ಟಿ.ನರಸೀಪುರ : ಮಹಾನ್ ಮಾನವತಾವಾದಿಗಳಾದ ಬುದ್ಧ, ಬಸವ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮ ಜಯಂತಿಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸಲು ಪ್ರಗತಿಪರ ಸಂಘಟನೆಗಳು ನಿರ್ಧಾರ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಬಣ ರಹಿತ ಜಿಲ್ಲಾ ಸಂಚಾಲಕ ಸಿ.ಉಮಾಮಹದೇವ ತಿಳಿಸಿದರು.
ಪಟ್ಟಣದ ಸರ್ಕಾರಿ ಅತಿಥಿ ಗೃಹದಲ್ಲಿ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ನಮ್ಮ ಸಂಘಟನೆ ಹಿಂದಿನಿಂದಲೂ ಪ್ರಗತಿ ಪರವಾಗಿ ಹಲವಾರು ಸಮುದಾಯ ಸಂಘಟನೆಗಳನ್ನ ಒಗ್ಗೂಡಿಸಿ ಮಾನವೀಯ ಮೌಲ್ಯಗಳನ್ನು, ಸಮಾನತೆ ಸಾರಿದ ಬುದ್ಧ ಬಸವ ಅಂಬೇಡ್ಕರ್ ಅವರ ಜಯಂತಿಗಳನ್ನು ಪ್ರತ್ಯೇಕವಾಗಿ ಆಚರಿಸುತ್ತಾ ಬಂದಿದ್ದೇವೆ. ಆದರೆ ಈ ಬಾರಿ ಮೂವರು ಮಹಾನ್ ಮಾನವತವಾದಿಗಳ ಜಯಂತಿಯನ್ನು ಒಟ್ಟಿಗೆ ಆಚರಿಸಲು ಪ್ರಗತಿಪರ ಸಂಘಟನೆಗಳು, ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಒಟ್ಟಾಗಿ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿ ಶತಮಾನಗಳ ಹಿಂದೆಯೇ ಈ ನಾಡಿನಲ್ಲಿ ಬುದ್ಧ, ಬಸವ, ಮತ್ತು ಅಂಬೇಡ್ಕರ್ ರವರು ಮಾನವೀಯತೆ, ಸಮಾನತೆ, ಸಹಬಾಳ್ವೆ ಸಂದೇಶಗಳನ್ನು ನೀಡಿದ್ದರು ಇಂದಿಗೂ ಧರ್ಮಗಳ ನಡುವೆ ಕೊಲೆಗಳಾಗುತ್ತಿರುವುದು, ಪ್ರತಿಯೊಂದು ಜೀವರಾಶಿಗಳಿಗೂ ಹಕ್ಕುಗಳನ್ನು ನೀಡಿ, ರಕ್ಷಣೆ ನೀಡಿದಂತಹ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಅಳವಡಿಸಲು ಬಿಡದಂತಹ ಭಾವಚಿತ್ರಕ್ಕೆ ಅಪಚಾರ ಮಾಡುವಂತಹ ಘಟನೆಗಳು ಇಂದಿಗೂ ನಡೆಯುತ್ತಿರುವುದು ಖೇದಕರ ಎಂದು ವಿಷಾದ ವ್ಯಕ್ತಪಡಿಸಿದರು.
ಇಂತಹ ಸನ್ನಿವೇಶದಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅವರ ಜಯಂತಿ ಆಚರಣೆ ಮೂಲಕ ತಿಳಿದುಕೊಳ್ಳುವುದು ಮತ್ತು ಆದರಲ್ಲೂ ಎಲ್ಲಾ ಸಮುದಾಯ, ಧರ್ಮಗಳ ಜನರು ಒಟ್ಟಾಗಿ ಆಚರಣೆ ಮಾಡುವುದು ಈ ಎಲ್ಲಾ ಸಮಸ್ಯೆಗಳಿಗೂ ಆಯುರ್ವೇದಿಕ್ ಔಷಧಿ ತರ ಶಾಶ್ವತ ಪರಿಹಾರ ನೀಡುತ್ತದೆ ಎಂದರು.
ಈ ಹಿಂದಿನ ಸಭೆಯಲ್ಲಿ ತಾಲ್ಲೂಕು ನಾಯಕರ ಸಂಘ, ತಾಲ್ಲೂಕು ಬಾಬು ಜಗಜೀವನ್ ರಾಮ್ ಸಂಘ, ತಾಲೂಕು ಮಡಿವಾಳರ ಸಂಘ, ತಾಲೂಕು ಸವಿತ ಸಮಾಜ ಈ ಜಯಂತಿ ಆಚರಣೆಗೆ ಸಹಭಾಗಿತ್ವ ಘೋಸಿದ್ದಾರೆಂದರು.

