ಟಿ.ನರಸೀಪುರ : ಭಾರತ ದೇಶದಲ್ಲಿ ಮುಸ್ಲಿಂ ದೊರೆಗಳ ದಾಳಿಯಿಂದ ಅನೇಕ ದೇವಸ್ಥಾನಗಳು ಹಾಗೂ ಐತಿಹಾಸಿಕ ಪರಂಪರೆ ಹಿನ್ನಲೆಯುಳ್ಳ ಕಟ್ಟಡಗಳು ನೆಲಸಮವಾಗಿದ್ದು ಅದರ ಹಿನ್ನಲೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಪ್ರಯತ್ನವಾಗಬೇಕಿದೆ ಎಂದು ಮೈಸೂರಿನ ನಾರಿ ಟ್ರಸ್ಟ್ ಸಂಸ್ಥಾಪಕ ಮುರಳೀಧರ್ ತಿಳಿಸಿದರು.
ಇಂದಿನ ಪೀಳಿಗೆಗೆ ನಮ್ಮ ದೇಶ,ರಾಜ್ಯ ಹಾಗೂ ನಮ್ಮ ಊರಿನ ಪಾರಂಪರಿಕ ಸ್ಥಳಗಳ ಬಗ್ಗೆ ಮಾಹಿತಿ ಕೊರತೆ ಇದ್ದು ಅವುಗಳನ್ನು ತಿಳಿಯುವ ಹಾಗೂ ತಿಳಿಸುವ ಪ್ರಯತ್ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಆಗಬೇಕಿದೆ ಎಂದು ನಾರಿ ಟ್ರಸ್ಟ್ ಸಂಸ್ಥಾಪಕರಾದ ಮುರಳೀಧರ್ ತಿಳಿಸಿದರು.

ಪಟ್ಟಣದ ಆಲಗೂಡಿನಲ್ಲಿ ಇರುವ ಪಾರಂಪರಿಕ ಶ್ರೀ ಸಿದ್ದೇಶ್ವರ ದೇವಸ್ಥಾನದ ಸುತ್ತ,ಮುತ್ತ ನಾರಿ ಟ್ರಸ್ಟ್ ಮೈಸೂರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪಾರಂಪರಿಕ ಇಲಾಖೆ ಸಹಯೋಗದಲ್ಲಿ ಪರಂಪರೆ ಕೂಟ ಕಾರ್ಯಕ್ರಮದಡಿಯಲ್ಲಿ ಐತಿಹಾಸಿಕ ಸ್ಮಾರಕ ಸ್ವಚ್ಚತೆ ಮತ್ತು ಸ್ಮಾರಕ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಾ ಇಂದಿನ ಪೀಳಿಗೆಗೆ ನಮ್ಮ ದೇಶ,ರಾಜ್ಯ ಹಾಗೂ ನಮ್ಮ ಊರಿನ ಪಾರಂಪರಿಕ ಸ್ಥಳಗಳ ಬಗ್ಗೆ ಮಾಹಿತಿ ಕೊರತೆ ಇದ್ದು ಅವುಗಳನ್ನು ತಿಳಿಯುವ ಹಾಗೂ ತಿಳಿಸುವ ಪ್ರಯತ್ನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಆಗಬೇಕಿದೆ ಎಂದರು.

ಪಾರಂಪರಿಕ ಇತಿಹಾಸವುಳ್ಳ ಸ್ಥಳಗಳಲ್ಲಿ ಇರುವ ಯಾವುದೇ ಕಲ್ಲುಗಳು ಅವು ನಿಮ್ಮಗಳ ಕಣ್ಣಿಗೆ ಅದು ಬರಿ ಕಲ್ಲು,ಆದರೆ ಆ ಕಲ್ಲಿನಲ್ಲೂ ಒಂದು ಇತಿಹಾಸವಿರುತ್ತದೆ ಅದನ್ನು ತಿಳಿಯುವ ಪ್ರಯತ್ನ ನಾವು ಮಾಡಬೇಕಿದೆ.ವಿದ್ಯಾರ್ಥಿಗಳು ನೂರಾರು ವರ್ಷಗಳ ನಮ್ಮ ದೇಶದ ಇತಿಹಾಸದಲ್ಲಿ ಹುದುಗಿ ಹೋಗಿರುವ ನಮ್ಮ ಪರಂಪರೆಯನ್ನು ತಿಳಿದು ತಿಳಿಸುವ ಪ್ರಯತ್ನ ಮಾಡಬೇಕೆಂದರು.

ನಮ್ಮ ಇತಿಹಾಸದಲ್ಲಿ ಬಹಳಷ್ಟು ಸ್ಥಾನ ಪಲ್ಲಟವಾಗಿವೆ.ಚಾಲುಕ್ಯರು,ಗಂಗರು,ಪಲ್ಲವರು,ಹೊಯ್ಸಳರು ದೇವಸ್ಥಾನಗಳನ್ನು ಹಾಗೂ ಶಿಲ್ಪಕಲೆಗಳನ್ನು ಕೊಡುಗೆ ನೀಡಿದರು.ಆದರೆ ಮುಸ್ಲಿಂ ಆಕ್ರಮಣಕಾರರು ಬಂದು ಇವುಗಳೆಲ್ಲವನ್ನೂ ಹೊಡೆದು ಹಾಕಿದರು.ಮೂರು ವರ್ಷಗಳು ಕಳೆದರು ಅವುಗಳನ್ನು ನಾವು ನಮ್ಮದೆಂದು ತಿಳಿದು ಸರಿ ಮಾಡಿಕೊಳ್ಳುವ ಗೋಜಿಗೆ ಹೋಗಿಲ್ಲದಿರುವುದು ಅತ್ಯಂತ ವಿಷಾದನೀಯ.
– ಮುರಳೀಧರ್, ನಾರಿ ಟ್ರಸ್ಟ್ ಸಂಸ್ಥಾಪಕ,ಮೈಸೂರು
ಇದೇ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಶ್ರಮಾಧಾನ ಮಾಡುವ ಮೂಲಕ ದೇವಸ್ಥಾನದ ಸುತ್ತಲಿನ ಸ್ಥಳವನ್ನು ಸ್ವಚ್ಚಗೊಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಿ.ಸಿ.ನಿಂಗರಾಜು,ಹಿರಿಯ ಉಪನ್ಯಾಸಕರಾದ ಜವರಯ್ಯ, ಉಪನ್ಯಾಸಕರುಗಳಾದ ಮಂಜುನಾಥ್, ವಿಠಲ್,ಮೇಘ ಮಂದಾರ,ಮೇಘ,ಶಂಕರ್,ರಘು ವಜ್ರಮಲೆ ಮಹದೇಶ್ವರ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್, ಆಲಗೂಡು ಶ್ರೀ ಸಿದ್ದೇಶ್ವರ ದೇವಸ್ಥಾನದ ಟ್ರಸ್ಟಿ ಮ್ಯಾನೇಜರ್ ಎಂ.ಚಂದ್ರು,ವಜ್ರಮಲೆ ಮಹದೇಶ್ವರ ಸೇವಾ ಬಳಗದ ಟ್ರಸ್ಟಿಗಳಾದ ಕೃಷ್ಣ,ರಾಜಪ್ಪ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.
– ಎಂ.ನಾಗೇಂದ್ರಕುಮಾರ್
