ಟಿ.ನರಸೀಪುರ : ದಲಿತ ಸಮುದಾಯದ ಪ್ರಭಾವಿ ಹಿರಿಯ ರಾಜಕಾರಣಿ ನಾಯಕರುಗಳು ಸಮುದಾಯವನ್ನು ಮರೆತು ತಮ್ಮ ಅಧಿಕಾರವನ್ನು ಅನುಭವಿಸುತ್ತಾ, ಸಿದ್ದರಾಮಯ್ಯ ನವರ ಗುಲಾಮಗಿರಿಯಲ್ಲೇ ಮಗ್ನರಾಗಿ ತಾವು ತಮ್ಮ ಮಕ್ಕಳನ್ನು ಮಾತ್ರ ಅಧಿಕಾರಕ್ಕೆ ತಂದು ಸಮುದಾಯವನ್ನು ಮರೆತು ದ್ರೋಹ ಮಾಡುತ್ತಿದ್ದಾರೆಂದು ರಾಜ್ಯ ಪರಿಶಿಷ್ಟ ಸಮುದಾಯದ ರಾಜ್ಯಾದ್ಯಕ್ಷ ಸೋಸಲೆ ಶಶಿಕಾಂತ್ ಗಂಭೀರವಾಗಿ ಆರೋಪಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ಸರ್ಕಾರ ಪ್ರಾರಂಭಿಸಿರುವ ಜಾತಿಗಣತಿ ಮತ್ತು ಸಾಮಾಜಿಕ ಸಮೀಕ್ಷೆಯ ಬಗ್ಗೆ ಪ್ರತಿಯೊಂದು ಸಮುದಾಯದ ಸಚಿವರು ಶಾಸಕರುಗಳು ತಮ್ಮ ಸಮುದಾಯ ಯಾವ ವರ್ಗಕ್ಕೆ ಸೇರಬೇಕು ಯಾವರೀತಿ ಜಾತಿಯನ್ನು ನಮೂದು ಮಾಡಬೇಕು ಎಂಬ ಬಗ್ಗೆ ರಾಜ್ಯ ಮಟ್ಟದ ಸಭೆ ನಡೆಸಿ ಸಮುದಾಯವನ್ನು ಎಚ್ಚರಿಸುತ್ತಿದ್ದಾರೆ ,ದಲಿತ ಬಲಗೈ ಸಮುದಾಯದ ಹಲವಾರು ಸಂಘಟನೆಗಳು ಮತ್ತು ಮುಖಂಡರು ಇದರ ಬಗ್ಗೆ ತಮ್ಮದೇ ರೀತಿ ಹೇಳಿಕೆ ನೀಡುತ್ತಿದ್ದಾರೆ ಆದರೆ ಬಲಗೈ ಸಮುದಾಯ ಯಾವ ಧರ್ಮ ಎಂದು ನಮೂದಿಸಬೇಕು ಜಾತಿ ಬಗ್ಗೆ ಏನೆಂದು ನಮೂದಿಸಬೇಕು,ಇದರಿಂದ ಯಾವ ಸಮಸ್ಯೆಗಳು ಇದೆ ಎಂಬೆಲ್ಲಾ ಬಗ್ಗೆ ಸಮುದಾಯವನ್ನು ಸಂಘಟಿಸಿ ಎಲ್ಲರೂ ಒಂದೇ ರೀತಿಯಲ್ಲಿ ಜಾತಿ ಹೆಸರು ನಮೂದಿಸುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿರುವ ಬಲಗೈ ಸಮುದಾಯದ ಡಾ.ಹೆಚ್.ಸಿ.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ ಖರ್ಗೆ, ನರೇಂದ್ರ ಸ್ವಾಮಿ ಮುಂತಾದ ಹಿರಿಯ ನಾಯಕರು ಸಮುದಾಯವನ್ನು ಮರೆತು ತಮ್ಮ ಅಧಿಕಾರವನ್ನು ಅನುಭವಿಸುತ್ತಾ, ಸಿದ್ದರಾಮಯ್ಯ ನ ಗುಲಾಮಗಿರಿ ಯಲ್ಲೇ ಮಗ್ನರಾಗಿ ತಾವು ತಮ್ಮ ಮಕ್ಕಳನ್ನು ಮಾತ್ರ ಅಧಿಕಾರಕ್ಕೆ ತಂದು ಸಮುದಾಯವನ್ನು ಮರೆತು ದ್ರೋಹ ಮಾಡುತ್ತಿದ್ದಾರೆಂದು ಕಿಡಿ ಕಾರಿದರು.
ಇಂದು ಇತರೆ ಸಮುದಾಯದ ನಾಯಕರು,ಸ್ವಾಮೀಜಿಗಳು ಪಕ್ಷಾತೀತವಾಗಿ ಒಂದಾಗಿ ಸಮುದಾಯದ ಹಿತಕ್ಕಾಗಿ ಸಭೆಗಳನ್ನು ನಡೆಸಿ ಸಮುದಾಯವನ್ನು ಎಚ್ಚರಿಸುತ್ತಿದ್ದಾರೆ ಆದರೆ ಇವರುಗಳು ಸ್ವಾರ್ಥಕ್ಕಾಗಿ ಸಮುದಾಯವನ್ನು ಬಲಿ ಕೊಡುತ್ತಿದ್ದಾರೆ.ಇವರಿಗೆ ಸಮುದಾಯದ ಯುವಕರು ಗುಲಾಮಗಿರಿ ಮಾಡುವ ಮೂಲಕ ಸ್ವಾಭಿಮಾನ ವನ್ನು ಮಾರಿಕೊಂಡಿದ್ದಾರೆ.ಇವರಿಗೆ ಬುದ್ಧಿ ಕಲಿಸುವುದಾದರೂ ಹೇಗೆ…?ಈ ರಾಜಕೀಯ ನಾಯಕರಿಗೆ ನಾಚಿಕೆಯಾಗಬೇಕು ಈ ನಾಯಕರು ಸಮುದಾಯದ ಪರವಾಗಿ ಕಾರ್ಯ ನಿರ್ವಹಿಸಲು ನಾವೇ ಎಚ್ಚರಿಸಬೇಕಾಗಿದೆ ನಮ್ಮ ಸಮುದಾಯದ ಎಲ್ಲರೂ ಇದರ ಬಗ್ಗೆ ಧ್ವನಿ ಮಾಡಬೇಕಾಗಿ ಮಾದ್ಯಮದ ಮೂಲಕ ಮನವಿ ಮಾಡುತ್ತೇನೆಂದರು.
– ನಾಗೇಂದ್ರ ಕುಮಾರ್ . ಎಂ.ಎನ್.
