ಟಿ.ನರಸೀಪುರ : ಧಾರ್ಮಿಕ ಕಾರ್ಯಗಳು ಹಳ್ಳಿ ಜನತೆಯಲ್ಲಿನ ಬಾಂಧವ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ ಎಂದು ಉದ್ಯಮಿ ಮೂಗೂರು ಗೌಡರ ಎಂ. ಪಿ. ಛಾಯ ಕುಮಾರ್ ತಿಳಿಸಿದರು.
ತಾಲ್ಲೂಕಿನ ಮೂಗೂರು ಗ್ರಾಮದ ಸಮೀಪ ಹೊಸಹಳ್ಳಿ ಮೋಳೆ ಗ್ರಾಮದ ಶ್ರೀ ಸಿದ್ದಪ್ಪಾಜಿ ನೂತನ ದೇಗುಲದ ಉದ್ಘಾಟನೆಗೊಂಡ ನಂತರ ಗ್ರಾಮಕ್ಕೆ ಆಗಮಿಸಿದಾಗ ಇವರನ್ನು ಅಭಿನಂದನಾ ಸಮಾರಂಭದಲ್ಲಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಅಭಿನಂದಿಸಿ ಸನ್ಮಾನಿಸಿದರು ನಂತರ ಮಾತನಾಡಿದ ಇವರು, ಧಾರ್ಮಿಕ ಆಚರಣೆಗಳು ಜನರ ಬದುಕಿನಲ್ಲಿ ಸಾಮರಸ್ಯ ಸಾರುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಹಾಗೆಯೇ ತಮ್ಮ ತಮ್ಮ ವೈಯಕ್ತಿಕ ಬಿನ್ನಾಬಿಪ್ರಾಯವನ್ನು ಕೈ ಬಿಟ್ಟು ಊರಿನ ಸರ್ವ ಜನರ ಒಳಿತಿಗಾಗಿ ಶ್ರಮಿಸಬೇಕು. ಗ್ರಾಮದ ಅವಶ್ಯಕತೆಗಳನ್ನು ಸರ್ಕಾರ ಗಮನಕ್ಕೆ ತಂದು ಒಗ್ಗಟ್ಟಾಗಿ ನಿಂತು ಹೋರಾಟ ಮಾಡಿ ಗ್ರಾಮದ ಅಭಿವೃದ್ಧಿಯತ್ತ ನೀವು ಚಿಂತನೆ ಮಾಡಬೇಕು.ನಿಮ್ಮಗಳ ಮೂಲ ಉದ್ದೇಶಗಳು ಈಡೇರಿಸಿಕೊಳ್ಳಲು ಬೇಕಾದಲ್ಲಿ ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಿ ಆಗ ತಮ್ಮಗಳ ಬದುಕು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರು ಮುಖಂಡರು ಯುವಕ ಸಂಘದ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
– ಎಂ.ನಾಗೇಂದ್ರ ಕುಮಾರ
