ಟಿ.ನರಸೀಪುರ : ಕೇಂದ್ರ ಸರ್ಕಾರ ಇಂದಿನ ಬಜೆಟ್ ನ್ನಲ್ಲಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದು ರೈತಪೂರಕ ಬಜೆಟ್ ಇದಲ್ಲ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರೈತರ ಅಭಿವೃದ್ಧಿಗೆ ಪೂರಕವಲ್ಲದ ಬಜೆಟ್ ನನ್ನು ನಿರ್ಮಲಾಸೀತರಾಮನ್ ರವರು ಮಂಡಿಸಿದ್ದು ರೈತರ ನಿರೀಕ್ಷೆಗಳು ಹುಸಿಯಾಗಿವೆ.ರೈತ ಬೆಳೆದ ಬೆಳೆಗಳಿಗೆ ಎಂಎಸ್ಪಿ ಖಾತ್ರಿ ಕಾಯ್ದೆಯ ಜಾರಿ ಬಗ್ಗೆ ಕ್ರಮ ಕೈಗೊಂಡಿಲ್ಲ
ಎಮ್ ಎಸ್ ಸ್ವಾಮಿನಾಥನ್ ವರದಿ ಜಾರಿಯ ಬಗ್ಗೆ ಕ್ರಮ ಕೈಗೊಂಡಿಲ್ಲ.ರೈತರ ಸಾಲ ಮನ್ನಾದ ಪ್ರಸ್ತಾಪವಿಲ್ಲ.ಕೃಷಿ ಸಾಲದ ನೀತಿ ರೈತನ ಹೊಲದಲ್ಲಿನ ಕಬ್ಬಿನ ದರದ ಬಗೆ ಪ್ರಸ್ತಾಪವಿಲ್ಲ.ರೈತರ ಬೆಳೆ ವಿಮೆ ನೀತಿಯು ವೈಯಕ್ತಿಕ ವಿಮೆ ರೀತಿ ಜಾರಿಗೆ ತರಬೇಕಾಗಿತ್ತು ರೈತರ ಕೃಷಿ ಉತ್ಪನ್ನಗಳನ್ನು
ವರ್ಷಪೂರ್ತಿ ಖರೀದಿ ಕೇಂದ್ರಗಳ ಆರಂಭಕ್ಕೆ ಕ್ರಮ ಕೈಗೊಂಡಿಲ್ಲ ಎಲ್ಲಾ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ ಬೆಲೆ ಕುಸಿತವಾದಾಗ ಖರೀದಿ ಮಾಡುವ ಯೋಜನೆಯನ್ನು ಪ್ರಕಟಣೆ ಮಾಡಿಲ್ಲ.ಕೇವಲ ತೆಂಗು ಗೋಡಂಬಿ ಶ್ರೀಗಂಧ ಬೆಳೆಗೆ ಮಾತ್ರ ವಿಶೇಷ ಗಮನಹರಿಸಿ ರೈತರ ಮೂಗಿಗೆ ತುಪ್ಪ ಸವರೋ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಅಸಮಾಧಾನ ವ್ಯಕ್ತಪಡಿಸಿದರು.
- ಎಂ.ನಾಗೇಂದ್ರಕುಮಾರ್
