ಟಿ.ನರಸೀಪುರ :‌ ನಾಡಪ್ರಭು ಜಯಂತಿ ಪೂರ್ವಭಾವಿ ಸಭೆಯಲ್ಲಿ ತಹಶಿಲ್ದಾರ್  ಸೇರಿದಂತೆ ವಿವಿಧ ಇಲಾಖೆ  ಅಧಿಕಾರಿಗಳ ಗೈರು- ಸಭೆಯನ್ನು ಬಹಿಷ್ಕರಿಸಿ ಹೊರನಡೆದ ಮಣಿಕಂಠರಾಜ್ ಗೌಡ 

ಟಿ.ನರಸೀಪುರ: ನಾಡಪ್ರಭು ಕೆಂಪೇಗೌಡರ ಜಯಂತಿ ಪೂರ್ವಭಾವಿ ಸಭೆಗೆ ತಹಶಿಲ್ದಾರ್ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಗೈರಾಗಿದ್ದು, ಸಮುದಾಯ ಮುಖಂಡರಲ್ಲಿ ಅಸಮಾಧಾನ ಉಂಟಾಯಿತು.ಸಭೆಯಲ್ಲಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿದ್ದು, ದಲಿತ ಮುಖಂಡರು ಕೂಡ ಸಭೆ ತ್ಯಜಿಸಿದರು. ಕೊನೆಗೆ, ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಪಿ.ಸ್ವಾಮಿನಾಥ್ ಗೌಡ ನೇತೃತ್ವದಲ್ಲಿ ಸರಳ ಆಚರಣೆಗೇ ಒಪ್ಪಿಗೆ ನೀಡಲಾಯಿತು.