ಟಿ.ನರಸೀಪುರ : ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯ ಮಾಹಿತಿಯನ್ನು ನೀಡದೇ ಕಾಟಾಚಾರಕ್ಕೆ ಸಭೆಯನ್ನು ಕರೆದು ಅಪಮಾನಿಸಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಅದ್ದೂರಿಯಾಗಿ ಕೆಂಪೇಗೌಡರವರ ಜಯಂತಿಯನ್ನು ರಾಜ್ಯ ಮಟ್ಟದ ನಮ್ಮ ಸ್ವಾಮೀಜಿಗಳು ಸೇರಿದಂತೆ ಘಟಾನುಘಟಿ ನಾಯಕರುಗಳನೆಲ್ಲಾ ಸೇರಿಸಿ ಆಚರಿಸಲಾಗುವುದೆಂದು ಸೇವಾಶ್ರಯ ಫೌಂಡೇಷನ್ ಸಂಸ್ಥಾಪಕರಾದ ಮಣಿಕಂಠರಾಜ್ ಗೌಡ ಸವಾಲೆಸೆದರು.
ಪಟ್ಟಣದ ಗುರುಭವನದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ತಹಶಿಲ್ದಾರ್ ಸೇರಿದಂತೆ ಹಲವಾರು ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿ ಕೆಂಪೇಗೌಡರಿಗೆ ಅವಮಾನವೆಸಗಿದ್ದಾರೆಂದು ಆರೋಪಿಸಿ ತಾಲ್ಲೂಕು ಆಡಳಿತ ಮಾಡುವ ಈ ಜಯಂತಿಗೆ ನಾವು ಬರುವುದಿಲ್ಲವೆಂದು ಸಭೆಯಿಂದ ಹೊರ ನಡೆದು ಮಾಧ್ಯಮದವರೊಂದಿಗೆ ಮಾತನಾಡಿ ತಾಲ್ಲೂಕಿನಲ್ಲಿ 60 ರಿಂದ 70 ಸಾವಿರ ಜನಸಂಖ್ಯೆ ಇರುವ ನಾವು ಜಯಂತಿಯನ್ನು ಹೇಗೆ ಅದ್ದೂರಿಯಾಗಿ ಆಚರಿಸಬೇಕೆಂದು ತಿಳಿದಿದೆ.ಕಳೆದ ಏಳೆಂಟು ವರ್ಷಗಳಿಂದ ತಾಲ್ಲೂಕು ಆಡಳಿತ ತೇಪೆ ಸವರುವ ಕೆಲಸವನ್ನೇ ಮಾಡುತ್ತಾ ಬಂದಿದೆ.ಮುಂದೆಯೂ ಹೀಗೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.
ನಾಡನ್ನು ಕಟ್ಟಿದ ಕೆಂಪೇಗೌಡರ ಜಯಂತಿಯನ್ನು ಸರಳವಾಗಿ ಆಚರಿಸಿ ಕೈ ತೊಳೆದುಕೊಳ್ಳುವ ತಾಲ್ಲೂಕು ಆಡಳಿತಕ್ಕೆ ಮುಂಬರುವ ದಿನಗಳಲ್ಲಿ ನಮ್ಮ ಸಮುದಾಯದ ನಾಯಕರುಗಳಾದ ಡಿ.ಕೆ.ಶಿವಕುಮಾರ್, ಹೆಚ್.ಡಿ.ಕುಮಾರಸ್ವಾಮಿ,ನಿಖಿಲ್ ಕುಮಾರಸ್ವಾಮಿ,ಶ್ರೀ ನಿರ್ಮಲಾನಂದ ಸ್ವಾಮೀಜಿಗಳು ಸೇರಿದಂತೆ ಸಮುದಾಯದ ಇತರೆ ನಾಯಕರುಗಳನೆಲ್ಲಾ ಕರೆಯಿಸಿ ಜಯಂತಿ ಆಚರಿಸಲಾಗುವುದೆಂದರು.
ನಮ್ಮ ಸಮುದಾಯದ ಜನತೆ ಇದೇ ತಿಂಗಳು 27 ನೇ ತಾರೀಖು ಶುಕ್ರವಾರ ತಾಲ್ಲೂಕು ಆಡಳಿತ ನಡೆಸುವ ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಹಾಜರಾಗಬೇಡಿ ಎಂದು ಮನವಿ ಮಾಡಿದರು.
- ಎಂ.ನಾಗೇಂದ್ರ ಕುಮಾರ್

[…] […]
[…] […]