ಕುಮಾರಸ್ವಾಮಿ,ಕಾರ್ತಿಕ್, ಕೀರ್ತಿ,ಮುಬಾರಕ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
– ಎಂ.ನಾಗೇಂದ್ರ ಕುಮಾರ್
