ಟಿ.ನರಸೀಪುರ : ವಕೀಲರ ಸಂಘದ ಹೋರಾಟಕ್ಕೆ ಪದಾಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ವಕೀಲರು ತಮ್ಮ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಬೆಂಬಲ ಸೂಚಿಸಿದ್ದರ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಡಿಷನಲ್ ಎಫ್.ಐ.ಆರ್. ದಾಖಲಿಸಿರುವುದರಿಂದ ನಮ್ಮ ಮುಷ್ಕರವನ್ನು ವಾಪಸ್ ಪಡೆಯುತ್ತಿದ್ದೇವೆಂದು ವಕೀಲರ ಸಂಘದ ಉಪಾಧ್ಯಕ್ಷ ಶಾಂತನಾಗರಾಜು ತಿಳಿಸಿದರು.
ಪಟ್ಟಣದ ವಕೀಲರ ಸಂಘದ ಸಭಾಂಗಣದಲ್ಲಿ ಕರೆದಿದ್ದ ತುರ್ತು ಸಭೆಯಲ್ಲಿ ಮಾತನಾಡಿ ವಕೀಲರ ಸಂಘದ ಅಧ್ಯಕ್ಷರ ಮೇಲೆ ಫೆ : 4 ಬುಧವಾರದಂದು ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದ ಆಗ ಪೊಲೀಸ್ ಇನ್ಸ್ ಪೆಕ್ಟರ್ ರವರು ನಮ್ಮ ದೂರಿನ ಆಧಾರದಲ್ಲಿ ಕೇಸ್ ದಾಖಲಿಸದ ಹಿನ್ನೆಲೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದ್ದೆವು ಇಂದು BNS 109 ಮತ್ತು ವಕೀಲರ ಖಾಯಿದೆಯ 3 ಮತ್ತು 4 ಕಲಂ ಸೇರಿಸಿ ಅಡಿಷನಲ್ FIR ದಾಖಲಿಸಿರುವ ಕಾರಣ ಮುಷ್ಕರ ವಾಪಸ್ ಪಡೆಯುತ್ತಿದ್ದೇವೆಂದರು.
ವಕೀಲರ ಸಂಘದ ಅಧ್ಯಕ್ಷರಾದ ತೊಟ್ಟವಾಡಿ ಮಹದೇವಸ್ವಾಮಿ ಮಾತನಾಡಿ ನನಗೆ ಆದಂತಹ ಅನ್ಯಾಯವನ್ನು ಕಳೆದ ನಾಲ್ಕು ದಿನಗಳಿಂದ ಪ್ರತಿಭಟಿಸಿ ಹೋರಾಟ ಮಾಡಿದ ನಿಮ್ಮೆಲ್ಲರಿಗೂ ಶಿರಬಾಗಿ ನಮಸ್ಕರಿಸುತ್ತೇನೆ.ವಕೀಲರ ಸಂಘದ ಯಾವುದೇ ಒಬ್ಬ ಸದಸ್ಯರ ಮೇಲೆ ಈ ರೀತಿಯ ಘಟನೆಗಳು ನಡೆದಂತಹ ಸಂದರ್ಭದಲ್ಲಿ ನಮ್ಮ ಒಗ್ಗಟ್ಟು ಹಾಗೂ ಹೋರಾಟ ಹೇಗಿರುತ್ತದೆಂದು ತೋರಿಸಿಕೊಟ್ಟಿದ್ದೇವೆಂದರು.
ಈ ಸಂದರ್ಭದಲ್ಲಿ ಹಿರಿಯ ಹಾಗೂ ಕಿರಿಯ ವಕೀಲರುಗಳು ಹಾಜರಿದ್ದರು.
ವರದಿ : ಎಂ ನಾಗೇಂದ್ರ ಕುಮಾರ್
