ಟಿ.ನರಸೀಪುರ : ತಾಲ್ಲೂಕು ಮಟ್ಟದ ಕ್ರೀಡಾಕೂಟಗಳಲ್ಲಿ ಸಮಗ್ರ ಪ್ರಶಸ್ತಿಗಳನ್ನು ಪಡೆದುಕೊಂಡು ಚಾಂಪಿಯನ್ ಪಟ್ಚ ಅಲಂಕರಿಸಿದ ತಲಕಾಡು ಹೋಬಳಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ತಾಲ್ಲೂಕಿನ ತಲಕಾಡು ಪಟ್ಟಣದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದಲ್ಲಿ ಆಯೋಜಿಸಿದ್ದ ಹಲವು ಕ್ರೀಡಾಕೂಟಗಳಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡು ಚಾಂಪಿಯನ್ ಪಟ್ಚ ಅಲಂಕರಿಸಿದ ಹಿನ್ನೆಲೆಯಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾದ್ಯಕ್ಷರಾದ ನರಸಿಂಹ ಮಾದನಾಯಕ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೋಭಾ ಮಲ್ಲಣ್ಣಿ ಹಾಗೂ ಕಾಲೇಜಿನ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸಿಹಿ ವಿತರಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾದ್ಯಕ್ಷರಾದ ನರಸಿಂಹ ಮಾದನಾಯಕ ಮಾತನಾಡಿ ನಮ್ಮ ತಲಕಾಡು ಕಾಲೇಜು ವಿದ್ಯಾರ್ಥಿಗಳು ಹಿಂದೆಂದೂ ಮಾಡಿರದ ಸಾಧನೆ ಮಾಡಿ ಪೋಷಕರು,ಶಿಕ್ಷಕರು ಹಾಗೂ ತಲಕಾಡಿಗೆ ಕೀರ್ತಿ ತಂದಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಗೆದ್ದು ರಾಜ್ಯ, ಅಂತರರಾಜ್ಯ ಹಾಗೂ ದೇಶ ಮಟ್ಟದಲ್ಲಿ ಹೆಸರು ಮಾಡಬೇಕೆಂದು ಶುಭ ಹಾರೈಸಿದರು.
ತಲಕಾಡು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶೋಭಾ ಮಲ್ಲಣ್ಣಿ ಮಾತನಾಡಿ ನಮ್ಮ ತಲಕಾಡು ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ನೋಡಿ ಮನಸ್ಸು ತುಂಬಿದೆ.ಹಲವಾರು ವರ್ಷಗಳ ಕನಸನ್ನು ಕ್ರೀಡಾ ಪಟುಗಳು ನನಸು ಮಾಡಿದ್ದಾರೆ.ಮುಂದೆ ಇನ್ನೂ ಹೆಚ್ಚಿನ ಪ್ರಶಸ್ತಿಗಳನ್ನು ಗೆದ್ದು ರಾಜ್ಯ ಮಟ್ಟದಲ್ಲಿ ಹೆಸರು ಮಾಡಲು ಅವರಿಗೆ ಉತ್ತಮ ತರಬೇತಿಯ ಅವಶ್ಯಕತೆ ಇದ್ದು ಕಾಲೇಜಿನ ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಕರು ಆದ್ಯತೆ ನೀಡಿ ರಾಷ್ಟ್ರ ಮಟ್ಟದಲ್ಲಿ ತಲಕಾಡಿನ ಹೆಸರು ರಾರಾಜಿಸುವಂತೆ ಮಾಡಬೇಕೆಂದರು.

ಪ್ರಾಂಶುಪಾಲರಾದ ನಾಗರತ್ನ ಮಾತನಾಡಿ ವಿದ್ಯಾರ್ಥಿಗಳು ಪ್ರತಿಭಾರಿಯೂ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆಲ್ಲುತ್ತಾ ಕಾಲೇಜಿಗೆ ಕೀರ್ತಿ ತರುತ್ತಿದ್ದಿರಿ ಆದರೀಗ ಚಾಂಪಿಯನ್ ಟ್ರೋಫಿ ಪ್ರಶಸ್ತಿಯ ಪಟ್ಚ ನಮ್ಮ ಕಾಲೇಜಿಗೆ ಬಂದಿರುವುದು ಸಂತಸ ತಂದಿದೆ.ಎಲ್ಲಾ ವಿಭಾಗದ ಆಟೋಟಪಾಠಗಳಲ್ಲಿ ಪದಕ ಗಳಿಸುತ್ತಾ ವಿಜೇತರಾಗಿ ಹೊರ ಹೊಮ್ಮುತ್ತಿದ್ದಾಗ ಪ್ರಾಂಶುಪಾಲೆಯಾಗಿ ನನಗಾದ ಅಪರಿಮಿತ ಸಂತೋಷ ಹೇಳತೀರದ್ದು.ಬೇರೆ,ಬೇರೆ ಕಾಲೇಜಿನ ಅದ್ಯಾಪಕರು ನಮ್ಮ ಶಾಲೆಯ ಕ್ರೀಡಾಪಟುಗಳು ಗಳಿಸದ ಪ್ರಶಸ್ತಿಯನ್ನು ನೋಡಿ ನನ್ನ ಬಳಿ ಬಂದು ನನ್ನನ್ನು ಅಭಿನಂದಿಸುವಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಶೋಭಾ ಮಲ್ಲಣ್ಣಿ,ಕ್ರೀಡಾ ಕಾರ್ಯದರ್ಶಿ ಎಲ್.ಪಿ.ಮಲ್ಲೇಶ್,ಉಪನ್ಯಾಸಕರುಗಳಾದ ಟಿ.ಎಸ್.ಅನಸೂಯ,ಎಸ್.ಜಿ.ಸುಧೀರ್,ಟಿ.ಕೆ.ಮಾಲಿನಿ,ಎಸ್.ಪರಶಿವಮೂರ್ತಿ,ಎಸ್.ಆನಂದಕುಮಾರ್,ಜೆ.ಪರಶಿವಮೂರ್ತಿ,ಪುಷ್ಪಲತಾ ಹಾಗೂ ದಿವ್ಯ ಉಪಸ್ಥಿತರಿದ್ದರು.
ಎಂ.ನಾಗೇಂದ್ರಕುಮಾರ್.
