ಟಿ.ನರಸೀಪುರ :ತಾಲ್ಲೂಕಿನ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಚಿಗುರು ಕಡಿಯುವ ಕಾರ್ಯಕ್ರಮ ಮೂಗೂರು ಸಮೀಪದ ಹೊಸಹಳ್ಳಿ ಗ್ರಾಮದಲ್ಲಿನ ಅಮ್ಮ ನವರ ದೇಗುಲದಲ್ಲಿ ಮಂಗಳವಾರ ಬಹಳ ವಿಜೃಂಭಣೆಯಿಂದ ನಡೆಯಿತು.


ಮೂಗೂರಿನ ದೇವಾಲಯದಲ್ಲಿ ಮದ್ಯಾಹ್ನ 3.30 ವೇಳೆಗೆ ಅಮ್ಮ ನವರ ಉತ್ಸವ ಮೂರ್ತಿಯನ್ನು ಹೂವಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ಹೂವಿನ ಪಲ್ಲಕ್ಕಿಯಲ್ಲಿ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ಹೂವಿನ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮುನ್ನ ಮೂಗೂರಿನ ದೇವಾಲಯದಲ್ಲಿ ಬೆಳಿಗ್ಗೆ ಅಭಿಷೇಕ ವಿಶೇಷ ಪೂಜೆಗಳು ಸಾಂಘಿಕವಾಗಿ ನಡೆಯಿತು
ಮಹಿಳೆಯರು ಬಾಯಿ ಬೀಗ ದೀವಟಿಗೆ ಸೇವೆ, ಹಾಗೂ ಕೃಷಿ ರೈತರು ಜಾನುವಾರುಗಳ ಆರೋಗ್ಯ ವೃದ್ಧಿ ಗಾಗಿ ಪ್ರಾರ್ಥಿಸಿ ದೇವಾಲಯದ ಬಳಿಯಿಂದ ಹೊಸಹಳ್ಳಿ ದೇವಾಲಯದವರೆವಿಗೆ ಪಂಜಿನ ಸೇವೆ ಸಲ್ಲಿಸಿದರು.ತಿಬ್ಬಾದೇವಿ, ತ್ರಿಪುರ ಸುಂದರಿ, ಚಿನ್ನದ ರಾಣಿ, ಎಂಬ ನಾಮಾಂಕಿತ ಗಳಿಂದ ಬಿಂಬಿಸುವ ಅಮ್ಮ ನವರನ್ನು ಆಭರಣಗಳಿಂದ ಸಿಂಗರಿಸಿಕೊಂಡು ವಿವಿಧ ಬಗೆಯ ಹೂವಿನಿಂದ ಅಲಂಕರಿಸಿ ಅಂಗಡಿ ಬೀದಿಯ ಮೂಲಕ ಹೊಸಹಳ್ಳಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಅಲ್ಲಿ ನೇರದಿದ್ದ ಅಸಂಖ್ಯಾತ ಭಕ್ತರು ಅಮ್ಮ ನವರಿಗೆ ಜೈ ಕಾರ ಕೂಗಿ ಚಿಗುರು ವೀಕ್ಷಿಸಲು ದೇವಾಲಯದ ಸುತ್ತಲೂ ಜಮಾಯಿಸಿದ್ದರು ಅರ್ಚಕರು ಗುರುವಾರ ಸಂಜೆ 6.40 ರಲ್ಲಿ ಹೊಸಹಳ್ಳಿಯಲ್ಲಿ ನೇರಳೆ ಮರವೇರಿ ರಾತ್ರೋರಾತ್ರಿ ಮೂಡಿದ ಚಿಗುರನ್ನು ಬಿಡಿಸಿದರು. ಈ ಬಾರಿ.12 ಚಿಗುರು ಮೂಡಿದ್ದು ಜನತೆಯಲ್ಲಿ ಹರ್ಷ, ಗ್ರಾಮಕ್ಕೆ ಶುಭ ಎಂಬ ನಂಬಿಕೆ, ಚಿಗುರನ್ನು ಬೆಳ್ಳಿ ತಟ್ಟೆಯಲ್ಲಿ ಹೊಂಬಾಳೆಯಲಿಟ್ಟು ಪೂಜೆ ಸಲ್ಲಿಸಿ ನಂತರ ನೆರೆದಿದ್ದ ಸಾವಿರಾರು ಮಂದಿ ಭಕ್ತರು ಚಿಗುರನ್ನು ವಿಕ್ಷೀಸಿದರು . ಬಳಿಕ ಮೂಗೂರು ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ದೇವಾಲಯಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಚಿಗುರನ್ನು ಪೂಜಿಸಲ್ಪಡುವುದರಿಂದ ಸಂತಾನ ಪ್ರಾಪ್ತಿ ಆರೋಗ್ಯ ಕುಟುಂಬದ ಶಾಂತಿ ವೃದ್ಧಿಸಿದೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ.

