ಕೊರಟಗೆರೆ : ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ಪ್ರತಿಭೆಗಳಿದ್ದು ಅವುಗಳನ್ನು ಹೊರತರುವ ಪ್ರೋತ್ಸಾಹದ ಕೆಲಸವನ್ನು ನಾವೆಲ್ಲಾರು ಮಾಡಬೇಕಾಗಿದೆ ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಸರ್ಕಾರಿ ಬಾಲಕಿಯರ ಪೌಢಶಾಲೆಯಲ್ಲಿ ಪ್ರಾಥಮಿಕ ಮತ್ತು ಪೌಢಶಾಲಾ ವಿಭಾಗದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯದಲ್ಲಿ ಮುಖ್ಯಅಥಿತಿಯಾಗಿ ಭಾಗವಹಿಸಿ ಮಾತನಾಡಿ ಯಾವುದೇ ವ್ಯಕ್ತಿ ಮಹಾನ್ ವ್ಯಕ್ತಿಯಾಗಿ ರೂಪಗೊಳ್ಳಬೇಕಾದರೆ ಅವನು ಆಧ್ಯಯನ ಶೀಲನಾಗಿ ಗುರಿಯನ್ನು ಇಟ್ಟುಕೊಂಡು ಶಕ್ತಿಯುತವಾಗಿ ಬೆಳೆಯುತ್ತಾ ಗುರುವಿನ ಮಾರ್ಗದರ್ಶನದಲ್ಲಿ ಮುನ್ನುಗಬೇಕು, ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ ಅವರಿಗೆ ಅವಕಾಶ ಕೊರತೆ ಇದ್ದು ಅದನ್ನು ಶಿಕ್ಷಕರು ಪೋಷಕರು ಮನಗೊಂಡು ಅವಕಾಶ ಮಾಡಿಕೊಡಬೇಕು ಎಂದರು.
ಗೃಹ ಸಚಿವರ ವಿಶೇಷ ಅಧಿಕಾರಿ ನಾಗಣ್ಣ ಮಾತನಾಡಿ ಗೃಹ ಸಚಿವರ ಕ್ಷೇತ್ರದಲ್ಲಿ ಉತ್ತಮ ಪ್ರತಿಭೆಗಳಿವೆ ಅವರನ್ನು ಹೊರತರಬೇಕಾಗಿದೆ ಮಕ್ಕಳಲ್ಲಿ ಪ್ರತಿಭೆ ಜೊತೆಯಲ್ಲಿ ಅವರಿಗೆ ಸಂವಿಧಾನ ಅರಿವು ಮಹತ್ವವನ್ನು ತಿಳಿಸಬೇಕು ಸಂವಿಧಾನ ಮುಂದೆ ಎಲ್ಲರೂ ಸಮಾನರು ಮಕ್ಕಳಲ್ಲಿ ಜಾತಿ ಧರ್ಮದ ವಿಷವನ್ನು ಬಿತ್ತಬಾರದು ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಪುಟ್ಟಮಕ್ಕಳು ವರ್ಣರಂಜಿತವಾಗಿ ವಿವಿಧ ವೇಷಗಳನ್ನು ಹಾಕಿ ಮೆರಗು ನೀಡಿದ್ದರು.
ಕಾರ್ಯಕ್ರಮದಲ್ಲಿ ಬಿ.ಇ.ಓ ಫೈರೋಜ್ಬೆಗಮ್, ಕ.ಸಾ.ಪ ಅದ್ಯಕ್ಷ ಈರಣ್ಣ, ರುದ್ರೇಶ್, ವಜೀರ್ಖಾನ್, ಬಿ.ಜಿ.ಹನುಮಂತರಾಯಪ್ಪ, ರಾಧಮ್ಮ, ಮಂಜುನಾಥ್, ತಿಪ್ಪೇಸ್ವಾಮಿ, ಲಕ್ಷ್ಮಿಪುತ್ರ, ಪರಮೇಶ್, ಈಶ್ವರ್, ಹುನುಮಂತರಾಯಪ್ಪ, ಸೇರಿದಂತೆ ಇತರರು ಹಾಜರಿದ್ದರು.
-ಶ್ರೀನಿವಾಸ್ ಕೊರಟಗೆರೆ
