ಟಿ.ನರಸೀಪುರ : ತಾಲ್ಲೂಕಿನ ಕುರುಬೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಡೆದ ಅದ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಮಹದೇವಸ್ವಾಮಿರವರನ್ನು ಅಧ್ಯಕ್ಷರನ್ನಾಗಿ ಕೆ.ಎಂ.ಶಿವಕುಮಾರ್ ರವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಒಟ್ಟು 11 ಮಂದಿ ಸದಸ್ಯರೂ ಅವಿರೋಧ ಆಯ್ಕೆಯಾಗಿ ಚುನಾವಣೆ ಖರ್ಚು,ವೆಚ್ಚ ಸ್ಪರ್ಧಿಸುವ ಅಭ್ಯರ್ಥಿಗಳ ಖರ್ಚು ವೆಚ್ಚವನ್ನು ಉಳಿಸಿ ಮಾದರಿ ಚುನಾವಣೆ ಮಾಡಿದ ಕೀರ್ತಿಗೆ ಕುರುಬೂರು ಸೇರಿದಂತೆ ಸುತ್ತ ಏಳೂರಿನ ಗ್ರಾಮಗಳು ಭಾಜನವಾಯಿತು.

ಎಂ.ಸೀಹಳ್ಳಿಯ ಹಿರಿಯ ರಾಜಕಾರಣಿ ಕಾಲ್ಲೂಕು ಪಂಚಾಯತಿ ಮಾಜಿ ಸದಸ್ಯರು ಆದ ಗುರುಮೂರ್ತಿಯವರು ಮತ್ತು ತಂಡ ಚುನಾವಣೆ ನಡೆಸದೆ ಎಲ್ಲಾ ನಿರ್ದೇಶಕರು ಅವಿರೋಧ ಆಯ್ಕೆ ಮಾಡಲು ಕಾರಣೀಬೂತರಾಗಿದ್ದು ನಿರ್ದೇಶಕರೆಲ್ಲರೂ ಅವರ ನಡೆಯನ್ನು ಶ್ಲಾಘಿಸುವುದಾಗಿ ಒಕ್ಕೂರಲ ಅಭಿಪ್ರಾಯ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕುರುಬೂರು ಗ್ರಾಮದ ಸುತ್ತ ಏಳೂರಿನ ಸಮಸ್ತ ಜನತೆ ಹಾಗೂ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಗಳನ್ನು ಮನವೊಲಿಸಿ ಸುಸೂತ್ರವಾಗಿ ಅವಿರೋಧ ಆಯ್ಕೆಯಾಗಲು ಕಾರಣಕರ್ತರಾಗಿದ್ದು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆಂದರು.ಸಂಘದ ಕಾರ್ಯಚಟುವಟಿಕೆಗಳನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ನೂತನ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಕಟಿಬದ್ದರಾಗಿ ಕೆಲಸ ಮಾಡುತ್ತಾರೆಂದರು.
ಇದನ್ನು ಓದಿ: ಟಿ.ನರಸೀಪುರ : ವಿದ್ಯೋದಯ ಸಂಸ್ಥೆಯಲ್ಲಿ ರೋಸ್ಟರ್ ಉಲ್ಲಂಘನೆ – ಎಸ್ಸಿ/ಎಸ್ಟಿ ಮಹಿಳೆಯರಿಗೆ ಅನ್ಯಾಯ: ದಲಿತ ಸಂಘರ್ಷ ಸಮಿತಿ ಆಕ್ರೋಶ
ದಸಂಸ ಭೀಮವಾದ ರಾಜ್ಯ ವಿಭಾಗೀಯ ಸಂಚಾಲಕ ಆಲಗೂಡು ಡಾ.ಎಸ್.ಚಂದ್ರಶೇಖರ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅಧಿಕಾರ ವಿಕೇಂದ್ರಿಕರಣದಲ್ಲಿ ಪ್ರತಿಯೊಬ್ಬರಿಗೂ ಅಧಿಕಾರ ಹಂಚಿಕೆಯಾಗಬೇಕೆನ್ನುವ ನಿಯಮವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಅದರಂತೆ ಕುರುಬೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರುಗಳನ್ನು ಅವಿರೋಧ ಆಯ್ಕೆ ಮಾಡಿರುವುದು ಮಾದರಿಯಾಗಿದೆ ಎಂದರು.

ನೂತನ ಅಧ್ಯಕ್ಷರಾದ ಮಹದೇವಸ್ವಾಮಿ ಹಾಗೂ ಉಪಾಧ್ಯಕ್ಷರಾದ ಕೆ.ಎಂ.ಶಿವಕುಮಾರ್ ಮಾತನಾಡಿ ಸೀಹಳ್ಳಿ ಗುರುಮೂರ್ತಿಯವರು ನಮ್ಮೆಲ್ಲರ ಆಯ್ಕೆಗೆ ಕಾರಣಕರ್ತರಾಗಿದು ಅವರ ನಂಬಿಕೆ ಹಾಗೂ ಸುತ್ತ ಏಳೂರಿನ ಜನತೆ ನಂಬಿಕೆಗೆ ಪಾತ್ರವಾಗುವಂತೆ ಸಂಘದ ಅಭಿವೃದ್ಧಿಗೆ ಕೆಲಸ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನೂತನ ನಿರ್ದೇಶಕರುಗಳಾದ ಕೆ.ಎಸ್.ನಾಗರಾಜಮೂರ್ತಿ, ಕೆ.ಎಂ.ಮಹದೇವಸ್ವಾಮಿ, ಎಂ.ಶಾಂತ, ಎಂ.ರವಿ, ಜಯಪ್ಪ, ಮಂಜುಳ,ಲಲಿತಮ್ಮ,ಪುಟ್ಟಸ್ವಾಮಿ,ಶಿವಮಲ್ಲಯ್ಯ ಮುಖಂಡರುಗಳಾದ ಕು.ಶಿ.ಬೃಂಗೇಶ್, ಕೆ.ಸಿ.ವೀರೇಶ್ ,ಕೆ.ಎಸ್. ಶಿವಕುಮಾರಸ್ವಾಮಿ,ಜಗಪತಿ,ಮರಯ್ಯ,ಮಹದೇವು,ಪಾಪಣ್ಣ,ಕುಮಾರ್,ಮಹದೇವ್,ಸಿದ್ದರಾಜು,ನಾಗರಾಜು,ಲಕ್ಮಣ,ಬಸವರಾಜು,ಲಾಯರ್ ಬಸವರಾಜು ಪ್ರಸನ್ನಕುಮಾರ್,ಸೋಮಶೇಖರ್ ,ಮಲ್ಲೇಶಪ್ಪ,ಸಿದ್ದಮಲ್ಲಪ್ಪ,ಮಹೇಶ್ ಕುಮಾರ್, ಶಾಂತಮೂರ್ತಿ ,ಎಂ.ಮಹೇಶ್,ಸುರೇಶ್,ಸೋಮಶೇಖರಯ್ಯ,ಯಜಮಾನ್ ಶಿವಣ್ಣ,ಪುಟ್ಟರಂಗಯ್ಯ,ಮಹದೇವಯ್ಯಮಹೇಶ್,ಮಾದಯ್ಯ ಸೇರಿದಂತೆ ಇತರರಿದ್ದರು.
- ಎಂ.ನಾಗೇಂದ್ರಕುಮಾರ್

[…] ಇದನ್ನು ಓದಿ: ಟಿ.ನರಸೀಪುರ : ಕುರುಬೂರು ಪತ್ತಿನ ಸಹಕಾರ ಸಂಘ… […]