ವಕೀಲರ ಸಂಘದ ಅಧ್ಯಕ್ಷರು ಹಾಗೂ ತಾಲೂಕು ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷರಾದ ತೊಟ್ಟವಾಡಿ ಮಹಾದೇವಸ್ವಾಮಿ ಮಾತನಾಡಿ ತಾಲೂಕಿನಲ್ಲಿ ಬುದ್ಧ ಬಸವ ಅಂಬೇಡ್ಕರ್ ಅವರ ಜಯಂತಿಯನ್ನು ಒಂದೇ ವೇದಿಕೆಯಲ್ಲಿ ಮಾಡುತ್ತಿರುವ ಉದ್ದೇಶ ಸಮಾನತೆಯನ್ನ ಸಮಾಜದಲ್ಲಿ ಸಾರಿದ ಬುದ್ಧ ಬಸವ ಅಂಬೇಡ್ಕರ್ ಚಿಂತನೆಗಳನ್ನು ಯುವ ಸಮುದಾಯದಲ್ಲಿ ಬಿತ್ತಬೇಕು ಹಾಗೂ ಜನಾಂಗದ ನಡುವೆ ಇರುವ ವೈಮನಸುಗಳನ್ನು ಹೋಗಲಾಡಿಸಬೇಕು ಎಂಬ ಉದ್ದೇಶದಿಂದ ನಡೆಸುತ್ತಿರುವ ಈ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದರು.
ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸಂಚಾಲಕರು ಹಾಗೂ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಧ್ಯಕ್ಷರು ಆದ ಕಿರಗಸೂರು ಶಂಕರ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷರಾದ ಕರೊಹಟ್ಟಿ ಕುಮಾರಸ್ವಾಮಿ ಅವರುಗಳು ಮಾತನಾಡಿ ಸಮಾಜದಲ್ಲಿ ಸಮಾನತೆ ಸಾರಿದ ಬುದ್ಧ ಬಸವ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಜಾತಿ ಮತ್ತು ಧರ್ಮದ ಬೇದ ಭಾವಗಳನ್ನು ತೊಲಗಿಸೋಣ ಇದಕ್ಕೆ ನಮ್ಮ ಸಂಘಟನೆ ವತಿಯಿಂದ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಅಯ್ಯಪ್ಪ ಸಿದ್ದಲಿಂಗ ಮೂರ್ತಿ, ಹೂವು ಬೆಳೆಗಾರರ ಸಂಘದ ಅಧ್ಯಕ್ಷ ಕೆಬ್ಬೆಹುಂಡಿ ಶಿವಶ್ವಾಮಿ, ದಲಿತ ಸಂಘರ್ಷ ಸಮಿತಿ ಬಣ ರಹಿತ (ರಿ ) ಜಿಲ್ಲಾ ಸಂಘಟನಾ ಸಂಚಾಲಕ ಅಶೋಕ ಕೆ ಎಂ ವಾಡಿ ಹುಣಸೂರು, ಟಿ. ನರಸೀಪುರ ತಾಲ್ಲೂಕು ಸಂಚಾಲಕ ಕೇತುಪುರ ಶಿವಪ್ರಕಾಶ್, ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಮೂಗೂರು ಮಹದೇವಸ್ವಾಮಿ, ಸಿ. ಐ. ಟಿ. ಯು.. ಕಾರ್ಮಿಕರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಪರಶಿವಮೂರ್ತಿ, ಕುರುಬ ಸುಮುದಾಯದ ಮುಖಂಡ ನಾಗೇಂದ್ರ ಯಳವರ ಹುಂಡಿ ನಾಗೇಂದ್ರ, ರೈತ ಸಂಘದ ಇ ರಾಜು, ದಲಿತ ಸಂಘರ್ಷ ಸಮಿತಿಯ ಚಂದಳ್ಳಿ ಮಲ್ಲೇಶ್, ಕುರಿಸಿದ್ದನಹುಂಡಿ ರಾಜು, ಹೆಮ್ಮಿಗೆ ಮಲ್ಲಿಕಾರ್ಜುನ, ಬರಡೀಪುರ ಮಲ್ಲಿಕಾರ್ಜುನ, ಬೀಡನಳ್ಳಿ ಮಹದೇವಮ್ಮ, ಸಿದ್ದರಾಜು, ದಲಿತ ಕಲಾವಿದರ ಸಂಘದ ಉಪಾಧ್ಯಕ್ಷರಾದ ತುಂಬಲಾ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಸಿ. ಬಿ. ಹುಂಡಿ ನಾಗೇಶ್, ಸುಜ್ಜಲೂರು ಮಹದೇವಯ್ಯ, ಸಿದ್ದರಾಜು, ಯರಗನಹಳ್ಳಿಪವನ್ ಕುಮಾರ್ ಸೇರಿದಂತೆ ಇತರರು ಇದ್ದರು.
ಎಂ.ನಾಗೇಂದ್ರಕುಮಾರ್
ವರದಿಗಾರರು

[…] […]