ಟಿ.ನರಸೀಪುರ : ತಾಲ್ಲೂಕಿನ ಬನ್ನೂರು ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ,ತುರಗನೂರು ಸಹಕಾರ ಸಂಘದ ಆಡಳಿತ ಮಂಡಳಿಯ 2025-2030 ನೇ ಸಾಲಿಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಬನ್ನೂರು ಹೋಬಳಿ ಸೀಹಳ್ಳಿ ಗ್ರಾಮದ ಎಸ್ ಕೆ ರಾಜೂಗೌಡ ರವರು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ್ ರವರು ತಿಳಿಸಿದ್ದಾರೆ.
ಇದನ್ನು ಓದಿ: ಟಿ. ನರಸೀಪುರದ ಆಲಗೂಡು ಎಸ್. ಚಂದ್ರಶೇಖರ್ ಅವರಿಗೆ “ಕರ್ನಾಟಕ ಭೂಷಣ” ಪ್ರಶಸ್ತಿ ಗೌರವ
ನೂತನ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕ ಎಸ್ ಕೆ ರಾಜೂಗೌಡ ರವರು ನಾನು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ದೊಡ್ಡಮೂಲಗೂಡು ಸ್ವಾಮಿಗೌಡ,ಬಾಣಗವಾಡಿ ನಾಗೇಶ್, ಮಾದಿಹಳ್ಳಿ ಶಿವರಾಜು, ಬೀಡನಹಳ್ಳಿ ಚೆನ್ನಕೇಶವ, ತುರಗನೂರು ಮಹಾಲಿಂಗೇಗೌಡ, ಸಿದ್ದಪ್ಪ , ನಾಗರಾಜಣ್ಣ ರವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆಂದರು.
– ಎಂ.ನಾಗೇಂದ್ರ ಕುಮಾರ್

[…] […]