ಟಿ.ನರಸೀಪುರ : ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳು ಶುದ್ಧವಿರಬೇಕು ಮತ್ತು ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೆ ಮಾನವೀಯತೆ ಮನುಷ್ಯತ್ವ ಬಂಧುತ್ವ ಮನೋಭಾವನೆ ಇಟ್ಟುಕೊಂಡು ಜಾತ್ಯತೀತವಾಗಿ ಯಾವುದೇ ಧರ್ಮ,ವರ್ಗ ಸಮುದಾಯದ ಬಗ್ಗೆ ತಾರತಮ್ಯವಿಲ್ಲದೆ ಎಲ್ಲಾ ಶೋಷಿತ ವರ್ಗದವರಿಗೆ ನ್ಯಾಯ ಕೊಡಿಸುವವರೇ ಗೌರವಾಧಾರಗಳಿಗೆ ಪಾತ್ರರಾಗುತ್ತಾರೆಂದು
ಮೈಸೂರಿನ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿಗಳು ತಿಳಿಸಿದರು.
ರಾಜ್ಯದ ಅತ್ಯುತ್ತಮ ಶ್ರೇಷ್ಠ ನಾಗರೀಕ ಸೇವಾ ಪ್ರಶಸ್ತಿ “ಕರ್ನಾಟಕ ಭೂಷಣ” ಬಿರುದು ಸ್ವೀಕರಿಸಿದ ಪಟ್ಟಣದ ಆಲಗೂಡು ಡಾ. ಎಸ್.ಚಂದ್ರಶೇಖರ್ ರವರನ್ನು ಮೈಸೂರಿನ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದಲ್ಲಿ ಗೌರವಿಸಿ ಮಾತನಾಡಿ
ಮೈಸೂರಿನ ತಮ್ಮ ಶಾಖಾ ಮಠದಲ್ಲಿ ಸನ್ಮಾನಿತರನ್ನು ಗೌರವಿಸಿ ಮಾತನಾಡಿ ಎಲ್ಲಾ ಶೋಷಿತ ವರ್ಗದವರಿಗೆ ಅನ್ಯಾಯ, ಮೋಸವಾದಾಗ ಯಾವುದೇ ಪ್ರಭಾವ ಒತ್ತಡಕ್ಕೆ ಮಣಿಯದೆ ಪ್ರತಿಭಟಿಸಿ ನೊಂದವರಿಗೆ ನ್ಯಾಯ ದೊರಕಿಸಿಕೊಟ್ಟು ಸಾಮಾಜಿಕ ನ್ಯಾಯ ಎತ್ತಿಡಿದು ಸಾಗಿದರೆ ಬದುಕು ಸಾರ್ಥಕವಾಗುತ್ತದೆ ಮತ್ತು ತ್ಯಾಗಕ್ಕೂ ಒಂದು ದಿನ ಪ್ರತಿಫಲ ವಿದ್ದು ಸಮಾಜದಲ್ಲೂ ಗೌರವ ಬೆಲೆ ಇದ್ದೇ ಇರುತ್ತದೆ. ಸಮಾಜವೂ ಕೂಡ ವ್ಯಕ್ತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ. ಆದ್ದರಿಂದ ನ್ಯಾಯ, ನೀತಿ,ಧರ್ಮ ವಾಕ್ಯವನ್ನು ಪಾಲನೆ ಮಾಡುವ ಮೂಲಕ ನಿಮ್ಮ ಸೇವೆಯನ್ನು ನಿರಂತರವಾಗಿಸಿಕೊಂಡು ಹೋಗುವಂತೆ ಆಶೀರ್ವಚನ ನೀಡಿ ಹಾರೈಸಿ ಮುಂದಿನ ದಿನಗಳಲ್ಲಿ ನಿಮಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಶಸ್ತಿಗಳು ಸಿಗಲೆಂದರು.
ಈ ಸಂದರ್ಭದಲ್ಲಿ ಕೆಂಪಯ್ಯನಹುಂಡಿ ಗ್ರಾಮದ ಹಿರಿಯರಾದ ಚೆನ್ನಪ್ಪ, ಬಸವರಾಜು ಹಾಗೂ ಶಿವಪ್ರಸಾದ್ ಇದ್ದರು.
ವರದಿ : ಎಂ.ನಾಗೇಂದ್ರಕುಮಾರ್
