ಟಿ.ನರಸೀಪುರ : ಹೆಚ್ಚುತ್ತಿರುವ ಜನಸಂಖ್ಯೆಯಿಂದ ಪ್ರತಿಯೊಬ್ಬ ಮನುಷ್ಯನಿಗೂ ಅವಶ್ಯಕತೆ ಇರುವ ಮೂಲಭೂತ ಅವಶ್ಯಕತೆಗಳನ್ನು ತಲುಪಿಸಲು ಸಾಧ್ಯವಾಗದಿರುವುದರಿಂದ ಸಮಾಜದಲ್ಲಿ ಅಹಿತಕರ ಘಟನೆ, ಬಡತನ, ದಾರಿದ್ರ್ಯಾ, ಅಸಮಾನತೆಗಳು ಹೆಚ್ಚಾಗುತ್ತಿವೆ ಎಂದು ತಾಲ್ಲೂಕು ಪಂಚಾಯತಿ ಸಂಜೀವಿನಿ ಯೋಜನಾಧಿಕಾರಿ ರೂಪಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಬನ್ನೂರು ಪಟ್ಚಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನನ್ನವ್ವ ಸಾಂಸ್ಕೃತಿಕ ಕಲಾತಂಡ,ಮೇರ ಯುವ ಭಾರತ್ ಮೈಸೂರು ಹಾಗೂ ರಾಷ್ಟ್ರೀಯ ಸೇವಾ ಯೋಜನ ಘಟಕ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ1987ರ ಜುಲೈ 11ರಂದು ವಿಶ್ವದ ಜನಸಂಖ್ಯೆಯು 500 ಕೋಟಿಯನ್ನು ಮೀರಿದ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಆಗುವ ಪರಿಣಾಮಗಳ ಕುರಿತಾಗಿ ಜನಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ವಿಶ್ವ ಜನಸಂಖ್ಯಾ ದಿನಾಚರಣೆ ಮಾಡಲು 1987ರ ಜುಲೈ 11 ರಿಂದ ಪ್ರಾರಂಭಿಸಲಾಯಿತು.ಈ ಕಾರಣಕ್ಕಾಗಿ ನಮ್ಮ ದೇಶದಲ್ಲಿ ಸರ್ಕಾರಗಳು ಒಂದು ಮಗು ಬೇಕು ಎರಡು ಮಗು ಸಾಕು ಎಂಬ ಕಾನೂನನ್ನ ಎಷ್ಟೋ ವರ್ಷಗಳ ಹಿಂದೆಯೇ ತಂದಿದ್ದರು ಅದು ಪಾಲನೆಯಾಗದೇ ದಿನೇ,ದಿನೇ ಜನಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಸೇವಾ ಯೋಜನೆ ಘಟಕದ ಅಧಿಕಾರಿ ಧರಣೇಶ್ ರವರು ಮಾತನಾಡಿ ನಮ್ಮೆಲ್ಲರಿಗೂ ಇರುವುದೊಂದೇ ದೇಶ ಅಲ್ಲಿರುವುದೊಂದೇ ನೈಸರ್ಗಿಕ ಸಂಪತ್ತು . ಹೆಚ್ಚುತ್ತಿರುವ ಜನಸಂಖ್ಯೆಯಿಂದ ಖಂಡಿತವಾಗಿ ದೇಶದ ಮೇಲೆ ಹೊಡೆತ ಬೀಳುವುದು ಎರಡು ಮಾತಿಲ್ಲ ಹಾಗಾಗಿ ಜನಸಂಖ್ಯೆಯ ನಿಯಂತ್ರಣದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮತ್ತು ಗಮನವಿರಬೇಕು ಎಂಬ ಕಾರಣಕ್ಕಾಗಿ ಸರ್ಕಾರವು ಈ ಕುರಿತು ಜನಜಾಗೃತಿ ಕಾರ್ಯಕ್ರಮವನ್ನು ಪ್ರತಿವರ್ಷ ಈ ದಿನ ಆಚರಿಸುತ್ತಾ ಬಂದಿದೆ ಇರುವ ಭೂಮಿ ಎಂದಿಗೂ ಹೆಚ್ಚುವುದಿಲ್ಲ ಆದರೆ ಜನಸಂಖ್ಯೆ ಹೆಚ್ಚಿದಷ್ಟು ಜನರಿಗೆ ಬೇಕಾದ ವ್ಯವಸ್ಥೆಗಳು ಸಿಗದೇ ಹಲವಾರು ತೊಂದರೆಗಳಿಗೆ ಮನುಷ್ಯ ಸಿಲುಕಬೇಕಾಗುತ್ತದೆ ಎಂಬ ಕಾರಣಕ್ಕೆ ಈ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಾಂಶುಪಾಲರಾದ ನಂದೀಶ್ ರವರು ಮಾತನಾಡಿ ಒಂದು ದೇಶಕ್ಕೆ ಮಾನವ ಸಂಪನ್ಮೂಲ ಎಷ್ಟು ಮುಖ್ಯವೋ ಅಷ್ಟೇ ನೈಸರ್ಗಿಕ ಸಂಪನ್ಮೂಲವೂ ಕೂಡ ಅತಿ ಮುಖ್ಯ ಇವೆರಡರಲ್ಲೂ ಏರುಪೇರು ಆದಾಗ ದೇಶದಲ್ಲಿ ಪ್ರತಿಯೊಂದು ವ್ಯವಸ್ಥೆಯು ಅಸ್ತವ್ಯಸ್ತವಾಗುತ್ತದೆ ಹಾಗಾಗಿ ಜನಸಂಖ್ಯಾ ನಿಯಂತ್ರಣ ಅತಿ ಅವಶ್ಯಕವಾದ ಪ್ರಸ್ತುತ ಅನಿವಾರ್ಯವಾಗಿದೆ ಕಾರಣ ಒಂದು ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಗೂ ಆಹಾರ, ಶಿಕ್ಷಣ, ಆರೋಗ್ಯ, ಅತಿ ಮುಖ್ಯವಾದಂತದ್ದು ಇಂತಹ ಸಾಮಾನ್ಯ ಸೌಲಭ್ಯಗಳಿಗೆ ಜನಸಂಖ್ಯಾ ನಿಯಂತ್ರಣ ತಪ್ಪಿದಾಗ ಸಮಸ್ಯೆ ಉಂಟಾಗುವುದು ಖಚಿತ ಆಗಾಗಿ ಸರ್ಕಾರ ಈ ಒಂದು ಕಾರ್ಯಕ್ರಮದ ಜಾಗೃತಿಯನ್ನು ಮೂಡಿಸುತ್ತಿರುವುದು ಉತ್ತಮ ಕಾರ್ಯಕ್ರಮ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ದೇಶಕ್ಕೆ ಪೂರಕವೋ ಮಾರಕವೋ ಎಂಬ ವಿಚಾರವನ್ನು ಕುರಿತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿದ್ದು ಹತ್ತಾರು ವಿದ್ಯಾರ್ಥಿಗಳು ಭಾಗವಹಿಸಿ ಪೂರಕ ಮತ್ತು ಮಾರಕಗಳನ್ನು ಕುರಿತು ವೇದಿಕೆಯಲ್ಲಿ ನೆರದಿದ್ದ ಪ್ರತಿಯೊಬ್ಬರನ್ನು ಬೆರಗುಗೊಳಿಸುವಂತೆ ಮಾತನಾಡಿದರು
ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ ಯಶ್ವಂತ, ದ್ವಿತೀಯ ಸ್ಥಾನ ಗಳಿಸಿದ ಬಿಂದು ಶ್ರೀ,ತೃತೀಯ ಲ್ಥಾನ ಗಳಿಸಿದ ಭವ್ಯಶ್ರೀ ಹಾಗೂ ಸಮಾಧಾನಕರ ಬಹುಮಾನ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಈ ಸಂಧರ್ಭದಲ್ಲಿ ಉಪನ್ಯಾಸಕರುಗಳಾದ ಪ್ರಭು ಸ್ವಾಮಿ,ಪ್ರಕಾಶ್, ಟಿ ನರಸೀಪುರ ತಾಲೂಕು ಪಂಚಾಯಿತಿ ಸಂಜೀವಿನಿ ವಿಭಾಗದ ರೇಖಾ ಉಪಸ್ಥಿತರಿದ್ದರು.
- ಎಂ.ನಾಗೇಂದ್ರ ಕುಮಾರ

[…] ಇದನ್ನು ಓದಿ: ಟಿ.ನರಸೀಪುರ : ಜನಸಂಖ್ಯೆ ಹೆಚ್ಚಳದಿಂದ ಅಸಮಾ… […]