ಟಿ.ನರಸೀಪುರ : ಭತ್ತ ಖರೀದಿ ಕೇಂದ್ರಗಳನ್ನು ಸರ್ಕಾರ ತೆರೆಯುದೆ ಇರುವುದರಿಂದ ಖಾಸಗಿಯವರು ಕೇಳಿದಷ್ಟು ದರಕ್ಕೆ ರೈತರು ಜಮೀನಿನಲ್ಲೆ ಭತ್ತ ಮಾರಾಟ ಮಾಡುತ್ತಿದ್ದು, ಮದ್ಯವರ್ತಿಗಳು ಹಣ ಮಾಡಿಕೊಳ್ಳುತ್ತಿದ್ದಾರೆ.ರೈತರು ಮತ್ತೆ ಸಾಲ ಮಾಡಿಕೊಳ್ಳಲು ಸರ್ಕಾರವೇ ದಾರಿ ಮಾಡಿಕೊಟ್ಟಂತಾಗುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅದ್ಯಕ್ಷ ಕುರುಬೂರು ಸಿದ್ದೇಶ್ ದೂರಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಹಶಿಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಭತ್ತದ ಕೊಯ್ಲು ಪ್ರಾರಂಭವಾಗಿ ಸುಮಾರು 15 ದಿವಸ ಕಳೆದರೂ ಭತ್ತಕ್ಕೆ ಬೆಂಬಲ ಬೆಲೆಯೊಂದಿಗೆ ಹೆಚ್ಚುವರಿಯಾಗಿ 500/- ರೂ ಪ್ರೋತ್ಸಾಹ ಧನವನ್ನು ಘೋಷಣೆ ಮಾಡುವ ಮೂಲಕ ರಾಜ್ಯ ಸರ್ಕಾರ ತುರ್ತಾಗಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಸಂಘದ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ರವರ ನೇತೃತ್ವದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂcಘ ಸರ್ಕಾರಕ್ಕೆ ಒತ್ತಾಯಿಸುತ್ತಿದೆ ಎಂದರು.
ಈ ವರ್ಷ ಉತ್ತಮ ಮಳೆ ಆಗಿರುವುದರಿಂದ ತಾಲೂಕಿನಾದ್ಯಂತ ರೈತರು ಹೆಚ್ಚು ಭತ್ತವನ್ನು ಬೆಳೆದಿದ್ದಾರೆ, ಕೇಂದ್ರ ಸರ್ಕಾರ ಕ್ವಿಂಟಾಲ್ ಭತ್ತಕ್ಕೆ 2362/- ರೂ ಬೆಂಬಲ ಬೆಲೆ ಘೋಷಿಸಿದೆ.ಆದರೆ ಈ ಬೆಲೆ ರೈತ ವ್ಯವಸಾಯ ಮಾಡಿದ ಖರ್ಚು ಕೂಡ ಬಾರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಅಲ್ಲದೆ ಕೇರಳ, ಒಡಿಸ್ಸಾ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ನೀಡುತ್ತಿರುವಂತೆ ಕ್ವಿಂಟಾಲ್ ಭತ್ತಕ್ಕೆ ಪ್ರೋತ್ಸಾಹ ಧನವಾಗಿ 500/- ರೂ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರಗಳ ಮೂಲಕ ಭತ್ತ ಖರೀದಿ ಮಾಡಿ ರಾಜ್ಯ ಸರ್ಕಾರ ಭತ್ತ ಬೆಳೆಗಾರ ರೈತರ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಇದನ್ನು ಓದಿ: ಟಿ.ನರಸೀಪುರ: ನ 26 ರಂದು ಮೈಸೂರಿನ ಮಾನಸಗಂಗೋತ್ರಿಯ ಲಲಿತಕಲೆಗಳ ನಾಟಕ ಸಭಾಂಗಣದಲ್ಲಿ ಸಂವಿಧಾನ ರಕ್ಷಣೆಗೆ ಜಾಗೃತಿ ಸಮಾವೇಶ
ರೈತರು ಬೆಳೆದ ಬೆಳೆಗಳನ್ನು ಬೆಂಬಲ ಬೆಲೆಗೆ ಮಾರಾಟ ಮಾಡಲು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖರೀದಿ ಕೇಂದ್ರಗಳನ್ನು ತೆರೆದು,ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳು ಇದ್ದರು ಅವು ತೆರೆಯುವ ಮೊದಲೇ ರೈತರು ಸಾಲದ ಭಾದೆಗೆ ಸಿಲುಕಿ ಸ್ವಾಭಿಮಾನಕ್ಕೆ ಅಂಜಿ ಭತ್ತವನ್ನು ಕಡಿಮೆ ಬೆಲೆಗೆ ಗದ್ದೆಯಲ್ಲೆ ಮಾರಾಟ ಮಾಡುತ್ತಿದ್ದಾರೆಂದರು.
ರೈತರು ಸರ್ಕಾರ ಘೋಷಿಸಿರುವ ಕ್ವಿಂಟಾಲ್ ಭತ್ತವನ್ನು 2369/- ರೂ ಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬಾರದು, ಹಾಗೂ ಬಂಡವಾಳ ಶಾಹಿಗಳು, ದಲ್ಲಾಳಿಗಳು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರಿಂದ ಭತ್ತ ಖರೀದಿಸುತ್ತಿದ್ದಾರೆ ಅಂತವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್,ಮಹಿಳಾ ತಾಲೂಕ ಅಧ್ಯಕ್ಷೆ ಮುಡುಕನಪುರ ರೂಪ,ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಸಾದ್ ನಾಯಕ್,ಕುರುಬೂರು ಪ್ರದೀಪ್,ಕರುಹಟ್ಟಿ ಉಮೇಶ್,ರಾಜೇಶ್ ಯಾಕನೂರು,ಕುರುಬರು ಗೌರಿಶಂಕರ್ ,ರಾಜೇಂದ್ರ ಬನಹಳ್ಳಿ ಹುಂಡಿ,ಹೆಗ್ಗೂರ್ ರಂಗರಾಜ್, ಮಂಟೇಸ್ವಾಮಿ,ರವಿ,ಯೋಗೇಶ್,ಕೆಜಿ ಗುರುಸ್ವಾಮಿ,ವಾಚ್ ಕುಮಾರ್, ಸೋಮಶೇಖರ್ ಹಾಗೂ ವೀರೇಶ್ ಇದ್ದರು.
- ಎಂ.ನಾಗೇಂದ್ರಕುಮಾರ್
