ಟಿ.ನರಸೀಪುರ : ಮೂಗೂರು ಶ್ರೀ ತಿಬ್ಬಾದೇವಿ ರಥೋತ್ಸವಕ್ಕೆ ವಾಟಾಳು ಮಠದ ಶ್ರೀ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ರವರು ಚಾಲನೆ ನೀಡಿದರು.
ತಾಲ್ಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಸ್ಥಳವಾದ ಮೂಗೂರು ಗ್ರಾಮದಲ್ಲಿ ನಡೆಯುವ ಅದ್ದೂರಿ ರಥೋತ್ಸವವು ಸಂಜೆ 4-45 ಕ್ಕೆ ಸ್ವಾಮೀಜಿಗಳು ಹಾಗೂ ಸಚಿವರು ಚಾಲನೆ ನೀಡಿ ಟಿ.ನರಸೀಪುರ ಕ್ಷೇತ್ರ ಹಾಗೂ ಮೂಗೂರು ಗ್ರಾಮ ಸೇರಿದಂತೆ ನಾಡಿನ ಎಲ್ಲಾ ಜನತೆಗೆ ಒಳಿತಾಗಲಿ ಹಾಗೂ ಕಾಲ,ಕಾಲಕ್ಕೆ ಉತ್ತಮ ಮಳೆಯಾಗಿ ರೈತರು ಆರ್ಥಿಕವಾಗಿ ಸದೃಡವಾಗಲೆಂದು ಹಾರೈಸಿದರು.

ಪುರಾಣ ಪ್ರಸಿದ್ಧಿ ಪಡೆದು ಧಾರ್ಮಿಕ ಕ್ಷೇತ್ರ ಎನಿಸಿದ ಇಲ್ಲಿನ ಶ್ರೀ ತ್ರಿಪುರ ಸುಂದರಿ ಅಮ್ಮ ನವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ದಿವ್ಯ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಬಹಳ ವಿಜೃಂಭಣೆಯಿಂದ ನಡೆಯಿತು

ರಥೋತ್ಸವದ ಅಂಗವಾಗಿ ದೇಗುಲವನ್ನು ತಳಿರು ತೋರಣ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಸಾಂಪ್ರದಾಯಿಕವಾಗಿ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು ಮಧ್ಯಾಹ್ನ 3 ಗಂಟಗೆ ಅಲಂಕೃತಗೊಂಡ ಅಮ್ಮ ನವರ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ರಥದ ಮಂಟಪದಲ್ಲಿ ಅಮ್ಮ ನವರನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ತಂದರು.
ಗ್ರಾಮದ ವಿವಿಧ ಸಮುದಾಯದ ಮುಖಂಡರು ರಥದ ಬಳಿ ಜಮಾಯಿಸಿದ ನಂತರ ರಥವು ಮುಖ್ಯ ರಸ್ತೆ, ರಥದ ಬೀದಿಯಲ್ಲಿ ಸಾಗಲು ಸಜ್ಜಾಯಿತು. ನೆರದಿದ್ದ ಅಸಂಖ್ಯಾತ ಭಕ್ತ ಸಮೂಹ ತಿಬ್ಬಾದೇವಿಗೆ ಜೈ ಎಂದು ಜಯಘೋಷಣೆ ಕೂಗುತ್ತಾ ರಥ ಎಳೆದು ಧನ್ಯತೆ ಮೆರೆದರು ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತ ಭಕ್ತರು ಅಮ್ಮ ನವರ ದರ್ಶನ ಪಡೆದರು . ಪ್ರತಿ ವರ್ಷದಂತೆ ಈ ಬಾರಿಯೂ ಮೂಗೂರು ಗೆಳೆಯರ ಬಳಗ ವತಿಯಿಂದ ರಥಕ್ಕೆ ಬೃಹತ್ ಗಾತ್ರದ ಹೂವಿನ ಹಾರ ಅರ್ಪಿಸಿದರು. ಸ್ಥಳದಲ್ಲಿದ್ದ ಮುತ್ತೈದೆ, ನವದಂಪತಿಗಳು, ಭಕ್ತರು ತಮ್ಮ ಇಷ್ಟಾರ್ಥಗಳು ನೆರವೇರಲೆಂದು ಪ್ರಾರ್ಥಿಸಿ ಹಣ್ಣು-ಜವನ ಅರ್ಪಿಸಿದರು. ವರ್ಷದ ಮೊದಲ ಜಾತ್ರೆಗೆ ಈ ಬಾರಿ ರಾಜ್ಯ ನಾನಾ ಭಾಗಗಳಿಂದ ಅಪಾರ ಭಕ್ತರು ಆಗಮನದಿಂದ ಜಾತ್ರಾ ಮಹೋತ್ಸವಕ್ಕೆ ಮತ್ತಷ್ಟು ಮೆರಗು ತಂದಿತು .ಹರಕೆ ಹೊತ್ತ ಭಕ್ತರು ಎಲ್ಲೆಡೆ ಪ್ರಸಾದ ತಯಾರಿಸಿ ವಿತರಿಸಿದರು.

ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜುರವರು ರಥೋತ್ಸವ ದಿನದ ಅನ್ನಸಂತರ್ಪಣೆ ಸೇವಾರ್ಥರಾಗಿ ಸರ್ಕಾರಿ ಶಾಲಾ ಆವರಣದಲ್ಲಿ ರಥೋತ್ಸವಕ್ಕೆ ಆಗಮಿಸುವ ಸಹಸ್ರಾರು ಭಕ್ತಾಧಿಗಳಿಗೆ ಸಿಹಿ ಭೋಜನ ನೀಡುವ ಮೂಲಕ ಭಕ್ತರ ಸೇವೆ ಮಾಡಿದರು.
ರಥೋತ್ಸವಕ್ಕೆ ತಡವಾಗಿ ಆಗಮಿಸಿದ ಸಚಿವರು.ಅಸಮಾಧಾನಗೊಂಡ ಸ್ಥಳೀಯ ಮುಖಂಡರು ಹಾಗೂ ಭಕ್ತಾದಿಗಳು.ವಾಟಾಳು ಶ್ರೀಗಳು ಒಂದು ಗಂಟೆ ಮುಂಚಿತವಾಗಿ ಆಗಮಿಸಿ ಸಚಿವರ ಆಗಮನಕ್ಕೆ ಕಾದಿದ್ದರು.ರಥ ಎಳೆಯುವ ತವಕದಲ್ಲಿದ ಯುವ ಪಡೆ.ಬಿಸಿಲಲ್ಲಿ ನಿಂತ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಕಾದ…ಕಾದು… ಬಸವಳಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಎಂ ಡಿ ಲೋಕೇಶ್ ಮಾಜಿ ಉಪಾಧ್ಯಕ್ಷರಾದ ಮೋಹನ್ ಕುಮಾರ್, ಶಿವು, ಪಾರುಪತ್ಯಗಾರ ಎಂ ಬಿ ಸಾಗರ್,ಎಂ.ಪಿ.ಛಾಯಾಕುಮಾರ್, ಎಂ.ಪಿ.ನಾಗರಾಜು, ಎಂ.ಎಂಜಯಣ್ಣ, ಎಂ.ಪಿ. ಮರಿಸ್ವಾಮಿ, ಮೂಗೂರು ನಂಜುಂಡಸ್ವಾಮಿ, ಎಂ.ಕೆ. ಸಿದ್ದರಾಜು, ಎಂ.ಎಂ.ಜಗದೀಶ್, ಎಂ.ಸಿದ್ದರಾಜು, ರಮೇಶ್ ನಾಯ್ಕ,ಶೇಖರ್,ಉಪನ್ಯಾಸಕ ಕುಮಾರಸ್ವಾಮಿ,ಶಿವಮೂರ್ತಿ,ಕುಮಾರಸ್ವಾಮಿ ಮೋಹನ್,ಪುರಸಭೆ ಮಾಜಿ ಸದಸ್ಯ ಕಿರಣ್ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.
ವರದಿ : ಎಂ ನಾಗೇಂದ್ರ ಕುಮಾರ್

[…] ಟಿ.ನರಸೀಪುರ : ಮೂಗೂರು ಶ್ರೀ ತಿಬ್ಬಾದೇವಿ ರಥ… […]