ಚಿಗುರಿನ ಹಿನ್ನೆಲೆ: ಮರಸವರುವ ಮನೆತನದ ಅರ್ಚಕರು ರಥೋತ್ಸವದ ಮಧ್ಯರಾತ್ರಿ ಹೊಸದೇಗುಲದಲ್ಲಿರುವ ನೇರಳೆ ಮರಕ್ಕೆ ಪೂಜೆ ಸಲ್ಲಿಸಿ ನೇರಳೆ ಮರದ ಕೊಂಬೆ ಎಲೆಗಳನ್ನು ಬಿಡಿಸಿ ಅದಕ್ಕೆ ಧಾನ್ಯ ಸಮೇತ ಅರಿಶಿನದ ಬಟ್ಟೆ ಕಟ್ಟಿ ಬರುತ್ತಾರೆ ಮಾರನೇ ದಿನ ಅಮ್ಮ ನವರ ಹೂವಿನ ಪಲ್ಲಕ್ಕಿ ಉತ್ಸವ ಹೊಸಹಳ್ಳಿಗೆ ಹೋಗುವ ಮುನ್ನವೇ ಧಾನ್ಯ ಕಟ್ಟಿದ ರೆಂಬೆ ಯಲ್ಲಿ ಚಿಗುರು ಮೂಡಿರುತ್ತದೆ.ಇದು ಮೂಗೂರು ಚಿಗುರು ಎಂಬುದಾಗಿ ಪ್ರಸಿದ್ಧಿ ಪಡೆದಿದೆ. ಈ ಪವಾಡದಿಂದ ಚಿಗುರು ಮೂಡಿರುವ ಸದೃಶ್ಯ ನೋಡಲು ಹೊಸಹಳ್ಳಿ ದೇಗುಲದ ಬಳಿ ಸಹಸ್ರಾರು ಮಂದಿ ನೆರೆದಿದ್ದರು. 9, ಅಥವಾ ,12 ಚಿಗುರು ಬಂದರೆ ಶುಭ ಅಂತಲೂ 7 ಅಥವಾ,11 ಅಶುಭವೆಂದು ಇಂದಿಗೂ ಜನಜನಿತವಾಗಿದೆ. ಈ ಬಾರಿ 9 ಚಿಗುರು ಮೂಡಿದ್ದು ಗ್ರಾಮದ ಒಳಿತಿಗೆ ನಾಂದಿಯಾಗಿದೆ.
ಆಭರಣಗಳಿಂದ ಅಲಂಕೃತ ಹೂವಿನ ಪಲ್ಲಕ್ಕಿ ಉತ್ಸವ ದೊಂದಿಗೆ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಹೊಸಹಳ್ಳಿಗೆ ಬರಮಾಡಿಕೊಳ್ಳಲಾಯಿತು.
-ಎಂ.ನಾಗೇಂದ್ರಕುಮಾರ್
ಇದನ್ನು ಓದಿ –

[…] ಇದನ್ನು ಓದು:ಟಿ.ನರಸೀಪುರ ಭಕ್ತಿಭಾವದಿಂದ ನೆರವೇರಿದ ಮೂಗ… […]